ನ್ಯೂಯಾರ್ಕ್: ಟಿ20 ವಿಶ್ವಕಪ್(T20 world cup 2024) ಟೂರ್ನಿಗಾಗಿ ಈಗಾಗಲೇ ನ್ಯೂಯಾರ್ಕ್(eam India in New York) ತಲುಪಿರುವ ಟೀಮ್ ಇಂಡಿಯಾದ(Team India ) ಮೊದಲ ಬ್ಯಾಚ್ ಅಭ್ಯಾಸ ಆರಂಭಿಸಿದೆ. ಆಟಗಾರರು ಅಭ್ಯಾಸ ನಿರತ ವಿಡಿಯೊವನ್ನು ಬಿಸಿಸಿಐ ತನ್ನ ಅಧಿಕೃತ ಟ್ವಿಟರ್ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದೆ. ಕೌಟುಂಬಿಕ ಸಮಸ್ಯೆಯನ್ನು ಬದಿಗೊತ್ತಿ ಹಾರ್ದಿಕ್ ಪಾಂಡ್ಯ(Hardik Pandya) ಕೂಡ ತಂಡದ ಯಶಸ್ಸಿಗಾಗಿ ಟಿ20 ಆಡಲು ಸಜ್ಜಾಗಿದ್ದಾರೆ. ಲಂಡನ್ನಿಂದ ನೇರವಾಗಿ ನ್ಯೂಯಾರ್ಕ್ಗೆ ಬಂದಿಳಿದ ಪಾಂಡ್ಯ ಟೀಮ್ ಇಂಡಿಯಾ ಜತೆ ಅಭ್ಯಾಸ ನಡೆಸಿದ್ದಾರೆ.
ಟೀಮ್ ಇಂಡಿಯಾದ ದ್ವಿತೀಯ ಬ್ಯಾಚ್ ಇಂದು ನ್ಯೂಯಾರ್ಕ್ಗೆ ತಲುಪಲಿದೆ. ಗುರುವಾರದಿಂದ ಈ ಆಟಗಾರರು ಕೂಡ ಅಭ್ಯಾಸ ಆರಂಭಿಸಲಿದ್ದಾರೆ. ವಿರಾಟ್ ಕೊಹ್ಲಿ ಮತ್ತು ಸಂಜು ಸ್ಯಾಮ್ಸನ್ ತಮ್ಮ ವೈಯಕ್ತಿಕ ಕಾರಣಗಳಿಂದ ತಂಡ ಸೇರುವುದು ಕೊಂಚ ತಡವಾಗಲಿದೆ ಎಂದು ಬಿಸಿಸಿಐ ಈಗಾಗಲೇ ತಿಳಿಸಿದೆ. ಕೊಹ್ಲಿ ಬಾಂಗ್ಲಾದೇಶ ವಿರುದ್ಧದ ಏಕೈಕ ಅಭ್ಯಾಸ ಪಂದ್ಯಕ್ಕೂ ಅಲಭ್ಯರಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಕೊಹ್ಲಿ ಮೇ 30ಕ್ಕೆ ಚಾರ್ಟರ್ ವಿಮಾನದಲ್ಲಿ ಪ್ರಯಾಣಿಸಲಿದ್ದಾರೆ ಎನ್ನಲಾಗಿದೆ.
