Site icon Vistara News

Hardik Pandya Wedding : ಭಾರತೀಯ ಸಂಪ್ರದಾಯದಂತೆ ನಡೆದ ಮದುವೆ ಫೋಟೊಗಳನ್ನು ಹಂಚಿಕೊಂಡ ಹಾರ್ದಿಕ್​ ಪಾಂಡ್ಯ

hardik pandya

#image_title

ಮುಂಬಯಿ: ಸ್ಟಾರ್​ ಆಲ್​ರೌಂಡರ್​ ಹಾಗೂ ಭಾರತ ಸೀಮಿತ ಓವರ್​ಗಳ ತಂಡದ ಹಂಗಾಮಿ ನಾಯಕ ಹಾರ್ದಿಕ್ ಪಾಂಡ್ಯ ಅವರು ವಿವಾಹ ಸಮಾರಂಭದಲ್ಲಿ ಬ್ಯುಸಿಯಾಗಿದ್ದಾರೆ. ಆರಂಭದಲ್ಲಿ ಪಾಶ್ವಾತ್ಯ ಸಂಸ್ಕೃತಿಯಂತೆ ವೈಟ್​ ವೆಡ್ಡಿಂಗ್​ ಕಾರ್ಯಕ್ರಮ ಮಾಡಿಕೊಂಡಿದ್ದ ಅವರೀಗ ಭಾರತೀಯ ಸಂಪ್ರದಾಯದ ಪ್ರಕಾರವೂ ಮದುವೆಯಾಗಿದ್ದಾರೆ. ಅದರ ಚಿತ್ರಗಳನ್ನು ಅವರು ಸಾಮಾಜಿಕ ಜಾಲತಾಣಗಳಲ್ಲಿ ಬಿಟ್ಟಿದ್ದಾರೆ.

ಚಿತ್ರದಲ್ಲಿ ಹಾರ್ದಿಕ್​ ಪಾಂಡ್ಯ ಹಾಗೂ ನತಾಶಾ ಅದ್ಧೂರಿ ವಿವಾಹ ಕಾರ್ಯಕ್ರಮ ಏರ್ಪಡಿಸಿದ್ದರು. ಜೋಡಿ ಭಾರತೀಯ ಸಂಪ್ರದಾಯದ ದಿರಸುಗಳನ್ನು ಹಾಕಿಕೊಂಡಿದ್ದರು. ಜತೆಗೆ ಸುಂದರ ಫೋಟೋಗಳನ್ನು ತೆಗೆಸಿಕೊಂಡಿದ್ದಾರೆ.

ಮೂಲಗಳು ಹೇಳುವಂತೆ ಅವರಿಬ್ಬರು 2020ರಲ್ಲಿ ಕಾನೂನು ಪ್ರಕಾರವಾಗಿ ಮದುವೆಯಾಗಿದ್ದರು. ಆದರೆ, ವಿಶೇಷ ಸಮಾರಂಭವೇನೂ ಏರ್ಪಡಿಸಿರಲಿಲ್ಲ. ಎಲ್ಲ ಕಾರ್ಯಕ್ರಮಗಳೂ ತುರ್ತಾಗಿ ನಡೆದಿತ್ತು. ಇದೀಗ ತಮ್ಮ ಬದುಕಿನ ಜಂಜಾಟಗಳಿಂದ ಮುಕ್ತಿ ಪಡೆದುಕೊಂಡಿದ್ದಾರೆ. ಹೀಗಾಗಿ ಗಣ್ಯರಿಗೆಲ್ಲರಿಗೂ ಆಹ್ವಾನ ಕೊಟ್ಟು ಮದುವೆಯಾಗಿದ್ದಾರೆ.

INDvsSL | ಪಂದ್ಯ ಮುಗಿಯುವ ಮೊದಲೇ ಹ್ಯಾಂಡ್​ ಶೇಕ್​; ನಾಯಕ ಹಾರ್ದಿಕ್​ ಪಾಂಡ್ಯ ಮಾಡಿದ್ದು ತಪ್ಪೊ, ಸರಿಯೊ?

29 ವರ್ಷದ ಹಾರ್ದಿಕ್​ ಪಾಂಡ್ಯ ಹಾಗೂ 30 ವರ್ಷದ ನತಾಶಾ ಮೇ 31ರಂದು ಮದುವೆಯಾಗಿದ್ದರು. ಅವರಿಗೆ ಜುಲೈ ಗೆ ಪುತ್ರ ಅಗಸ್ತ್ಯ ಹುಟ್ಟಿದ್ದ. ಇದೀಗ ಪುತ್ರನ ಸಮ್ಮುಖದಲ್ಲಿ ಮದುವೆಯಾಗಿದ್ದಾರೆ.

Exit mobile version