ಗಯಾನಾ: ಹಾರ್ದಿಕ್ ಪಾಂಡ್ಯ(Hardik Pandya) ವಿಂಡೀಸ್(IND vs WI) ವಿರುದ್ಧದ ದ್ವಿತೀಯ ಟಿ20(West Indies vs India, 2nd T20) ಪಂದ್ಯದಲ್ಲಿ ಜಸ್ಪ್ರೀತ್ ಬುಮ್ರಾ(jasprit bumrah) ಮತ್ತು ಆರ್.ಅಶ್ವಿನ್(Ravichandran Ashwin) ಅವರ ದಾಖಲೆಯೊಂದನ್ನು ಹಿಂದಕ್ಕಿದ್ದಾರೆ. ಟಿ20 ಕ್ರಿಕೆಟ್ನಲ್ಲಿ ಗರಿಷ್ಠ ವಿಕೆಟ್ ಪಡೆದ ಭಾರತೀಯರ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿದ್ದಾರೆ.
ಭಾನುವಾರ ನಡೆದ ಈ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ 4 ಓವರ್ ಬೌಲಿಂಗ್ ನಡೆಸಿ 35 ರನ್ ವೆಚ್ಚದಲ್ಲಿ ಮೂರು ವಿಕೆಟ್ ಕಬಳಿಸಿದರು. 2 ವಿಕೆಟ್ ಪಡೆಯುತ್ತಿದ್ದಂತೆ ಬುಮ್ರಾ ದಾಖಲೆ ಮುರಿದರೆ, ಮುಂದಿನ ವಿಕೆಟ್ನಲ್ಲಿ ಅಶ್ವಿನ್ ದಾಖಲೆಯನ್ನು ಹಿಂದಿಕ್ಕಿದರು. ಈ ಪಂದ್ಯಕ್ಕೂ ಮುನ್ನ ಬುಮ್ರಾ ಮತ್ತು ಪಾಂಡ್ಯ ತಲಾ 70 ಟಿ20 ವಿಕೆಟ್ ಪಡೆದಿದ್ದರು. ಇದೀಗ ಹಾರ್ದಿಕ್ 73 ವಿಕೆಟ್ ಪಡೆಯುವ ಮೂಲಕ ಮೂರನೇ ಸ್ಥಾನ ಪಡೆದಿದ್ದಾರೆ. ಅಶ್ವಿನ್ 72 ವಿಕೆಟ್ ಪಡೆದಿದ್ದಾರೆ.
ಅತ್ಯಧಿಕ ವಿಕೆಟ್ ಪಡೆದವರ ಭಾರತೀಯ ಬೌಲರ್ಗಳ ಪಟ್ಟಿಯಲ್ಲಿ ಯಜುವೇಂದ್ರ ಚಹಲ್(95*) ಮೊದಲ ಸ್ಥಾನದಲ್ಲಿದ್ದಾರೆ. ಭುವನೇಶ್ವರ್ ಕುಮಾರ್(90) ದ್ವಿತೀಯ ಸ್ಥಾನದಲ್ಲಿದ್ದಾರೆ. ಅಶ್ವಿನ್(72) ನಾಲ್ಕನೇ ಸ್ಥಾನಕ್ಕೆ ಜಾರಿದ್ದಾರೆ.
ಪಂದ್ಯ ಸೋತ ಭಾರತ
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಭಾರತ ತಿಲಕ್ ವರ್ಮ ಅವರ ಏಕಾಂಗಿ ಅರ್ಧಶತಕದ ಹೋರಾಟದಿಂದ 7 ವಿಕೆಟಿಗೆ 152 ರನ್ ಗಳಿಸಿತು. ಗುರಿ ಬೆನ್ನಟ್ಟಿದ ವೆಸ್ಟ್ ಇಂಡೀಸ್ 18.5 ಓವರ್‌ಗಳಲ್ಲಿ 8 ವಿಕೆಟಿಗೆ 155 ರನ್ ಬಾರಿಸಿ ಗೆಲುವು ಸಾಧಿಸಿತು. ಈ ಪಂದ್ಯದಲ್ಲಿಯೂ ಭಾರತೀಯ ಬ್ಯಾಟಿಂಗ್ ಕಳಪೆ ಮಟ್ಟದಿಂದ ಕೂಡಿತ್ತು. ಇದುವೇ ಸೋಲಿಗೆ ಪ್ರಮುಖ ಕಾರಣವಾಯಿತು.
ಇದನ್ನೂ ಓದಿ ind vs wi : ವೆಸ್ಟ್ ಇಂಡೀಸ್ ವಿರುದ್ಧದ ಟಿ20ಯಲ್ಲಿ ಭಾರತ ತಂಡಕ್ಕೆ ಸತತ ಎರಡನೇ ಸೋಲು
ನಿಕೋಲಸ್ ಪೂರನ್ ಬಿರುಸಿನ ಬ್ಯಾಟಿಂಗ್ ಮೂಲಕ ವಿಂಡೀಸ್ ಜಯದಲ್ಲಿ ಪ್ರಮುಖ ಪಾತ್ರ ವಹಿಸಿದರು. ಅವರು 40 ಎಸೆತಗಳಿಂದ 67 ರನ್ ಬಾರಿಸಿ ಪಂದ್ಯಕ್ಕೆ ತಿರುವು ಒದಗಿಸಿದರು. ಅವರ ಈ ಗೆಲುವಿನಿ ಇನಿಂಗ್ಸ್ನಲ್ಲಿ 6 ಬೌಂಡರಿ ಮತ್ತು 4 ಸಿಕ್ಸರ್ ಸಿಡಿಯಿತು. ಐಪಿಎಲ್ ಹೀರೊಗಳಾದ ಶುಭಮನ್ ಗಿಲ್ (7) ಮತ್ತು ಸೂರ್ಯಕುಮಾರ್ (1), ಸಂಜು ಸ್ಯಾಮ್ಸನ್(7) ಕ್ರೀಸ್ ಆಕ್ರಮಿಸಿಕೊಳ್ಳಲು ವಿಫಲರಾದರು. ಸೂರ್ಯ 3ನೇ ಎಸೆತದಲ್ಲೇ ರನೌಟ್ ಆಗಿ ನಿರ್ಗಮಿಸುವ ಸಂಕಟಕ್ಕೆ ಸಿಲುಕಿದರು. ನಾಯಕ ಹಾರ್ದಿಕ್ ಪಾಂಡ್ಯ 24 ರನ್ಗಳಿಸಿ ಶೆಫರ್ಡ್ ಬೌಲಿಂಗ್ನಲ್ಲಿ ಕ್ಲೀನ್ ಬೌಲ್ಡ್ ಆದರು.