Site icon Vistara News

Hardik Pandya : ಡೈವೋರ್ಸ್​ ಗಾಸಿಪ್​ ನಡುವೆ ಹಾರ್ದಿಕ್ ಪಾಂಡ್ಯ ನಾಪತ್ತೆ!

Hardik Pandya

ಬೆಂಗಳೂರು: ನಾಯಕ ರೋಹಿತ್ ಶರ್ಮಾ, ವಿಕೆಟ್​ ಕೀಪರ್​ ರಿಷಭ್ ಪಂತ್ ಮತ್ತು ಆಲ್ರೌಂಡರ್ ಶಿವಂ ದುಬೆ ಸೇರಿದಂತೆ ಭಾರತೀಯ ಕ್ರಿಕೆಟಿಗರ ಮೊದಲ ಗುಂಪು ಅಮೆರಿಕಕ್ಕೆ ಪ್ರಯಾಣಿಸಿದೆ. ಅವರೆಲ್ಲರೂ ಜೂನ್ 1 ರಿಂದ ಆರಂಭವಾಗಲಿರುವ ಐಸಿಸಿ ಟಿ 20 ವಿಶ್ವಕಪ್ 2024 ಗಾಗಿ ಸಿದ್ಧತೆ ಪ್ರಾರಂಭಿಸಿದ್ದಾರೆ. ಅದಕ್ಕೂ ಮೊದಲು ಅವರು ಮುಮಬೈ ವಿಮಾನ ನಿಲ್ದಾಣದ ಮೂಲಕ ಪ್ರಯಾಣಿಸಿದರು. ಜಸ್ಪ್ರೀತ್ ಬುಮ್ರಾ, ಸೂರ್ಯಕುಮಾರ್ ಯಾದವ್, ಕುಲದೀಪ್ ಯಾದವ್, ಅಕ್ಷರ್ ಪಟೇಲ್, ರವೀಂದ್ರ ಜಡೇಜಾ ಮತ್ತು ಮುಖ್ಯ ಕೋಚ್ ರಾಹುಲ್ ದ್ರಾವಿಡ್​ ಕೂಡ ನಿಯೋಗದಲ್ಲಿದ್ದರು. ಆದರೆ, ಹಾರ್ದಿಕ್ ಪಾಂಡ್ಯ (Hardik Pandya ) ಎಲ್ಲಿದ್ದಾರೆ ಎಂಬ ಮಾಹಿತಿ ಇಲ್ಲ.

ವಿರಾಟ್ ಕೊಹ್ಲಿ ಕೂಡ ಮೊದಲ ಗುಂಪಿನೊಂದಿಗೆ ಹೊರಡುತ್ತಾರೆ ಎಂದು ಈ ಹಿಂದೆ ವರದಿಯಾಗಿತ್ತು. ಆದರೆ ಅವರು ವಿಶ್ವಕಪ್​​ಗೆ ತೆರಳುವ ಆಟಗಾರ ಸಂಗಡ ಕಾಣಿಸಿಕೊಂಡಿಲ್ಲ. ಆದರೆ, ಅವರು ತಡವಾಗಿ ಹೋಗುತ್ತಾರೆ ಹಾಗೂ ಅಭ್ಯಾಸ ಪಂದ್ಯದಲ್ಲಿ ಭಾಗಿಯಾಗುವುದಿಲ್ಲ ಎಂಬ ಮಾಹಿತಿ ಬಂದಿದೆ. ಇಷ್ಟೆಲ್ಲ ಆದರೂ ಪಾಂಡ್ಯ ಬಗ್ಗೆ ಯಾರೂ ಮಾತನಾಡುತ್ತಿಲ್ಲ. ಪಾಂಡ್ಯ – ನತಾಶಾ ದಂಪತಿ ಪ್ರತ್ಯೇಕಗೊಂಡಿದ್ದಾರೆ ಎಂಬ ಮಾಹಿತಿ ಹರಡುತ್ತಿರುವ ನಡುವೆಯೇ ಅವರು ನಾಪತ್ತೆಯಾಗಿದ್ದಾರೆ.

ಭಾರತ ತಂಡದ ಮೊದಲ ನಿಯೋಗದ ಆಟಗಾರರು ನ್ಯೂಯಾರ್ಕ್​ಗೆ ತೆರಳುವ ವಿಮಾನ ಹಿಡಿಯುವ ಮೊದಲು ತಂಡವು ದುಬೈಗೆ ಹಾರಲಿದ್ದಾರೆ. ಅಲ್ಲೀಂದ ಯುಎಸ್​ಎಗೆ ಪ್ರಯಾಣ ಮಾಡಿ ಅಭ್ಯಾಸ ಪಂದ್ಯ ಸಮೇತ ವಿಶ್ವ ಕಪ್​ ಗೆಲ್ಲುವ ಹಾದಿಯಲ್ಲಿ ತಮ್ಮ ಶ್ರಮ ವಹಿಸಲಿದ್ದಾರೆ.

