Site icon Vistara News

Hardik Pandya : ಮನೆಗೆ ಬಂದೆ; ಹಾರ್ದಿಕ್ ಪಾಂಡ್ಯ ಈ ರೀತಿ ಹೇಳಿಕೆ ನೀಡಲೊಂದು ಕಾರಣವಿದೆ

Hardik Pandya

ಮುಂಬಯಿ: ಐಪಿಎಲ್ 2024 ರ ಹರಾಜಿಗೆ ಮುಂಚಿತವಾಗಿ ಭಾರತದ ಆಲ್​ರೌಂಡರ್ ಹಾರ್ದಿಕ್ ಪಾಂಡ್ಯ ಅವರನ್ನು ಮುಂಬೈ ಇಂಡಿಯನ್ಸ್ (ಎಂಐ) ಸೋಮವಾರ ಗುಜರಾತ್ ಟೈಟಾನ್ಸ್ (ಜಿಟಿ) ತಂಡದಿಂದ ಖರೀದಿಸಿದೆ. 2015 ರಲ್ಲಿ ಮುಂಬೈ ಇಂಡಿಯನ್ಸ್​ನೊಂದಿಗೆ ಐಪಿಎಲ್ ವೃತ್ತಿಜೀವನವನ್ನು ಪ್ರಾರಂಭಿಸಿದ್ದ ಪಾಂಡ್ಯ, ಬಳಿಕ ಎರಡು ಋತುಗಳಲ್ಲಿ ಜಿಟಿ ತಂಡವನ್ನು ಮುನ್ನಡೆಸಿದ್ದರ. 2022 ರಲ್ಲಿ ತಮ್ಮ ಮೊದಲ ನಾಯಕತ್ವದ ಋತುವಿನಲ್ಲಿಯೇ ಜಿಟಿ ಫ್ರಾಂಚೈಸಿಯನ್ನು ಐಪಿಎಲ್ ಪ್ರಶಸ್ತಿಗೆ ಮುನ್ನಡೆಸಿದ್ದರು.

ಹಾರ್ದಿಕ್ ಅವರನ್ನು ಉಳಿಸಿಕೊಳ್ಳುವ ಆಟಗಾರರ ಪಟ್ಟಿಯನ್ನು ಸಲ್ಲಿಕೆ ಮಾಡಬೇಕಾದ ಗಡುವಿನ ದಿನವಾದ ಭಾನುವಾರ (ನವೆಂಬರ್​ 26ರಂದು) ಗುಜರಾತ್ ತಂಡ ತಮ್ಮಲ್ಲಿಯೇ ಉಳಿಸಿಕೊಂಡಿತ್ತು., ಆದರೆ ವ್ಯಾಪಾರ ವಿಂಡೋ ಡಿಸೆಂಬರ್ 12 ರಂದು ಕೊನೆಗೊಳ್ಳುವ ಕಾರಣ ಮುಂಬೈ ಇಂಡಿಯನ್ಸ್ ತಂಡಕ್ಕೆ ಪರ್ಸ್​ ಗಾತ್ರವನ್ನು ಹಿಗ್ಗಿಸಿ ಬಳಿಕ ಹಾರ್ದಿಕ್ ಪಾಂಡ್ಯ ಅವರನ್ನು ತಂಡಕ್ಕೆ ಕರೆದುಕೊಂಡು ಬಂದಿದೆ.

ಮುಂಬೈ ಇಂಡಿಯನ್ಸ್ ತಂಡವು ಕ್ಯಾಮರೂನ್ ಗ್ರೀನ್ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಗೆ 17.50 ಕೋಟಿ ರೂ.ಗೆ ಮಾರಾಟ ಮಾಡಿದೆ. ಅಲ್ಲಿ ಬಂದ 17,5 ಕೋಟಿಗಳಲ್ಲಿ ಪಾಂಡ್ಯಗೆ 15 ಕೋಟಿ ಕೊಟ್ಟು ತಂಡಕ್ಕೆ ಸೇರಿಕೊಂಡಿದೆ.

