Site icon Vistara News

Hardik Pandya: ಪತ್ನಿಗೆ ಶೇ.70ರಷ್ಟು ಆಸ್ತಿ ವರ್ಗಾಯಿಸಲು ಮುಂದಾದ ಹಾರ್ದಿಕ್​ ಪಾಂಡ್ಯ; ಶೀಘ್ರದಲ್ಲೇ ವಿಚ್ಛೇದನ!

Hardik Pandya

hardik-pandya-hardik-pandyas-70-property-to-be-transferred-to-natasa-stankovic-in-case-of-divorce

ಮುಂಬಯಿ: ಟೀಮ್​ ಇಂಡಿಯಾದ ಸ್ಟಾರ್ ಆಲ್​ರೌಂಡರ್​ ಹಾರ್ದಿಕ್ ಪಾಂಡ್ಯ(Hardik Pandya) ಅವರು ಪತ್ನಿ, ಸರ್ಬಿಯಾದ ನಟಿ ನತಾಶಾ ಸ್ಟಾನ್‌ಕೋವಿಕ್‌(Natasa Stankovic) ಅವರಿಗೆ ವಿಚ್ಛೇದನ ನೀಡಲಿದ್ದಾರೆ ಎಂಬ ಸುದ್ದಿಯ ಮಧ್ಯೆ ಇದೀಗ ಮತ್ತೊಂದು ಬೆಳವಣಿಗೆ ನಡೆದಿದೆ. ವಿಚ್ಛೇದನ(Hardik Pandya and Natasa Stankovic divorce) ಪ್ರಕ್ರಿಯೆಯ ಭಾಗವಾಗಿ, ಹಾರ್ದಿಕ್ ಪಾಂಡ್ಯ ಅವರು ತಮ್ಮ ಆಸ್ತಿಯಲ್ಲಿ ಶೇ. 70 ರಷ್ಟು ಭಾಗವನ್ನು ಈಗಾಗಲೇ ನತಾಶಾಗೆ ವರ್ಗಾಯಿಸಿದ್ದಾರೆ ಎನ್ನಲಾಗಿದೆ. ಸದ್ಯ ನತಾಶಾ ಲಂಡನ್​ನಲ್ಲಿ ನೆಲೆಸಿದ್ದಾರೆ ಎಂದು ಹೇಳಲಾಗಿದೆ.

ಹಾರ್ದಿಕ್​ ಪಾಂಡ್ಯ ಕಳೆದ 2 ಆವೃತ್ತಿಯಲ್ಲಿ ಗುಜರಾತ್​ ಟೈಟಾನ್ಸ್​ ತಂಡವನ್ನು ಮುನ್ನಡೆಸಿದ್ದರು. ಈ ವೇಳೆ ಪ್ರತಿ ಪಂದ್ಯದಲ್ಲಿಯೂ ನತಾಶಾ ಸ್ಟೇಡಿಯಂಗೆ ಬಂದು ಗಂಡನಿಗೆ ಬೆಂಬಲ ಸೂಚಿಸಿದ್ದರು. ಆದರೆ ಈ ಬಾರಿ ಮುಂಬೈ ತಂಡವನ್ನು ಮುನ್ನಡೆಸಿ ವೇಳೆ ಒಮ್ಮೆಯೂ ಕೂಡ ನತಾಶಾ ಪಂದ್ಯ ನೋಡಲು ಸ್ಟೇಡಿಯಂಗೆ ಬಂದಿರಲಿಲ್ಲ. ಅಲ್ಲದೆ ನತಾಶಾ ಅವರು ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ತಮ್ಮ ಹೆಸರನ್ನು ಕೂಡ ಬದಲಿಸಿದ್ದಾರೆ ಹೀಗಾಗಿ ಈ ಜೋಡಿ ಬೇರ್ಪಡಲಿದ್ದಾರೆ ಎನ್ನಲಾಗಿದೆ. ಆದರೆ ಈ ಕುರಿತಾಗಿ ಯಾವುದೆ ಸ್ಪಷ್ಟನೆ ಇಲ್ಲ.


