ಮುಂಬಯಿ: ಟೀಮ್ ಇಂಡಿಯಾದ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ(Hardik Pandya) ಅವರು ಪತ್ನಿ ನತಾಶಾ ಸ್ಟಾಂಕೋವಿಕ್(Natasa Stankovic) ಅವರಿಗೆ ವಿಚ್ಛೇದನ ನೀಡುವ ಮೂಲಕ ನಾಲ್ಕು ವರ್ಷಗಳ ದಾಂಪತ್ಯ ಜೀವನಕ್ಕೆ ಬ್ರೇಕ್ ಹಾಕಿದ್ದಾರೆ. ಪತ್ನಿಗೆ ವಿಚ್ಛೇದನ ನೀಡಿರುವ ವಿಚಾರವನ್ನು ಪಾಂಡ್ಯ ಗುರುವಾರ ಅಧಿಕೃತ ಪ್ರಕಟನೆಯೊಂದಿಗೆ ತಿಳಿಸಿದ್ದರು. ಇದೀಗ ಪಾಂಡ್ಯ ತನ್ನ ಆಸ್ತಿಯಲ್ಲಿ ಪತ್ನಿಗೆ ಜೀವನಾಂಶವಾಗಿ ಶೇ. 70 ಪ್ರತಿಶತವನ್ನು ಬಿಟ್ಟುಕೊಡಬೇಕು ಎನ್ನುವ ಚರ್ಚೆಗಳು ಸಾಮಾಜಿಕ ಜಾಲತಾಣದಲ್ಲಿ ಶುರುವಾಗಿದೆ.
ತಾಯಿಯ ಹೆಸರಿನಲ್ಲಿ ಆಸ್ತಿ ಮಾಡಿದ ಪಾಂಡ್ಯ
ಹಾರ್ದಿಕ್ ಪಾಂಡ್ಯ ತಮ್ಮ ಎಲ್ಲ ಆಸ್ತಿಯನ್ನು ತಾಯಿಯ ಹೆಸರಿನಲ್ಲಿ ಮಾಡಿಟ್ಟಿದ್ದಾರೆ. ಈ ವಿಚಾರವನ್ನು ಸ್ವತಃ ಅವರೇ ರಿವೀಲ್ ಮಾಡಿದ್ದರು. ಹಿಂದೊಮ್ಮೆ ಸಂದರ್ಶನದಲ್ಲಿ ಮುಕ್ತವಾಗಿ ಮಾತನಾಡಿದ್ದ ಪಾಂಡ್ಯ “ನಾನು ಜಾಹಿರಾತು, ಕ್ರಿಕೆಟ್ ಸೇರಿ ಇನ್ನಿತರ ಮೂಲಗಳಿಂದ ಎಷ್ಟೇ ಹಣ ಸಂಪಾದಿಸಿದರೂ ಕೂಡ ಇದನೆಲ್ಲ ನನ್ನ ಹೆಸರಿನಲ್ಲಿ ಇಟ್ಟಿಲ್ಲ. ನನ್ನ ಬಳಿ ದುಬಾರಿ ಕಾರು, ಬಂಗಲೆ ಇದ್ದರೂ ಕೂಡ ಇದೆಲ್ಲ ನನ್ನ ತಾಯಿಯ ಹೆಸರಿನಲ್ಲಿದೆ. ಹೀಗಾಗಿ ನಾನು ಯಾವುದೇ ಸಮಸ್ಯೆ ಬಂದರೂ ಕೂಡ ಯಾರೀಗೂ ನನ್ನ ಆಸ್ತಿಯಲ್ಲಿ ಶೇ. 50ರಷ್ಟು ಜೀವನಾಂಶ ಕೊಡುವ ಪ್ರಮೇಯವೇ ಬರುವುದಿಲ್ಲ ಎಂದು ಹೇಳಿದ್ದರು.
ಸದ್ಯ ಪಾಂಡ್ಯ ಅವರು ಪತ್ನಿಗೆ ಜೀವನಾಂಶ ನೀಡುವ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿ ಇಲ್ಲ. ಹೀಗಾಗಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಸುದ್ದಿಗಳು ಸುಳ್ಳಾಗಿದೆ. ನತಾಶ ಇದುವರೆಗೆ ಹಾರ್ದಿಕ್ ಅವರಿಂದ ಜೀವನಾಂಶವಾಗಿ ಯಾವುದೇ ರೀತಿಯ ಪಾಲು ಕೇಳಿಲ್ಲ. ಹೀಗಾಗಿ ಪಾಂಡ್ಯ ಮತ್ತು ನತಾಶ ಜೀವನಾಂಶದ ಬಗ್ಗೆ ಹರಿದಾಡುತ್ತಿರುವ ಸುದ್ದಿಯಲ್ಲಿ ಸತ್ಯಾಂಶವಿಲ್ಲ.
