ಗಯಾನಾ: ವೆಸ್ಟ್ ಇಂಡೀಸ್ ವಿರುದ್ಧ ಮಂಗಳವಾರ ನಡೆದ ಮೂರನೇ ಟಿ20 ಪಂದ್ಯದಲ್ಲಿ(West Indies vs India, 3rd T20) ಭಾರತ 7 ವಿಕೆಟ್ಗಳ ಗೆಲುವು ಸಾಧಿಸಿ ಸರಣಿಯನ್ನು ಜೀವಂತವಿರಿಸಿದೆ. ಹಾರ್ದಿಕ್ ಪಾಂಡ್ಯ(Hardik Pandya) ಸಿಕ್ಸರ್(hardik pandya six) ಬಾರಿಸುವ ಮೂಲಕ ಭಾರತಕ್ಕೆ ಗೆಲುವು ಸಾರಿದರು. ಇದೇ ವೇಳೆ ಅವರು ವಿರಾಟ್ ಕೊಹ್ಲಿಯ(virat kohli) ದಾಖಲೆಯೊಂದನ್ನು ಸರಿಗಟ್ಟಿದರು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ವೆಸ್ಟ್ ಇಂಡೀಸ್ 5 ವಿಕೆಟಿಗೆ 159 ರನ್ ಗಳಿಸಿತ್ತು. ಗುರಿ ಬೆನ್ನಟ್ಟಿದ ಭಾರತಕ್ಕೆ ಆರಂಭಿಕ ಆಘಾತ ಎದುರಾಯಿತು. ಪದಾರ್ಪಣ ಪಂದ್ಯವಾಡಿದ ಯಶಸ್ವಿ ಜೈಸ್ವಾಲ್ ಕೇವಲ ಒಂದು ರನ್ಗೆ ಆಟ ಮುಗಿಸಿ ನಿರಾಸೆ ಮೂಡಿಸಿದರು. ಇದರ ಬೆನ್ನಲ್ಲೇ ಶುಭಮನ್ ಗಿಲ್ ಕೂಡ 6 ರನ್ ಗಳಿಸಿ ಪೆವಿಲಿಯನ್ ಹಾದಿ ಹಿಡಿದರು. ಈ ವೇಳೆ ಭಾರತ ಕಳೆದೆರಡು ಪಂದ್ಯಗಳಲ್ಲಿ ಸೋಲು ಕಂಡಂತೆ ಈ ಬಾರಿಯೂ ಸೋಲುತ್ತದೆ ಎನ್ನುವ ಸ್ಥಿತಿ ಎದುರಾಯಿತು. ಈ ವೇಳೆ ಸೂರ್ಯಕುಮಾರ್ ಯಾದವ್(83) ಮತ್ತು ತಿಲಕ್ ವರ್ಮ(49*) ಸ್ಫೋಟಕ ಬ್ಯಾಟಿಂಗ್ ನಡೆಸಿ ತಂಡಕ್ಕೆ ಆಸರೆಯಾದರು.
ಕೊಹ್ಲಿ ದಾಖಲೆ ಸರಿಗಟ್ಟಿದ ಪಾಂಡ್ಯ
ಅಂತಿಮ ಹಂತದಲ್ಲಿ ಹಾರ್ದಿಕ್ ಪಾಂಡ್ಯ ಸಿಕ್ಸರ್ ಬಾರಿಸಿ ತಂಡಕ್ಕೆ ಗೆಲುವು ತಂದು ಕೊಟ್ಟರು. ಈ ಮೂಲಕ ಟಿ20 ಮಾದರಿಯಲ್ಲಿ ತಂಡಕ್ಕೆ ಸಿಕ್ಸರ್ ಬಾರಿಸಿ ಅತಿ ಹೆಚ್ಚು ಗೆಲುವು ತಂದುಕೊಟ್ಟ ವಿರಾಟ್ ಕೊಹ್ಲಿಯ ದಾಖಲೆಯನ್ನು ಸರಿಗಟ್ಟಿದರು. ಉಭಯ ಆಟಗಾರರು ನಾಲ್ಕು ಬಾರಿ ಟಿ20 ಕ್ರಿಕೆಟ್ನಲ್ಲಿ ಸಿಕ್ಸರ್ ಬಾರಿಸಿ ತಂಡಕ್ಕೆ ಜಯ ತಂದುಕೊಟ್ಟಿದ್ದಾರೆ.
