ಮುಂಬಯಿ: ಟೀಮ್ ಇಂಡಿಯಾದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ(Hardik Pandya) ಸೂಕ್ತ ಸಮಯದಲ್ಲಿ ಟೆಸ್ಟ್ ತಂಡಕ್ಕೆ ಮರಳಲಿದ್ದೇನೆ ಎಂದು ಹೇಳಿದ್ದಾರೆ. 2018ರಲ್ಲಿ ಪಾಂಡ್ಯ ಕೊನೆಯದಾಗಿ ಟೆಸ್ಟ್ ಪಂದ್ಯ ಆಡಿದ್ದರು. ಇದಾದ ಬಳಿಕ ಅವರು ಟೆಸ್ಟ್ನಿಂದ ದೂರ ಉಳಿದಿದ್ದರು. ಇದೀಗ ಮತ್ತೆ ಟೆಸ್ಟ್ ಕ್ರಿಕೆಟ್ಗೆ ಕಮ್ಬ್ಯಾಕ್ ಮಾಡುವುದಾಗಿ ತಿಳಿಸಿದ್ದಾರೆ.
ರೋಹಿತ್ ಶರ್ಮಾ ಅನುಪಸ್ಥಿಯಲ್ಲಿ ಭಾರತ ಟಿ20 ತಂಡವನ್ನು ಮುನ್ನಡೆಸುತ್ತಿರುವ ಹಾರ್ದಿಕ್ ಪಾಂಡ್ಯ, ಶ್ರೀಲಂಕಾ ಹಾಗೂ ನ್ಯೂಜಿಲ್ಯಾಂಡ್ ವಿರುದ್ಧ ಟಿ20 ಸರಣಿಗಳನ್ನು ಗೆದ್ದು ಗಮನ ಸೆಳೆದಿದ್ದಾರೆ. ಸದ್ಯ ಆಸೀಸ್(IND VS AUS) ವಿರುದ್ಧದ ನಾಲ್ಕು ಪಂದ್ಯಗಳ ಬಾರ್ಡರ್-ಗವಾಸ್ಕರ್ ಟೆಸ್ಟ್ ಟ್ರೋಫಿ ಸರಣಿಯನ್ನಾಡಲು ಭಾರತ ತಂಡ ಸಜ್ಜಾಗಿದೆ. ಇದೇ ವೇಳೆ ಪಾಂಡ್ಯ ಟೆಸ್ಟ್ ಕ್ರಿಕೆಟ್ಗೆ ಮರಳುವ ಕುರಿತು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕ್ರಿಕ್ಬಜ್ ಸಂದರ್ಶನದಲ್ಲಿ ಮಾತನಾಡಿದ ಹಾರ್ದಿಕ್ ಪಾಂಡ್ಯ “ನಾನು ದೀರ್ಘ ಕಾಲದಿಂದಲೂ ಟೆಸ್ಟ್ ಸ್ವರೂಪದಿಂದ ದೂರ ಉಳಿದಿದ್ದೇನೆ. ಆದರೆ ರೆಡ್ ಬಾಲ್(ಟೆಸ್ಟ್)ನಲ್ಲಿ ಆಡಲು ಸೂಕ್ತ ಸಮಯ ಬಂದಾಗ ಖಂಡಿತ ಆಡುತ್ತೇನೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ IND v AUS 2023 : ಆಸ್ಟ್ರೇಲಿಯಾ ತಂಡ ಸೋಲಿನ ಭಯದಲ್ಲಿದೆ ಎಂದು ಹೇಳಿದ ಮೊಹಮ್ಮದ್ ಕೈಫ್
ಸದ್ಯ ನಾನು ಏಕದಿನ ಹಾಗೂ ಟಿ20 ಸ್ವರೂಪದ ಕ್ರಿಕೆಟ್ಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲಿದ್ದೇನೆ. ಆದರೆ ಮುಂದಿನ ದಿನಗಳಲ್ಲಿ ನಾನು ದೀರ್ಘಕಾಲದ ಕ್ರಿಕೆಟ್ ಆಡುವ ಫಿಟ್ನೆಸ್ ಹೊಂದಿದ್ದರೆ, ಟೆಸ್ಟ್ ಸ್ವರೂಪದಲ್ಲಿಯೂ ಆಡುತ್ತೇನೆ ಎಂದು ಹಾರ್ದಿಕ್ ಪಾಂಡ್ಯ ತಿಳಿಸಿದ್ದಾರೆ.