ಹಾರ್ದಿಕ್ ಪಾಂಡ್ಯ(Hardik Pandya) ಅವರು ಪತ್ನಿ, ಸರ್ಬಿಯಾದ ನಟಿ ನತಾಶಾ ಸ್ಟಾನ್‌ಕೋವಿಕ್(Natasa Stankovic) ಅವರಿಗೆ ವಿಚ್ಛೇದನ ನೀಡಲಿದ್ದಾರೆ ಎಂಬ ಮಾತುಗಳು ಕೆಲದಿನಗಳಿಂದ ಭಾರೀ ಚರ್ಚೆಗೆ ಗ್ರಾಸವಾಗಿದೆ. ಜತೆಗೆ ವಿಚ್ಛೇದನ(Hardik Pandya and Natasa Stankovic divorce) ಪ್ರಕ್ರಿಯೆಯ ಭಾಗವಾಗಿ, ಹಾರ್ದಿಕ್ ಪಾಂಡ್ಯ ಅವರು ತಮ್ಮ ಆಸ್ತಿಯಲ್ಲಿ ಶೇ. 70 ರಷ್ಟು ಭಾಗವನ್ನು ನತಾಶಾಗೆ ವರ್ಗಾಯಿಸಬೇಕಿದೆ ಎನ್ನಲಾಗಿದೆ. ಈ ಎಲ್ಲ ಮಾತುಗಳ ಮಧ್ಯೆಯೂ ಪಾಂಡ್ಯ ದೇಶದ ಕರ್ತವ್ಯಕ್ಕೆ ಹಾಜರಾಗಿದ್ದು ಟಿ20 ವಿಶ್ವಕಪ್ಗೆ ಅಭ್ಯಾಸ ಆರಂಭಿಸಿದ್ದಾರೆ. ಇದಕ್ಕೆ ಅನೇಕ ನೆಟ್ಟಿಗರು ಪಾಂಡ್ಯಗೆ ಮೆಚ್ಚುಗೆ ಸೂಚಿಸಿದ್ದಾರೆ.
ಇದನ್ನೂ ಓದಿ T20 World Cup : ಭಾರತ- ಪಾಕ್ ಪಂದ್ಯ ಐಸಿಸ್ ಉಗ್ರರಿಂದ ಬಾಂಬ್ ಬೆದರಿಕೆ
ಭಾರತ ತನ್ನ ಮೊದಲ ಲೀಗ್ ಪಂದ್ಯವನ್ನು ಜೂನ್ 5 ರಂದು ಐರ್ಲೆಂಡ್ ವಿರುದ್ಧ ಆಡಲಿದೆ. ಭಾರತವು ತನ್ನ ಗುಂಪು ಹಂತದ ಎಲ್ಲಾ ಪಂದ್ಯಗಳನ್ನು ಅಮೆರಿಕದಲ್ಲೇ ಆಡಲಿದೆ. ಲೀಗ್ ಮುಕ್ತಾಯದ ಬಳಿಕ ಮುಂದಿನ ಹಂತಕ್ಕೆ ಅರ್ಹತೆ ಪಡೆದರೆ, ಸೂಪರ್ 8 ಪಂದ್ಯಗಳನ್ನು ಸಹ ಇಲ್ಲೇ ಆಡಲಿದೆ.
ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಹಾರ್ದಿಕ್ ಪಾಂಡ್ಯ (ಉಪನಾಯಕ), ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಶಿವಂ ದುಬೆ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಯುಜ್ವೇಂದ್ರ ಚಾಹಲ್, ಅರ್ಶದೀಪ್ ಸಿಂಗ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್. ಮೀಸಲು ಆಟಗಾರರು ಶುಭಮನ್ ಗಿಲ್, ರಿಂಕು ಸಿಂಗ್, ಖಲೀಲ್ ಅಹ್ಮದ್ ಮತ್ತು ಅವೇಶ್ ಖಾನ್.
ಭಾರತದ ಪಂದ್ಯಗಳು
ದಿನಾಂಕ | ಎದುರಾಳಿ | ಸ್ಥಳ |
ಜೂನ್ 5 | ಐರ್ಲೆಂಡ್ | ನ್ಯೂಯಾರ್ಕ್ |
ಜೂನ್ 9 | ಪಾಕಿಸ್ತಾನ | ನ್ಯೂಯಾರ್ಕ್ |
ಜೂನ್ 12 | ಅಮೆರಿಕ | ನ್ಯೂಯಾರ್ಕ್ |
ಜೂನ್ 15 | ಕೆನಡಾ | ಫ್ಲೋರಿಡಾ |