Site icon Vistara News

IND vs BAN: ಹಾರ್ದಿಕ್​ ಪಾಂಡ್ಯಗೆ ಗಾಯ; ಟೀಮ್​ ಇಂಡಿಯಾಕ್ಕೆ ಆತಂಕ

hardik pandya

ಪುಣೆ: ಬಾಂಗ್ಲಾದೇಶ(IND vs BAN) ವಿರುದ್ಧದ ಪಂದ್ಯದಲ್ಲಿ ಬೌಲಿಂಗ್​ ನಡೆಸುವ ವೇಳೆ ಗಾಯಗೊಂಡ ಹಾರ್ದಿಕ್​ ಪಾಂಡ್ಯ(Hardik Pandya) ಅವರು ಮುಂದಿನ ಪಂದ್ಯದಲ್ಲಿ ಆಡುವುದು ಅನುಮಾನ ಎನ್ನಲಾಗಿದೆ. ಸದ್ಯ ಪಾಂಡ್ಯ ಸ್ಕ್ಯಾನಿಂಗ್​ಗೆ ಒಳಪಟ್ಟಿದ್ದಾರೆ ಎಂದು ಬಿಸಿಸಿಐ ತಿಳಿಸಿದೆ. ಇದು ಟೀಮ್ ಇಂಡಿಯಾಕ್ಕೆ ದೊಡ್ಡ ಆತಂಕ ಮೂಡಿಸಿದೆ.

ಹಾರ್ದಿಕ್​ ಅವರು ತಮ್ಮ ಮೊದಲ ಓವರ್​ನ ಮೂರನೇ ಎಸೆತದಲ್ಲಿ ಬೌಂಡರಿ ತಡೆಯುವ ಯತ್ನದಲ್ಲಿ ಕಾಲಿಗೆ ಗಾಯ ಮಾಡಿಕೊಂಡರು. ಬಳಿಕ ಅವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಿದರೂ ನೋವು ಮಾತ್ರ ಕಡಿಮೆಯಾಗುವಂತೆ ಕಾಣಲಿಲ್ಲ. ಹೀಗಾಗಿ ಅವರು ಅರ್ಧಕ್ಕೆ ಬೌಲಿಂಗ್​ ನಿಲ್ಲಿಸಿ ಮೈದಾನ ತೊರೆದರು. ಹೀಗಾಗಿ ಉಳಿದ ಮೂರು ಎಸೆತಗಳನ್ನು ವಿರಾಟ್​ ಕೊಹ್ಲಿ ಪೂರ್ಣಗೊಳಿಸಿದರು.

ಒಂದೊಮ್ಮೆ ಹಾರ್ದಿಕ್​ ಪಾಂಡ್ಯ ಅವರಿಗೆ ಗಂಭೀರ ಗಾಯಗೊಂಡಿದ್ದರೆ ಅವರು ಟೂರ್ನಿಯಿಂದ ಹೊರಬೀಳುವ ಸಾಧ್ಯತೆ ಇದೆ. ಹೀಗಾದರೆ ಭಾರತ ತಂಡಕ್ಕೆ ಹಿನ್ನಡೆಯಾಗುವುದು ಖಚಿತ. ಏಕೆಂದರೆ ಅವರ ಸ್ಥಾನಕ್ಕೆ ಸೂಕ್ತ ಆಲ್​ರೌಂಡರ್​ ಆಟಗಾರ ಇಲ್ಲ. ಶಿವಂ ದುಬೆ ಇದ್ದರೂ ಅವರ ಬೌಲಿಂಗ್​ನಲ್ಲಿ ಅಷ್ಟು ಡೆಪ್ತ್​ ಇಲ್ಲ. ಹಾಗೂ ಅವರಿಗೆ ನಿಂತು ಆಡುವ ತಾಳ್ಮೆಯೂ ಇಲ್ಲ. ಫೀಲ್ಡಿಂಗ್​ ಕೂಡ ಸಾಧಾರಣಮಟ್ಟದಿಂದ ಕೂಡಿದೆ. ಶಾರ್ದೂಲ್​ ಠಾಕೂರ್​ ಅವರು ತಂಡದಲ್ಲಿದ್ದರೂ ಅವರ ಪ್ರದರ್ಶನ ಕಳಪೆಮಟ್ಟದಿಂದ ಕೂಡಿದೆ. ಅವರ ಉಪಸ್ಥಿತಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವ ಹಾಗಿದೆ. ಒಟ್ಟಾರೆ ಪಾಂಡ್ಯ ಗಾಯ ತಂಡಕ್ಕೆ ಚಿಂತೆಗೀಡು ಮಾಡಿದೆ.