“ನಾಲ್ಕು ವರ್ಷಗಳ ಕಾಲ ಒಂದಾಗಿ ಜೀವನ ನಡೆಸಿದ್ದ ನತಾಶಾ ಮತ್ತು ನಾನು ಪರಸ್ಪರ ಬೇರೆಯಾಗಲು ನಿರ್ಧರಿಸಿದ್ದೇವೆ. ನಾವು ನಮ್ಮ ಕೈಲಾದಷ್ಟು ಪ್ರಯತ್ನಿಸಿದ್ದೇವೆ. ಇದು ನಮ್ಮಿಬ್ಬರ ಹಿತಾಸಕ್ತಿಗಾಗಿ ಎಂದು ನಾವು ನಂಬುತ್ತೇವೆ. ಇದು ಕಠಿಣ ನಿರ್ಧಾರವಾಗಿದೆ. ನಾವು ಒಟ್ಟಿಗೆ ಆನಂದಿಸಿದ ಸಂತೋಷ, ಪರಸ್ಪರ ಗೌರವ ಮತ್ತು ಒಡನಾಟವನ್ನು ಹೊಂದಿದ್ದೇವೆ. ಮಗ ನಮ್ಮಿಬ್ಬರ ಜೀವನದ ಕೇಂದ್ರದಲ್ಲಿ ಮುಂದುವರಿಯುತ್ತಾನೆ” ಎಂದು ಬರೆದುಕೊಂಡು ಪಾಂಡ್ಯ ವಿಚ್ಛೇದನವನ್ನು ಖಚಿತಪಡಿಸಿದ್ದರು.
ಮಗ ಯಾರ ಬಳಿ ಇರುತ್ತಾನೆ?
ದಂಪತಿ ಬೇರೆಯಾದ ಬಳಿಕ ಮಗ ಯಾರ ಬಳಿಯಿರುತ್ತಾನೆ ಎಂಬ ಪ್ರಶ್ನೆಗಳಿಗೂ ಪಾಂಡ್ಯ ಮತ್ತು ನತಾಶ ಜಂಟಿ ಹೇಳಿಕೆಯಲ್ಲಿ ಉತ್ತರಿಸಿದ್ದಾರೆ. “ನಾನು ಮತ್ತು ನತಾಶಾ ಇಬ್ಬರೂ ಪುತ್ರ ಅಗಸ್ತ್ಯನನ್ನು ಸಹ-ಪೋಷಕರಾಗಿ ನೋಡಿಕೊಳ್ಳುತ್ತೇವೆ. ಅವನಿಗೆ ಯಾವುದೇ ಕಾರಣಕ್ಕೂ ಯಾವ ಕೊರತೆಯೂ ಆಗದಂತೆ ನಾವಿಬ್ಬರೂ ಸಮನಾಗಿ ಅವನ ಜವಾಬ್ದಾರಿ ಹಂಚಿಕೊಳ್ಳಲಿದ್ದೇವೆ” ಎಂದು ಹೇಳಿದ್ದಾರೆ.
ಕಳೆದ ವರ್ಷ ಫೆ.14 ರಂದು ರಾಜಸ್ಥಾನದ ಉದಯ್‌ಪುರದಲ್ಲಿ ಕ್ರಿಷ್ಚಿಯನ್ ಸಂಪ್ರದಾಯದಂತೆ ಹಾರ್ದಿಕ್ ಮತ್ತು ನತಾಶಾ ಮತ್ತೊಮ್ಮೆ ಅದ್ದೂರಿಯಾಗಿ ಪುನರ್ ವಿವಾಹವಾಗಿದ್ದರು. ಕುಟುಂಬಸ್ಥರು ಮತ್ತು ಗೆಳೆಯರ ಸಮ್ಮುಖದಲ್ಲಿ ಮತ್ತೊಮ್ಮೆ ವಿವಾಹವಾಗಿದ್ದರು. ಇದಕ್ಕೂ ಮುನ್ನ ಈ ಜೋಡಿ 2020ರಲ್ಲೇ ರಿಜಿಸ್ಟರ್ ರೀತಿಯಲ್ಲಿ ವಿವಾಹವಾಗಿದ್ದರು.