Site icon Vistara News

Hardik Pandya: ಅಫಘಾನಿಸ್ತಾನ ಟಿ20 ಸರಣಿಯಿಂದ ಹಾರ್ದಿಕ್​ ಪಾಂಡ್ಯ ಔಟ್​!

hardik pandya

ಮುಂಬಯಿ: ಭಾರತ ತಂಡದ ಆಲ್​ರೌಂಡರ್​, ಮುಂಬೈ ಇಂಡಿಯನ್ಸ್ ತಂಡ ನೂತನ ನಾಯಕ ಹಾರ್ದಿಕ್ ಪಾಂಡ್ಯ(Hardik Pandya) ಅವರು ಅಫಘಾನಿಸ್ತಾನ ವಿರುದ್ಧದ ಟಿ20 ಸರಣಿಯಿಂದ(Afghanistan T20I series) ಬಹುತೇಕ ಹೊರಬೀಳಲಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ಗಾಯದಿಂದ ಸಂಪೂರ್ಣವಾಗಿ ಗುಣಮುಖರಾದರೂ ಫಿಟ್​ ಇಲ್ಲದ ಕಾರಣ ಅವರು ಅಫಘಾನಿಸ್ತಾನ ಸರಣಿಯಿಂದ ಹೊರಗುಳಿಯಲಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿರುವುದಾಗಿ ಎಎನ್‌ಐ ವರದಿ ಮಾಡಿದೆ. ಆದರೆ, ಐಪಿಎಲ್​ ವೇಳಗೆ ಫಿಟ್​ ಆಗಲಿದ್ದಾರೆ ಎಂದು ತಿಳಿದುಬಂದಿದೆ. ಸೂರ್ಯಕುಮಾರ್​ ಪಾದದ ಗಾಯದಿಂದಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗಿ ಚೇತರಿಕೆಯದ ಹಾದಿಯಲ್ಲಿದ್ದಾರೆ. ಅವರು ಆಡುವುದು ಕಷ್ಟ. ಹೀಗಾಗಿ ತಂಡದ ನಾಯಕತ್ವ ಕೆ.ಎಲ್​ ರಾಹುಲ್​ ಅವರಿಗೆ ಸಿಗುವ ಸಾಧ್ಯತೆ ಇದೆ.

ರಾಹುಲ್​ ಅವರು ಕಳೆದ ವರ್ಷ ಆಸ್ಟ್ರೇಲಿಯಾದಲ್ಲಿ ನಡೆದಿದ್ದ ಟಿ20 ವಿಶ್ವಕಪ್​ ಬಳಿಕ ಭಾರತ ತಂಡದ ಪರ ಟಿ20 ಕ್ರಿಕೆಟ್​ ಆಡಿಲ್ಲ. ಸದ್ಯ ಪ್ರಚಂಡ ಫಾರ್ಮ್​ನಲ್ಲಿರುವ ಅವರಿಗೆ ಅಫಘಾನಿಸ್ತಾನ ಸರಣಿಯಲ್ಲಿ ಅವಕಾಶ ಸಿಗುವ ನಿರೀಕ್ಷೆ ಇದೆ. ಅಫಘಾನಿಸ್ತಾನ ವಿರುದ್ಧದ ಟಿ20 ಸರಣಿ ಜನವರಿ 11ರಿಂದ ಆರಂಭವಾಗಲಿದೆ. ಜ.17ಕ್ಕೆ ಮುಕ್ತಾಯ ಕಾಣಲಿದೆ. ಒಟ್ಟು ಮೂರು ಪಂದ್ಯಗಳ ಸರಣಿ ಇದಾಗಿದೆ.

