ಪೋರ್ಟ್ ಆಫ್ ಸ್ಪೇನ್ : ವೆಸ್ಟ್ ಇಂಡೀಸ್ ಪ್ರವಾಸದಲ್ಲಿರುವ ಟೀಮ್ ಇಂಡಿಯಾ ಟಿ೨೦ ಸರಣಿಯ ಮುಂದಿನೆರಡು ಪಂದ್ಯಳಿಗಾಗಿ ಅಮೆರಿಕದ ಫ್ಲೋರಿಡಾಗೆ ತೆರಳಿದೆ. ನಾಲ್ಕನೇ ಪಂದ್ಯಆಗಸ್ಟ್ ೬ ಹಾಗೂ ಐದನೇ ಪಂದ್ಯ ಆಗಸ್ಟ್f ೮ರಂದು ನಡೆಯಲಿದೆ. ಮೂರನೇ ಪಂದ್ಯ ಆಗಸ್ಟ್ ೨ರಂದು ಮುಕ್ತಾಯಗೊಂಡಿದ್ದು, ಅಮೆರಿಕ ಪ್ರಯಾಣಕ್ಕೆ ಮೊದಲು ಎರಡು ದಿನಗಳ ಬಿಡುವು ಲಭಿಸಿತ್ತು. ಹೀಗಾಗಿ ಕೆರಿಬಿಯನ್ನರ ನಾಡಲ್ಲಿ ಭಾರತ ಕ್ರಿಕೆಟಿಗರು ಸುತ್ತಾಟ ನಡೆಸಿದ್ದರು. ಅಂತೆಯೇ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವರು ಐಪಿಎಲ್‌ನಲ್ಲಿ ಮುಂಬಯಿ ಇಂಡಿಯನ್ಸ್ ತಂಡದಲ್ಲಿದ್ದ ಗೆಳೆಯನ ಮನೆಗೆ ಭೇಟಿ ನೀಡಿದ್ದಾರೆ.
ಅವರು ಮತ್ಯಾರು ಅಲ್ಲ. ವಿಂಡೀಸ್ ಆಲ್‌ರೌಂಡರ್ ಕೀರನ್ ಪೊಲಾರ್ಡ್. ಅವರೀಗ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಹೇಳಿದ್ದಾರೆ. ಹೀಗಾಗಿ ಅವರು ಮನೆಯಲ್ಲಿದ್ದರು. ಹೀಗಾಗಿ ಬಿಡುವಿನ ವೇಳೆಯಲ್ಲಿ ವಿಂಡೀಸ್‌ನ ಗೆಳೆಯನನ್ನು ನೋಡಲು ಪಾಂಡ್ಯ ಹೋಗಿದ್ದಾರೆ. ತಾವು ಪೊಲರ್ಡ್ ಮನೆಗೆ ಹೋಗಿರುವ ಚಿತ್ರಗಳನ್ನು ಪಾಂಡ್ಯ ಇನ್‌ಸ್ಟಾಗ್ರಾಮ್‌ನಲ್ಲಿ ಪ್ರಕಟಿಸಿದ್ದಾರೆ.
“ಕಿಂಗ್ ಮನೆಗೆ ಹೋಗದೆ ಕೆರಿಬಿಯನ್ ನಾಡಿನ ಪ್ರವಾಸ ಪೂರ್ಣಗೊಳ್ಳುವುದಿಲ್ಲ. ಪೊಲಿ ನನ್ನ ಅಚ್ಚುಮೆಚ್ಚಿನ ಗೆಳೆಯ ಹಾಗೂ ನಿನ್ನ ಕುಟುಂಬವೂ ಸುಂದರ. ಮನೆಗೆ ಕರೆದಿರುವುದಕ್ಕೆ ಧನ್ಯವಾದಗಳು,” ಎಂದು ಪಾಂಡ್ಯ ಬರೆದುಕೊಂಡಿದ್ದಾರೆ.
ಹಾರ್ದಿಕ್ ಪಾಂಡ್ಯ ೨೦೧೫ರಿಂದ ಮುಂಬಯಿ ಇಂಡಿಯನ್ಸ್ ತಂಡದಲ್ಲಿ ೨೦೨೧ರವರೆಗೆ ಆಡಿದ್ದರು. ಕೀರನ್ ಪೊಲಾರ್ಡ್ ೨೦೧೦ರಿಂದ ಮುಂಬಯಿ ಇಂಡಿಯನ್ಸ್ ತಂಡದಲ್ಲಿಯೇ ಆಡುತ್ತಿದ್ದಾರೆ. ಹೀಗಾಗಿ ಅವರ ನಡುವೆ ಗಟ್ಟಿಯಾದ ಗೆಳೆತನವಿದೆ. ಈ ಇಬ್ಬರು ದೈತ್ಯ ಆಲ್‌ರೌಂಡ್ ಪ್ರತಿಭೆಗಳು ಜತೆಯಾಗಿ ನಾಲ್ಕು ಟ್ರೋಫಿಯನ್ನು ಮುಂಬಯಿ ಇಂಡಿಯನ್ಸ್ ತಂಡಕ್ಕೆ ತಂದುಕೊಟ್ಟಿದ್ದಾರೆ. ಹೀಗಾಗಿ ವೆಸ್ಟ್ ಇಂಡೀಸ್ ಪ್ರವಾಸ ಹೋಗಿದ್ದ ಹಾರ್ದಿಕ್ ಪಾಂಡ್ಯ ಅವರು, ಪೊಲಾರ್ಡ್ ಮನೆಗೆ ತೆರಳಿ ಆತಿಥ್ಯ ಸ್ವೀಕರಿಸಿದ್ದಾರೆ.
ಇದನ್ನೂ ಓದಿ | ಹಾರ್ದಿಕ್ ಪಾಂಡ್ಯ ಯಾಕೆ Team India ನಾಯಕರಾಗಬೇಕು? ಅವರ ಸಾಮರ್ಥ್ಯಗಳೇನು?