ಹಾರ್ದಿಕ್ ಪಾಂಡ್ಯ ಐಪಿಎಲ್​ನಲ್ಲಿ ಉತ್ತಮ ಪ್ರದರ್ಶನ ನೀಡಿಲ್ಲ.. ಆದಾಗ್ಯೂ ಅವರು ವೇಗದ ಬೌಲಿಂಗ್ ಆಲ್​ರೌಂಡರ್ ಆಯ್ಕೆಯಾಗಿ ತಂಡದಲ್ಲಿ ಅವಕಾಶ ಪಡೆದಿದ್ದಾರೆ. ಇದು ಸ್ವಲ್ಪ ಮಟ್ಟಿಗೆ ಚರ್ಚೆಯ ಸಂಗತಿಯಾಯಿತು. ಇದೀಗ ಅವರ ಇರುವಿಕೆ ಪತ್ತೆಯಾಗದ ಕಾರಣ ಹೇಗೆ ಆಡುವರೆಂಬ ಚರ್ಚೆ ಶುರುವಾಗಿದೆ.

ಪಾಂಡ್ಯ ಎಲ್ಲಿ?

ಐಪಿಎಲ್ ಫ್ರಾಂಚೈಸಿ ಮುಂಬೈ ಇಂಡಿಯನ್ಸ್ ಪ್ಲೇಆಫ್​ಗೆ ಪ್ರವೇಶಿಸಲು ವಿಫಲವಾಯಿತು. 10ನೇ ಸ್ಥಾನ ಪಡೆದು ಹೀನಾಯ ಪ್ರದರ್ಶನವೊಂದಿಗೆ ಅಭಿಯಾನ ಅಂತ್ಯಗೊಳಿಸಿತು. ಅಲ್ಲಿಂದ ಬಳಿಕ ಅವರು ಎಲ್ಲಿದ್ದಾರೆ ಎಂಬ ಮಾಹಿತಿ ಇಲ್ಲ. ಐಪಿಎಲ್​ನ 17 ನೇ ಋತುವಿನಲ್ಲಿ ಹಾರ್ದಿಕ್ ಪಾಂಡ್ಯ ದಯನೀಯವಾಗಿ ವಿಫಲರಾದರು. ಎಂಐ ಪಾಯಿಂಟ್ಸ್ ಟೇಬಲ್​ನಲ್ಲಿ ಕೊನೇ ಸ್ಥಾನದಲ್ಲಿತ್ತು. ಆ ವೇಳೆ ಅವರ ಪ್ರದರ್ಶನದ ಬಗ್ಗೆ ಮಾತ್ರ ಚರ್ಚೆನಡೆಯುತ್ತಿತ್ತು. ಇದೀಗ ಅವರ ದಾಂಪತ್ಯ ಜೀವನದ ಬಗ್ಗೆ ಜೋರು ಚರ್ಚೆ ನಡೆಯುತ್ತಿವೆ.

ಇದನ್ನೂ ಓದಿ: Yashasvi Jaiswal : ಚೆನ್ನೈ ಏರ್​ಪೋರ್ಟ್​​ನಲ್ಲಿ ಗೆಳತಿಯೊಂದಿಗೆ ಕಾಣಿಸಿಕೊಂಡ ಯಶಸ್ವಿ ಜೈಸ್ವಾಲ್​; ಇಲ್ಲಿದೆ ವಿಡಿಯೊ

ಹಾರ್ದಿಕ್ ಪಾಂಡ್ಯ ಅಥವಾ ನತಾಶಾ ಈ ಬಗ್ಗೆ ಹೇಳಿಕೆ ನೀಡಿ್ಲ. ಪಾಂಡ್ಯ ತರಬೇತಿಗಾಗಿ ಲಂಡನ್​ಗೆ ಹೋಗಿದ್ದಾರೆ ಮತ್ತು ಅಲ್ಲಿಂದ ನೇರವಾಗಿ ತಂಡ ಸೇರಿಕೊಳ್ಳಲಿದ್ದಾರೆ ಎಂದು ವರದಿಗಳು ಸೂಚಿಸಿವೆ. ಆದರೆ, ಅದಕ್ಕೆ ಒಂದು ಖಾತರಿ ಇಲ್ಲದಾಗಿದೆ. ರಾಜಸ್ಥಾನ್ ರಾಯಲ್ಸ್ ಆಟಗಾರರಾದ ಸಂಜು ಸ್ಯಾಮ್ಸನ್, ಯಜುವೇಂದ್ರ ಚಾಹಲ್, ಅವೇಶ್ ಖಾನ್ ಮತ್ತು ಯಶಸ್ವಿ ಜೈಸ್ವಾಲ್ ಎರಡನೇ ಬ್ಯಾಚ್​​ನಲ್ಲಿ ಹೋಗಲಿದ್ದಾರೆ.

ವಿಶ್ವ ಕಪ್​ಗೆ ಭಾರತ ತಂಡ

ರೋಹಿತ್ ಶರ್ಮಾ (ನಾಯಕ), ಹಾರ್ದಿಕ್ ಪಾಂಡ್ಯ (ಉಪನಾಯಕ), ವಿರಾಟ್ ಕೊಹ್ಲಿ, ಯಶಸ್ವಿ ಜೈಸ್ವಾಲ್, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್, ಸಂಜು ಸ್ಯಾಮ್ಸನ್, ಶಿವಂ ದುಬೆ, ಅಕ್ಷರ್ ಪಟೇಲ್, ರವೀಂದ್ರ ಜಡೇಜಾ, ಯಜುವೇಂದ್ರ ಚಾಹಲ್, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಅರ್ಷ್ದೀಪ್ ಸಿಂಗ್, ಮೊಹಮ್ಮದ್ ಸಿರಾಜ್.

Exit mobile version