Site icon Vistara News

Hardik Pandya : 18 ದಿನಗಳಲ್ಲಿ 8 ಪಂದ್ಯಗಳನ್ನು ಆಡಲಿದ್ದಾರೆ ಹಾರ್ದಿಕ್ ಪಾಂಡ್ಯ!

Hardik Pandya

ಮುಂಬಯಿ: ಐಪಿಎಲ್ 2023ರ ನಂತರ ಹಾರ್ದಿಕ್ ಪಾಂಡ್ಯ ಮೊದಲ ಬಾರಿಗೆ ಭಾರತ ಮತ್ತು ವಿಂಡೀಸ್ ಏಕದಿನ ಸರಣಿಯೊಂದಿಗೆ ಕ್ರಿಕೆಟ್​ ಕ್ರೀಡಾಂಗಣಕ್ಕೆ ಇಳಿಯಲಿದ್ದಾರೆ. ಭಾರತ ತಂಡದ ಉಪನಾಯಕನಾಗಿರುವ ಅವರು ಕೆರಿಬಿಯನ್ ಗೆ ಆಗಮಿಸಿದ್ದು ಅಭ್ಯಾಸ ಶುರು ಮಾಡಿಕೊಂಡಿದ್ದಾರೆ. ಹಾರ್ದಿಕ್ ಪಾಂಡ್ಯ ಮುಂಬರುವ ಏಷ್ಯಾ ಕಪ್​ ಮತ್ತು ವಿಶ್ವ ಕಪ್​ ತಂಡದಲ್ಲಿ ಭಾರತ ತಂಡಕ್ಕೆ ಆಯ್ಕೆಯಾಗುವುದು ಬಹುತೇಕ ಖಚಿತ. ಇನ್ನು ಮುಂದಿನ ಸರಣಿಯಗಳಲ್ಲಿ ತಮ್ಮ ಫಿಟ್ನೆಸ್ ಪ್ರದರ್ಶನ ಮಾಡಬೇಕಾಗಿದೆ. ಇದೀಗ ವೆಸ್ಟ್​ ಇಂಡೀಸ್ ವಿರುದ್ಧದ ಸರಣಿಯಲ್ಲಿ ಅಡಲು ಆರಂಭಿಸುವ ಮೂಲಕ ಅವರು ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್​ಗೆ ತಮ್ಮ ಸಾಮರ್ಥ್ಯವನ್ನು ಸಾಬೀತು ಮಾಡಬೇಕಾಗಿದೆ.

ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಭಾರತ ತಂಡ 3 ಏಕದಿನ ಹಾಗೂ 5 ಟಿ20 ಪಂದ್ಯಗಳನ್ನಾಡಲಿದೆ. ಟೆಸ್ಟ್ ತಂಡದ ಭಾಗವಾಗಿ ಇರದ ಹಾರ್ದಿಕ್ ಮುಂದಿನ 18 ದಿನಗಳ ವೇಳಾಪಟ್ಟಿಯಲ್ಲಿ ಎಲ್ಲಾ ಪಂದ್ಯಗಳಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಸ್ಟಾರ್ ಆಲ್ರೌಂಡರ್ ಟಿ20 ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದರೆ ಏಕದಿನ ಪಂದ್ಯಗಳಿಗೆ ನಿಯೋಜಿತ ಉಪನಾಯಕರಾಗಿದ್ದಾರೆ. ಒಟ್ಟಾರೆಯಾಗಿ ಅವರು ಎಂಟು ಪಂದ್ಯಗಳಲ್ಲಿ ಆಡಬೇಕಾಗಿದೆ. ಕಳೆದ ಎರಡು ತಿಂಗಳುಗಳಿಂದ ಆಟದಿಂದ ಹೊರಗುಳಿದಿರುವ ಪಾಂಡ್ಯ ಈ ಪ್ರವಾಸದಲ್ಲಿ ಕೆಲವು ಓವರ್​ಗಳ ಬೌಲಿಂಗ್ ಕೂಡ ಮಾಡಬೇಕಾಗುತ್ತದೆ. ಹೀಗಾಗಿ ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡರಲ್ಲೂ ಅವರ ಸಾಮರ್ಥ್ಯ ಪರೀಕ್ಷೆಗೆ ಒಳಪಡಲಿದೆ.