ಹಾರ್ದಿಕ್‌ ಮತ್ತು ನತಾಶಾ ಕಳೆದ 2020ರಲ್ಲೇ ರಿಜಿಸ್ಟರ್‌ ರೀತಿಯಲ್ಲಿ ವಿವಾಹವಾಗಿದ್ದರು. ಈ ಜೋಡಿಗೆ ಒಬ್ಬ ಪುತ್ರನಿದ್ದಾನೆ. ಈತನ ಹೆಸರು ಅಗಸ್ತ್ಯ. ಕಳೆದ ವರ್ಷ ಫೆ.14 ರಂದು ರಾಜಸ್ಥಾನದ ಉದಯ್‌ಪುರದಲ್ಲಿ ಕ್ರಿಷ್ಚಿಯನ್‌ ಸಂಪ್ರದಾಯದಂತೆ ಹಾರ್ದಿಕ್‌ ಮತ್ತು ನತಾಶಾ ಮತ್ತೊಮ್ಮೆ ಅದ್ದೂರಿಯಾಗಿ ಪುನರ್‌ ವಿವಾಹವಾಗಿದ್ದರು. ಕುಟುಂಬಸ್ಥರು ಮತ್ತು ಗೆಳೆಯರ ಸಮ್ಮುಖದಲ್ಲಿ ಮತ್ತೊಮ್ಮೆ ವಿವಾಹವಾಗಿದ್ದರು. ಇವರ ವಿವಾಹ ಸಮಾರಂಭದಲ್ಲಿ ಕೊಹ್ಲಿ-ಅನುಷ್ಕಾ, ರಾಹುಲ್‌-ಅಥಿಯಾ, ರಾಕಿಣಗ್​ ಸ್ಟಾರ್ ಯಶ್​ ಸೇರಿ ಹಲವು ಗಣ್ಯರೂ ಭಾಗಿಯಾಗಿದ್ದರು.

ಇದನ್ನೂ ಓದಿ IPL Final 2024: ಫೈನಲ್​ ಪಂದ್ಯಕ್ಕೆ ಮಳೆ ಬಂದರೆ ಯಾರಾಗಲಿದ್ದಾರೆ ವಿಜೇತರು? ಮಳೆ ನಿಯಮ ಹೇಗಿದೆ?

ಹುಟ್ಟುಹಬ್ಬಕ್ಕೂ ಶುಭ ಕೋರದ ಪಾಂಡ್ಯ


ಮಾರ್ಚ್ 4 ರಂದು ಪತ್ನಿ ನತಾಶಾ ಅವರ ಹುಟ್ಟುಹಬ್ಬವಿತ್ತು. ಆದರೆ, ಪತ್ನಿಯ ಹುಟ್ಟುಹಬ್ಬಕ್ಕೆ ಹಾರ್ದಿಕ್ ಯಾವುದೇ ಶುಭ ಹಾರೈಕೆಯ ಪೋಸ್ಟ್ ಮಾಡಿಲ್ಲ. ಕೆಲ ದಿನಗಳ ಹಿಂದೆ ನತಾಶಾ ಅವರು ಸಿಂಗಲ್​ ಫೋಟೋವನ್ನು ಮತ್ತು ಮಗನ ಜತೆಗಿನ ಫೋಟೊವನ್ನು ಮಾತ್ರ ಪೋಸ್ಟ್​ ಮಾಡಿದ್ದರು. ಇದೆನೆಲ್ಲ ನೋಡುವಾಗ ಈ ಜೋಡಿ ಸದ್ಯದಲ್ಲೇ ದೂರವಾಗು ಸೂಚನೆಯೊಂದು ಲಭಿಸಿದೆ. ಹಾರ್ದಿಕ್ ಜತೆಗಿರುವ ಇತ್ತೀಚಿನ ಎಲ್ಲ ಪೋಸ್ಟ್‌ಗಳನ್ನು ತೆಗೆದುಹಾಕಿದ್ದಾರೆ ಎಂದು ಹೇಳಲಾಗಿದೆ. 

ರೋಹಿತ್ ಶರ್ಮಾರನ್ನು ನಾಯಕ ಸ್ಥಾನದಿಂದ ಕೆಳಗಿಳಿಸಿ ತಾವೇ ತಂಡ ಮುನ್ನಡೆಸಿದ್ದ ಹಾರ್ದಿಕ್ ಪಾಂಡ್ಯ ಈ ಬಾರಿ ಅಭಿಮಾನಿಗಳಿಂದ ವ್ಯಾಪಕ ಟೀಕೆಗೆ ಗುರಿಯಾಗಿದ್ದರು. ಜತೆಗೆ ಪಾಂಡ್ಯ ಕೆಟ್ಟ ನಾಯಕತ್ವದಿಂದ ಮುಂಬೈ ಹಿಂದೆದು ಕಾಣದ ಘೋರ ವೈಫಲ್ಯ ಕಂಡಿತ್ತು ಎಂದು ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದರು. ಪಾಂಡ್ಯ ನಾಯಕತ್ವದಲ್ಲಿ ಮುಂಬೈ ಈ ಬಾರಿ ಆಡಿದ 14 ಪಂದ್ಯಗಳಲ್ಲಿ ಕೇವಲ 4 ಪಂದ್ಯ ಗೆದ್ದು ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನಿಯಾಯಿತು.

Exit mobile version