ನವ ದೆಹಲಿ : ಟೀಮ್ ಇಂಡಿಯಾದಲ್ಲಿ (Team India) ಸದ್ಯ ಎಲ್ಲ ಸ್ಥಾನಗಳಿಗೂ ಭರ್ಜರಿ ಪೈಪೋಟಿ. ಆರಂಭಿಕ ಬ್ಯಾಟರ್, ಮಧ್ಯಮ ಕ್ರಮಾಂಕದ ಆಟಗಾರ ಹಾಗೂ ಸ್ಪಿನ್ ಹಾಗೂ ವೇಗದ ಬೌಲಿಂಗ್ ಎಲ್ಲ ಕಡೆಯೂ ಸ್ಥಾನ ಪಡೆಯಲು ಸಿಕ್ಕಾಪಟ್ಟೆ ರಷ್. ಕೊನೆಯಲ್ಲಿ ನಾಯಕ ಮತ್ತು ಉಪನಾಯಕನ ಸ್ಥಾನಕ್ಕೂ ಸಿಕ್ಕಾಪಟ್ಟೆ ಪೈಪೋಟಿಯಿಎ. ಇಂಥ ಪರಿಸ್ಥಿತಿಯಲ್ಲಿ ಒಬ್ಬ ಆಟಗಾರ ಏನಾದರೂ ಗಾಯಗೊಂಡು ತಂಡಕ್ಕೆ ವಾಪಸಾಗುವಷ್ಟರಲ್ಲಿ ಅವರ ಸ್ಥಾನ ಉಳಿಯುವ ಖಾತರಿಯೇನೂ ಇರುವುದಿಲ್ಲ. ಬೇರೆ ಆಟಗಾರರು ಆ ಸ್ಥಾನ ಕಸಿದುಕೊಂಡಿರುತ್ತಾರೆ. ಅಂಥ ಪರಿಸ್ಥಿತಿ ಕನ್ನಡಿಗ ಕೆ.ಎಲ್ ರಾಹುಲ್‌ಗೆ ಎದುರಾಗಿದ್ದು, ಅವರು ಹಲವು ದಿನಗಳಿಂದ ಭಾರತ ತಂಡದಲ್ಲಿ ಇಲ್ಲದ ಕಾರಣ ಅವರ ಕಾಯಂ ಉಪನಾಯಕ ಸ್ಥಾನವನ್ನು ಹಾರ್ದಿಕ್ ಪಾಂಡ್ಯಗೆ ವಹಿಸಲು ಟೀಮ್ ಇಂಡಿಯಾ ಆಯ್ಕೆ ಸಮಿತಿ ಮುಂದಾಗಿದೆ.
ಈ ಕುರಿತು ಬಿಸಿಸಿಐ ಹಿರಿಯರ ತಂಡದ ಆಯ್ಕೆ ಸಮಿತಿ ಮುಂದೆ ಪ್ರಸ್ತಾಪ ಇಡಲಾಗಿದೆ. ತೊಡೆ ಸಂಧು ನೋವಿನ ಬಳಿಕ ಕೊರೊನಾ ಸೋಂಕಿಗೆ ಒಳಗಾಗಿರುವ ರಾಹುಲ್ ತಂಡಕ್ಕೆ ಲಭ್ಯರಾಗದಿರುವ ಹಿನ್ನೆಲೆಯಲ್ಲಿ ಅವರ ಬದಲಿಗೆ ಪಾಂಡ್ಯಗೆ ಉಪನಾಯಕನ ಪಟ್ಟ ಕಟ್ಟುವುದು ಬಿಸಿಸಿಐ ಯೋಜನೆಯಾಗಿದೆ.
“ಟೀಮ್ ಮ್ಯಾನೇಜ್ಮೆಂಟ್ ಉಪನಾಯಕ ಸ್ಥಾನ ಯಾರಿಗೆ ನೀಡುವುದು ಎಂಬದರ ಕುರಿತು ಚರ್ಚೆ ನಡೆಸುತ್ತಿದೆ. ಈ ವೇಳೆ ಉತ್ತಮ ಫಲಿತಾಂಶಗಳನ್ನು ತಂದುಕೊಟ್ಟಿರುವ ಹಾರ್ದಿಕ್ ಪಾಂಡ್ಯ ಅವರ ಹೆಸರು ಮುನ್ನೆಲೆಗೆ ಬಂದಿದೆ. ಪಾಂಡ್ಯ ಗುಜರಾತ್ ಟೈಟನ್ಸ್ ತಂಡವನ್ನು ಐಪಿಎಲ್‌ನಲ್ಲಿ ಚಾಂಪಿಯನ್ ಪಟ್ಟಕ್ಕೆ ಏರಿಸಿದ್ದಾರೆ. ದಕ್ಷಿಣ ಆಫ್ರಿಕಾ ಹಾಗೂ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಈಗಿನ ಪರಿಸ್ಥಿತಿಗೆ ಆಲ್‌ರೌಂಡರ್ ಒಬ್ಬರನ್ನು ಆಯ್ಕೆ ಮಾಡುವುದು ಉತ್ತಮ ಎನಿಸಿದೆ,” ಎಂದು ಅವರು ಹೇಳಿದರು.
ವಿರಾಟ್ ಕೊಹ್ಲಿ ಗಾಯಗೊಂಡ ಬಳಿಕ ಭಾರತ ತಂಡದ ನಾಯಕತ್ವದಲ್ಲಿ ಪದೇಪದೆ ಬದಲಾವಣೆ ಉಂಟಾಗುತ್ತಿದೆ. ಅಲ್ಲಿಂದ ಬಳಿಕ ಏಳು ನಾಯಕರನ್ನು ಭಾರತ ತಂಡ ನೋಡಿದೆ. ಅದಕ್ಕಿಂತ ಮೊದಲು ರೋಹಿತ್ ಶರ್ಮ ಅವರನ್ನು ಟಿ೨೦ ತಂಡಕ್ಕೆ ನಾಯಕರಾಗಿ ಆಯ್ಕೆ ಮಾಡಿದ್ದರೆ, ಕೆ. ಎಲ್. ರಾಹುಲ್‌ಗೆ ಉಪನಾಯಕನ ಪಟ್ಟ ನೀಡಲಾಗಿತ್ತು. ಆದರೆ, ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯ ಮೊದಲು ಕೆ. ಎಲ್. ರಾಹುಲ್ ಗಾಯಗೊಂಡಿದ್ದರು. ಸರ್ಜರಿ ಮುಗಿಸಿ ವಾಪಸ್ ಬಂದು ವೆಸ್ಟ್ ಇಂಡೀಸ್ ಸರಣಿಗೆ ಸಜ್ಜಾಗುವ ಮೊದಲು ಕೊರೊನಾ ಸೋಂಕಿಗೆ ಒಳಗಾಗಿದ್ದರು. ಹೀಗಾಗಿ ಈ ಪ್ರವಾಸಕ್ಕೂ ಅವರಿಗೆ ಅವಕಾಶ ಸಿಗಲಿಲ್ಲ. ಇನ್ನೇನು ಅವರು ಸಜ್ಜಾಗುವ ಹೊತ್ತಿನಲ್ಲಿ ಉಪನಾಯಕನ ಪಟ್ಟವೂ ಮಿಸ್ ಅಗಲಿದೆ.
ಇದನ್ನೂ ಓದಿ | ಹಾರ್ದಿಕ್ ಪಾಂಡ್ಯ ಯಾಕೆ Team India ನಾಯಕರಾಗಬೇಕು? ಅವರ ಸಾಮರ್ಥ್ಯಗಳೇನು?