ವಿಶ್ವಕಪ್​ ವೇಳೆ ಗಾಯ

ಏಕದಿನ ವಿಶ್ವಕಪ್​ ಟೂರ್ನಿಯ ಬಾಂಗ್ಲಾದೇಶ ವಿರುದ್ಧದ ಲೀಗ್​ ಪಂದ್ಯದಲ್ಲಿ ಬೌಲಿಂಗ್​ ನಡೆಸುವಾಗ ಪಾಂಡ್ಯ ಚೆಂಡನ್ನು ತೆಡೆಯುವ ಪ್ರಯತ್ನದಲ್ಲಿ ಜಾರಿ ಬಿದ್ದು ಪಾದದ ನೋವಿಗೆ ತುತ್ತಾಗಿದ್ದರು. ಬಳಿಕ ಚಿಕ್ಸೆಗೆ ಪಡೆದದರೂ ಗಾಯ ಗಂಭೀರ ಸ್ವರೂಪದಿಂದ ಕೂಡಿದ ಕಾರಣ ಅವರು ವಿಶ್ವಕಪ್​ ಟೂರ್ನಿಯಿಂದ ಹೊರಬಿದ್ದಿದ್ದರು.

ಇದನ್ನೂ ಓದಿ IPL 2024: ಐಪಿಎಲ್ ಶೀರ್ಷಿಕೆ ಪ್ರಾಯೋಜಕತ್ವಕ್ಕೆ ಬಿಸಿಸಿಐ ಷರತ್ತುಗಳೇನು?

ಪಾಂಡ್ಯ ಕಮ್​ಬ್ಯಾಕ್​ ಬಗ್ಗೆ ಬಿಸಿಸಿಐ ಕಾರ್ಯದರ್ಶಿ ಜಯ್​ ಶಾ ಕೆಲ ದಿನಗಳ ದಿಂದೆ ಹೇಳಿಕೆಯೊಂದನ್ನು ನೀಡಿದ್ದರು. ‘ಪಾಂಡ್ಯ ಆದಷ್ಟು ಬೇಗ ಫಿಟ್ ಆಗಲು ಶ್ರಮಿಸುತ್ತಿದ್ದಾರೆ. ಅವರ ಫಿಟ್​ನೆಸ್​ ಮೇಲೆ ಎನ್​ಸಿಎಯಲ್ಲಿ ನಿಗಾ ಇರಿಸಲಾಗಿದೆ. ಅವರು ರಾಷ್ಟ್ರೀಯ ತಂಡಕ್ಕೆ ಮರಳಲು ಸಿದ್ಧರಾದಾಗ ಮಾಧ್ಯಮಗಳಿಗೆ ತಿಳಿಸಲಾಗುವುದು’ ಎಂದು ಹೇಳಿದ್ದರು. ಶಾ ಹೇಳಿಕೆ ಗಮನಿಸುವಾಗ ಪಾಂಡ್ಯ ಫಿಟ್​ ಆದಂತೆ ತೋರುತ್ತಿಲ್ಲ.

ಮುಂಬೈ ತಂಡಕ್ಕೆ ನಾಯಕ

ಹಾರ್ದಿಕ್​ ಪಾಂಡ್ಯ (Hardik Pandya) ಅವರನ್ನು ಗುಜರಾತ್ ಟೈಟಾನ್ಸ್​​ ತಂಡದಿಂದ ಮುಂಬಯಿ ತಂಡಕ್ಕೆ 15 ಕೋಟಿ ರೂ.ಗೆ ಟ್ರೇಡ್​ ಮಾಡಿ ಕರೆ ತಂದಾಗ ದೊಡ್ಡ ಬದಲಾವಣೆ ನಿರೀಕ್ಷೆ ಮಾಡಲಾಗಿತ್ತು. ಅಂತೆಯೇ ರೋಹಿತ್ ಶರ್ಮ​ ಅವರನ್ನು ನಾಯಕತ್ವದಿಂದ ಕೆಳಗಿಳಿಸಿ ಪಾಂಡ್ಯ ಅವರಿಗೆ ನಾಯಕತ್ವದ ಪಟ್ಟ ಕಟ್ಟಲಾಯಿತು. ಇದು ರೋಹಿತ್​ ಅಭಿಮಾನಿಗಳ ಆಕ್ರೋಶಕ್ಕೂ ಕಾರಣವಾಗಿತ್ತು.

Exit mobile version