ಟ್ರಿನಿಡಾಡ್: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಮೊದಲ ಟಿ20 ಪಂದ್ಯ ಟ್ರಿನಿಡಾಡ್ನ ತರೂಬಾದ ಬ್ರಿಯಾನ್ ಲಾರಾ ಸ್ಟೇಡಿಯಂನಲ್ಲಿ ಗುರುವಾರ (ಆಗಸ್ಟ್ 03) ನಡೆಯಿತು. ಟಾಸ್ ಗೆದ್ದ ವೆಸ್ಟ್ ಇಂಡೀಸ್ ನಾಯಕ ರೋವ್ಮನ್ ಪೊವೆಲ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಪಂದ್ಯಕ್ಕೂ ಮುನ್ನ ನಾಯಕ ಹಾರ್ದಿಕ್ ಪಾಂಡ್ಯ ರಾಷ್ಟ್ರಗೀತೆ ಹಾಡುವಾಗ ಭಾವುಕರಾದರು. ವೇಗದ ಬೌಲಿಂಗ್ ಆಲ್ರೌಂಡರ್ ಕಣ್ಣೀರು ಸುರಿಸಿ ಒರೆಸುತ್ತಿರುವುದು ಟಿವಿ ಕ್ಯಾಮೆರಾಗಳಲ್ಲಿ ದಾಖಲಾದವು.
ಪಾಂಡ್ಯ ಈ ಹಿಂದೆಯೂ ರಾಷ್ಟ್ರಗೀತೆ ಹಾಡುವಾಗ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಿದ್ದಾರೆ. ಆಸ್ಟ್ರೇಲಿಯಾದಲ್ಲಿ ನಡೆದ ಟಿ 20 ವಿಶ್ವಕಪ್ 2022 ರಲ್ಲಿ ಪಾಕಿಸ್ತಾನ ವಿರುದ್ಧ ಭಾರತದ ರೋಮಾಂಚಕ ಗೆಲುವಿನ ನಂತರ ಪಂದ್ಯದ ನಂತರದ ಸಂದರ್ಶನದಲ್ಲಿ ಅವರು ಭಾವುಕರಾಗಿದ್ದರು.
ಮೂರು ಮಾದರಿಗೆ ಪದಾರ್ಪಣೆ ಮಾಡಿದ ಮುಕೇಶ್
ಮುಖೇಶ್ ಕುಮಾರ್ ಅವರ ಜೀವನವು ವೇಗವಾಗಿ ಬದಲಾಗಿದೆ. ಭಾರತ ತಂಡದೊಂದಿಗೆ ವೆಸ್ಟ್ ಇಂಡೀಸ್ಗೆ ಪ್ರಯಾಣಿಸಿದ ನಂತರ ಮತ್ತು ಮುಖೇಶ್ ಕುಮಾರ್ ಈಗ ಕ್ರಿಕೆಟ್ನ ಎಲ್ಲಾ ಮೂರು ಸ್ವರೂಪಗಳೀಗೆ ಪದಾರ್ಪಣೆ ಮಾಡಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ, ಈ ಎಲ್ಲಾ ಸ್ವರೂಪಗಳಲ್ಲಿ ಚೊಚ್ಚಲ ಪಂದ್ಯಗಳು ನಡೆಯುತ್ತಿರುವ ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ನಡೆದಿವೆ ಎಂಬುದು ವಿಶೇಷ.
ಎಡ ತೊಡೆಯ ಗಾಯದಿಂದಾಗಿ ಶಾರ್ದೂಲ್ ಠಾಕೂರ್ ಹೊರಗುಳಿದ ನಂತರ ಮುಖೇಶ್ ಕುಮಾರ್ 2 ನೇ ಟೆಸ್ಟ್ನಲ್ಲಿ ದೀರ್ಘ ಅವಧಿಯ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ್ದರು.. ಮಳೆ ಅಡ್ಡಿಪಡಿಸಿದ ನಂತರ ಪಂದ್ಯವು ಡ್ರಾದಲ್ಲಿ ಕೊನೆಗೊಂಡರೂ, ಮುಕೇಶ್ ಒಂದೆರಡು ವಿಕೆಟ್ಗಳನ್ನು ಪಡೆದಿದ್ದರು. ಕೆನ್ಸಿಂಗ್ಟನ್ ಓವಲ್ನಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಅವರು ಭಾರತಕ್ಕಾಗಿ ಆಡುವ ಮೂಲಕ ಏಕದಿನ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ್ದರು.
ಕೊನೆಯದಾಗಿ ಚುಟುಕು ಕ್ರಿಕೆಟ್ನಲ್ಲಿ ಅವರು ಚೊಚ್ಚಲ ಪಂದ್ಯವನ್ನು ಆಡಿದರು. ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ತಿಲಕ್ ವರ್ಮಾ ಹಾಗೂ ಮುಕೇಶ್ ಕುಮಾರ್ ನೀಲಿ ಬಣ್ಣದ ಟೀಮ್ ಇಂಡಿಯಾ ಜರ್ಸಿ ಧರಿಸಲು ಅವಕಾಶ ಪಡೆದರು.
ಮುಕೇಶ್ ಕುಮಾರ್ ತಮ್ಮ ಚೊಚ್ಚಲ ಟಿ 20ಐ ಪಂದ್ಯದಲ್ಲಿ ನಿರೀಕ್ಷಿಸಿದ ಆರಂಭವಾಗಿರಲಿಲ್ಲ. ಕೆರಿಬಿಯನ್ ತಂಡವು ಸರಣಿಯಲ್ಲಿ ಉತ್ತಮ ಆರಂಭ ಪಡೆಯಲು ಯತ್ನಿಸಿತ್ತು. ಹೀಗಾಗಿ ವಿಂಡೀಸ್ ಬ್ಯಾಟರ್ ಬ್ರೆಂಡನ್ ಕಿಂಗ್ ಮುಖೇಶ್ ಬೌಲಿಂಗ್ನಲ್ಲಿ ಸತತ ಎರಡು ಬೌಂಡರಿಗಳನ್ನು ಬಾರಿಸಿದರು. ಹೀಗಾಗಿ ಮುಖೇಶ್ ಕುಮಾರ್ ತಮ್ಮ ಮೊದಲ ಓವರ್ನಲ್ಲಿ 9 ರನ್ ನೀಡಿದರು.
ಐಪಿಎಲ್ 2023 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ದೊಡ್ಡ ಮೊತ್ತಕ್ಕೆ ಖರೀದಿಸಿದ ನಂತರ ಮುಖೇಶ್ ಕುಮಾರ್ ಅವರ ವೃತ್ತಿಜೀವನವು ವೇಗವಾಗಿ ಸಾಗಿತು. ನಂತರ ಅವರನ್ನು ಭಾರತ ತಂಡಕ್ಕೆ ಸೇರಿಸಿಕೊಳ್ಳಲಾಯಿತು. ಆದರೆ ಬೆಂಚುಗಳನ್ನು ಬೆಚ್ಚಗಾಗಿಸಿದ ನಂತರ ಅವರ ಚೊಚ್ಚಲ ಪಂದ್ಯಗಳಿಗೆ ಅವಕಾಶ ಪಡೆದರು.