ಇದನ್ನೂ ಓದಿ : IPL 2024 : ಫ್ರಾಂಚೈಸಿಗಳು ಬಿಡುಗಡೆ ಮಾಡಿದ ಟಾಪ್ 5 ದುಬಾರಿ ಆಟಗಾರರು ಇವರು

ಗುಜರಾತ್ ಟೈಟಾನ್ಸ್ (ಜಿಟಿ) ನಾಯಕ ಹಾರ್ದಿಕ್ ಪಾಂಡ್ಯ ತಮ್ಮ ಮೊದಲ ಫ್ರಾಂಚೈಸಿ ಮುಂಬೈ ಇಂಡಿಯನ್ಸ್​ ಮರಳಲು ಸಜ್ಜಾಗಿದ್ದಾರೆ. ಆಲ್​ರೌಂಡ್ ಆಟಗಾರ ಗುಜರಾತ್ ತಂಡದೊಂದಿಗೆ ಎರಡು ಮಹತ್ವದ ವರ್ಷಗಳನ್ನು ಕಳೆದಿದ್ದಾರೆ. ಅವರು ಆ ಅಭಿಯಾನವನ್ನು ಉತ್ಸಾಹದಿಂದ ಮುನ್ನಡೆಸಿದ್ದಾರೆ. 2022 ರಲ್ಲಿ ಜಿಟಿಯ ಚೊಚ್ಚಲ ಋತುವಿನಲ್ಲೇ ಹಾರ್ದಿಕ್ ತಂಡವು ಅಪೇಕ್ಷಿತ ಟ್ರೋಫಿಯನ್ನು ಎತ್ತಿಹಿಡಿಯುವ ಮೂಲಕ ಅದ್ಭುತ ಆರಂಭವನ್ನು ಖಚಿತಪಡಿಸಿದ್ದರು. ಆದರೆ ಈ ವರ್ಷದ ಆರಂಭದಲ್ಲಿ ನಡೆದ ಟೂರ್ನಿಯ ರೋಮಾಂಚಕ ಫೈನಲ್​ನಲ್ಲಿ ಕೊನೆಯ ಎಸೆತದಲ್ಲಿ ಸೋತ ನಂತರ ಎರಡನೇ ಋತುವಿನಲ್ಲಿ ಆ ತಂಡಕ್ಕೆ ರನ್ನರ್ ಅಪ್ ಸ್ಥಾನ ತಂದುಕೊಟ್ಟಿದ್ದಾರೆ ಎಂದು ಐಪಿಎಲ್ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.

ಏತನ್ಮಧ್ಯೆ, ಹಾರ್ದಿಕ್ ಪಾಂಡ್ಯ ಅವರು ಮುಂಬೈಗೆ ಮರಳುವ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಭಾವನಾತ್ಮಕ ಸಂದೇಶವನ್ನು ಹಂಚಿಕೊಂಡಿದೆ. ಮಾಸ್​ ಇಸ್​ ಬ್ಯಾಕ್​ ಎಂದು ಬರೆದು ವಿಡಿಯೊ ಒಂದನ್ನು ಹಂಚಿಕೊಳ್ಳಲಾಗಿದೆ.

ವಿಡಿಯೊ ತುಣುಕು ಇಲ್ಲಿದೆ

ಹಾರ್ದಿಕ್ ಪಾಂಡ್ಯ ಕೂಡ ಈ ಕುರಿತು ವಿಡಿಯೊವನ್ನು ಬಿಡುಗಡೆ ಮಾಡಿದ್ದಾರೆ. ಮನೆಗೆ ಮರಳಿದೆ. ಇದು ಅತ್ಯಂತ ಖಷಿಯ ವಿಚಾರ ಎಂಬುದಾಗಿ ಅವರು ವಿಡಿಯೊ ಮಾಡಿ ಬಿಡುಗಡೆ ಮಾಡಿದ್ದಾರೆ. ಅದರಲ್ಲಿ ಅವರು 10 ಲಕ್ಷ ರೂಪಾಯಿ ಮೌಲ್ಯದೊಂದಿಗೆ ಮೊದಲ ಬಾರಿಗೆ ಮುಂಬೈ ತಂಡ ಸೇರಿಕೊಂಡ ಬಳಿಕ ಆದ ಮಾರ್ಪಾಟುಗಳನ್ನು ಉಲ್ಲೇಖಿಸಲಾಗಿದೆ.

ಪಾಂಡ್ಯ ಪೋಸ್ಟ್​ ಮಾಡಿದ ವಿಡಿಯೊ ಇಲ್ಲಿದೆ

‘ಹಾರ್ದಿಕ್ ಅವರನ್ನು ಮನೆಗೆ ಮರಳಿ ಸ್ವಾಗತಿಸಲು ರೋಮಾಂಚನಗೊಂಡಿದ್ದೇವೆ. ಇದು ನಮ್ಮ ಮುಂಬೈ ಇಂಡಿಯನ್ಸ್ ಕುಟುಂಬದೊಂದಿಗೆ ಹೃದಯಸ್ಪರ್ಶಿ ಪುನರ್ಮಿಲನವಾಗಿದೆ. ಮುಂಬೈ ಇಂಡಿಯನ್ಸ್‌ನ ಯುವ ಪ್ರತಿಭಾನ್ವೇಷಣೆಯ ಆಟಗಾರ ಈಗ ಟೀಮ್ ಇಂಡಿಯಾದ ಸ್ಟಾರ್ ಆಗಿ ದೊಡ್ಡ ಬೆಳವಣಿಗೆಯನ್ನು ಕಂಡಿದ್ದಾರೆ. ಅವರ ಮತ್ತು ಮುಂಬೈ ಇಂಡಿಯನ್ಸ್‌ ಭವಿಷ್ಯ ಏನಾಗಲಿದೆ ಎಂದು ನಮ್ಮಲ್ಲಿ ಭಾರಿ ಕುತೂಹಲ ಮೂಡಿದೆ’ ಎಂದು ತಂಡದ ಮಾಲಕಿ ನೀತಾ ಎಂ. ಅಂಬಾನಿ ಹೇಳಿದ್ದಾರೆ.

Exit mobile version