ಭಾರತ ತಂಡದಲ್ಲಿ ವೇಗದ ಬೌಲಿಂಗ್ ಆಲ್​ರೌಂಡರ್​ಗಳ ಕೊರತೆ ಇದೆ. ಹೀಗಾಗಿ ಹಾರ್ದಿಕ್ ಪಾಂಡ್ಯ ಅವರ ಫಿಟ್ನೆಸ್ ಮತ್ತು ಲಭ್ಯತೆ ಅತ್ಯಂತ ಮಹತ್ವದ್ದಾಗಿದೆ. ಅವರು ಐಪಿಎಲ್​ನಲ್ಲಿ ನಿಯಮಿತವಾಗಿ ಬೌಲಿಂಗ್ ಮಾಡಿದ್ದರು. ಆದರೆ ಏಕದಿನ ಪಂದ್ಯಗಳಲ್ಲಿ ಅವರು 10 ಓವರ್​ಗಳನ್ನು ಎಸೆಯುವ ಹೊರೆಯನ್ನು ತೆಗೆದುಕೊಳ್ಳಬಹುದೇ ಎಂದು ನೋಡಬೇಕಾಗಿದೆ. ಕಳೆದ ವರ್ಷ ತಂಡಕ್ಕೆ ಮರಳಿದ ನಂತರ, ಹಾರ್ದಿಕ್ ಆಟದ ಬೇಡಿಕೆಗಳಿಗೆ ಅನುಗುಣವಾಗಿ ತಮ್ಮ ಕೆಲಸದ ಹೊರೆಯನ್ನು ನಿರ್ವಹಿಸಿದ್ದಾರೆ.. ಏಷ್ಯಾ ಕಪ್ ಮತ್ತು 2023 ರ ವಿಶ್ವಕಪ್ ಎರಡರಲ್ಲೂ ಅವರು ಭಾರತಕ್ಕೆ ನಿಯಮಿತವಾಗಿ ಕನಿಷ್ಠ 6-7 ಓವರ್​ಗಳನ್ನು ಎಸೆಯುವ ಅಗತ್ಯವಿದೆ.

ಭಾರತದ ಮಾಜಿ ಆಯ್ಕೆದಾರ ಸಬಾ ಕರೀಮ್ ಅವರು ಭಾರತದ ವಿಶ್ವ ಕಪ್​, ಏಷ್ಯಾ ಕಪ್​ ಯೋಜನೆಗಳ ಕೇಂದ್ರಬಿಂದು ಹಾರ್ದಿಕ್ ಎಂದು ಅಭಿಪ್ರಾಯಪಟ್ಟಿದ್ದಾರೆ. ವೆಸ್ಟ್ ಇಂಡೀಸ್ ಅವರಿಗೆ ಫಿಟ್ನೆಸ್ ಪರೀಕ್ಷಿಸಲು ಮತ್ತು ದೀರ್ಘ ಸ್ಪೆಲ್​ಗಳನ್ನು ಎಸೆಯಲು ಪರಿಪೂರ್ಣ ಅವಕಾಶ ಎಂದು ಹೇಳಿದ್ದಾರೆ.

ವಿಶ್ವಕಪ್​ನಲ್ಲಿ ಭಾರತವು ಅವರನ್ನು (ಹಾರ್ದಿಕ್ ಪಾಂಡ್ಯ) 5 ಅಥವಾ 6 ನೇ ಬೌಲಿಂಗ್ ಆಯ್ಕೆಯಾಗಿ ಪರಿಗಣಿಸುತ್ತಿರುವುದರಿಂದ, ಅವರು 5-6 ಓವರ್​ಗಳನ್ನು ಪೂರ್ತಿಗೊಳಿಸಬಹುದೇ ಎಂದು ನೋಡಲು ಇದು ಉತ್ತಮ ಅವಕಾಶವಾಗಿದೆ ಎಂದು ಕರೀಮ್ ಹೇಳಿದ್ದಾರೆ.

ಇದನ್ನೂ ಓದಿ : Team India : ಬಾರ್ಬಡೋಸ್​ನ ಸಮುದ್ರ ತೀರದಲ್ಲಿ ಮಜಾ ಉಡಾಯಿಸಿದ ಟೀಮ್​ ಇಂಡಿಯಾ ಆಟಗಾರರು

ಹಾರ್ದಿಕ್ ಸಾಕಷ್ಟು ಓವರ್​ಗಳನ್ನು ಪಡೆಯಬಹುದಾದರೂ, ಅವರು ಅದನ್ನು ಪ್ಯಾಕ್ ಮಾಡಿದ ವೇಳಾಪಟ್ಟಿಯಲ್ಲಿ ಮಾಡಬಹುದೇ ಎಂದು ನೋಡಬೇಕಾಗಿದೆ. ಐಪಿಎಲ್​ನಲ್ಲಿ ಹಾರ್ದಿಕ್ ಸ್ಥಿರವಾಗಿ ಬೌಲಿಂಗ್ ಮಾಡಿದ್ದರು. ಆದರೆ ಏಕದಿನ ಪಂದ್ಯಗಳಲ್ಲಿ ಅವರು ಹೆಚ್ಚು ಗಂಟೆಗಳ ಕಾಲ ಮೈದಾನದಲ್ಲಿರಬೇಕಾಗುತ್ತದೆ. ಎರಡು ಪಟ್ಟು ಹೆಚ್ಚು ಓವರ್​​ಗಳನ್ನು ಎಸೆಯಬೇಕಾಗುತ್ತದೆ. ಹೀಗಾಗಿ ವೆಸ್ಟ್ ಇಂಡೀಸ್ ಸರಣಿ ಅವರಿಗೆ ಸಾಮರ್ಥ್ಯ ಪ್ರದರ್ಶನಕ್ಕೆ ಉತ್ತಮ ಅವಕಾಶವಾಗಿದೆ.

Exit mobile version