ʼಸ್ವಾರ್ಥಿʼ ಅನಿಸಿಕೊಂಡ ಪಾಂಡ್ಯ
ನಾಯಕ ಹಾರ್ದಿಕ್ ಪಾಂಡ್ಯ (Hardik Pandya) ಸಿಕ್ಸ್ ಬಾರಿಸಿ ಪಂದ್ಯ ಗೆಲ್ಲಿಸಿಕೊಟ್ಟರು. ಆದರೆ ಇವರ ಸಿಕ್ಸ್ ಸಹ ಆಟಗಾರನೊಬ್ಬನ ಅರ್ಧಶತಕವನ್ನು ತಪ್ಪಿಸಿತು. ಇದರಿಂದ ಕ್ರೀಡಾಭಿಮಾನಿಗಳು ಕುಪಿತರಾಗಿ ಪಾಂಡ್ಯಗೆ ಸಾಮಾಜಿಕ ಜಾಲತಾಣದಲ್ಲಿ ಕ್ಲಾಸ್ ತೆಗೆದುಕೊಂಡಿದ್ದಾರೆ. ಮಾಜಿ ನಾಯಕ ಎಂ.ಎಸ್ ಧೋನಿಯ (MS Dhoni) ಉದಾರತೆಯನ್ನೂ ಈ ಸಂದರ್ಭದಲ್ಲಿ ಹಲವು ಮಂದಿ ನೆನೆದುಕೊಂಡಿದ್ದಾರೆ.
ಭಾರತ ಗೆಲ್ಲಲು 14 ಬಾಲ್‌ಗಳಲ್ಲಿ 2 ರನ್‌ಗಳು ಬೇಕಾಗಿದ್ದವು. ಪಾಂಡ್ಯ ಜತೆ ಸಹ ಬ್ಯಾಟರ್ ಆಗಿದ್ದ ತಿಲಕ್ ವರ್ಮಾ (Tilak Verma) ಅವರ ಸ್ಕೋರ್ 49 ಆಗಿತ್ತು. ಇನ್ನೊಂದು ರನ್ ಮಾಡಿದ್ದರೆ ಟಿ20ಯಲ್ಲಿ ಎರಡನೇ ಹಾಫ್ ಸೆಂಚುರಿ ಮಾಡಿದ ಹೆಗ್ಗಳಿಕೆ ಈ ಯುವ ಆಟಗಾರನದಾಗುತ್ತಿತ್ತು. ಇನ್ನೂ 7 ವಿಕೆಟ್‌ಗಳು ಕೈಯಲ್ಲಿದ್ದವು. ಹೀಗಾಗಿ ಸೋಲುವ ಭಯವೂ ಇರಲಿಲ್ಲ. ಆದರೆ ಪಾಂಡ್ಯ ಅವರು ರೋವ್‌ಮನ್ ಪೊವೆಲ್ ಅವರ ಎಸೆತದಲ್ಲಿ ನೇರವಾಗಿ ಸಿಕ್ಸರ್ ಬಾರಿಸಿದರು. ಪಾಂಡ್ಯ ಅವರ ಈ ಹೊಡೆತ ಯುವ ಆಟಗಾರ ತಿಲಕ್ ವರ್ಮಾ ಅವರ ಹಾಫ್ ಸೆಂಚುರಿಯ ಸಾಧ್ಯತೆಯನ್ನು ಕಸಿದುಕೊಂಡಿತು. ಹೀಗಾಗಿ, ಭಾರತ ಗೆದ್ದರೂ ಕ್ರೀಡಾಭಿಮಾನಿಗಳು ಮಾತ್ರ ಪಾಂಡ್ಯ ಅವರನ್ನು ಟೀಕಿಸುತ್ತಿದ್ದಾರೆ.
Mast win in a must win!#INDvsWI #INDvWIAdFreeonFanCode pic.twitter.com/NQsoXEU3W6
— FanCode (@FanCode) August 8, 2023
ಇದನ್ನೂ ಒದಿ ind vs wi : ಗೆಲ್ಲಲೇಬೇಕಾದ ಪಂದ್ಯದಲ್ಲಿ ಗೆದ್ದು ಬೀಗಿದ ಭಾರತ ತಂಡ
ಧೋನಿ ನೆನೆದ ಅಭಿಮಾನಿಗಳು
ಅಭಿಮಾನಿಗಳು ಧೋನಿ ಅವರ ಆಟವೊಂದನ್ನು ನೆನಪಿಸಿಕೊಂಡಿದ್ದಾರೆ. 2014ರಲ್ಲಿ ನಡೆದ ಟಿ20 ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಧೋನಿ, ಇಂಥದೊಂದು ಅವಕಾಶವನ್ನು ವಿರಾಟ್ ಕೊಹ್ಲಿಗೆ ಬಿಟ್ಟುಕೊಟ್ಟಿದ್ದರು. ಈ ಪಂದ್ಯದಲ್ಲಿ ಏಳು ಬಾಲುಗಳಲ್ಲಿ ಒಂದು ರನ್ ಪಡೆದು ಭಾರತ ಗೆಲ್ಲಬೇಕಿತ್ತು. ಬ್ಯಾಟಿಂಗ್ ಮಾಡುತ್ತಿದ್ದ ಧೋನಿ ತನ್ನೆಡೆಗೆ ಬಂದ ಬಾಲನ್ನು ಸುಮ್ಮನೆ ಅತ್ತ ತಳ್ಳಿ ಮುಂದಿನ ಎಸೆತ ಎದುರಿಸುವ ಅವಕಾಶವನ್ನು ವಿರಾಟ್ ಕೊಹ್ಲಿಗೆ ಬಿಟ್ಟುಕೊಟ್ಟಿದ್ದರು.