ಇದನ್ನೂ ಓದಿ Virat Kohli: 8 ವರ್ಷಗಳ ಬಳಿಕ ವಿಶ್ವಕಪ್​ ಟೂರ್ನಿಯಲ್ಲಿ ಬೌಲಿಂಗ್​ ನಡೆಸಿದ ವಿರಾಟ್​ ಕೊಹ್ಲಿ

ಸದ್ಯ ಮೈದಾನ ತೊರೆದಿರುವ ಹಾರ್ದಿಕ್​ ಅವರು ಬ್ಯಾಟಿಂಗ್​ ನಡೆಸುತ್ತಾರೋ ಎಂದು ಕಾದು ನೋಡಬೇಕಿದೆ. ಅವರ ಗಾಯದ ಬಗ್ಗೆ ಬಿಸಿಸಿಐ ಅಧಿಕೃತ ಮಾಹಿತಿ ನೀಡಿದ್ದು ಅವರನ್ನು ಸ್ಕ್ಯಾನಿಂಗ್​ಗೆ ಕರೆದೊಯ್ಯಲಾಗಿದೆ ಎಂದು ತಿಳಿಸಿದೆ.

8 ವರ್ಷಗಳ ಬಳಿಕ ವಿಶ್ವಕಪ್​ನಲ್ಲಿ ಕೊಹ್ಲಿ ಬೌಲಿಂಗ್​

ಟೀಮ್​ ಇಂಡಿಯಾದ ಸ್ಟಾರ್​ ಆಟಗಾರ ವಿರಾಟ್​ ಕೊಹ್ಲಿ(virat kohli) ಅವರು 8 ವರ್ಷಗಳ ಬಳಿಕ ವಿಶ್ವಕಪ್​ ಟೂರ್ನಿಯಲ್ಲಿ ಬೌಲಿಂಗ್​ ನಡೆಸಿ ಗಮನಸೆಳೆದಿದ್ದಾರೆ. ಬಾಂಗ್ಲಾ(India vs Bangladesh) ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ಹಾರ್ದಿಕ್​ ಪಾಂಡ್ಯ ಅವರು ಗಾಯಗೊಂಡ ಕಾರಣ ಅವರ ಓವರ್​ ಅನ್ನು ಪೂರ್ತಿಗೊಳಿಸುವ ಮೂಲಕ ಈ ಸಾಧನೆ ಮಾಡಿದರು.

2011ರ ವಿಶ್ವಕಪ್​ ಫೈನಲ್​ನಲ್ಲಿಯೂ ಬೌಲಿಂಗ್​

ವಿರಾಟ್​ ಕೊಹ್ಲಿ ಅವರು ಏಕದಿನ ವಿಶ್ವಕಪ್​ನಲ್ಲಿ ಮೊದಲ ಬಾರಿ ಬೌಲಿಂಗ್​ ನಡೆಸಿದ್ದು 2011ರ ವಿಶ್ವಕಪ್​ನಲ್ಲಿ. ಆಸ್ಟ್ರೇಲಿಯಾ ವಿರುದ್ಧದ ಸೆಮಿಫೈನಲ್​ ಪಂದ್ಯದಲ್ಲಿ ಕೊಹ್ಲಿ ಒಂದು ಓವರ್​ ಎಸೆದು 6 ರನ್​ ನೀಡಿದ್ದರು. ಇದಾದ ಬಳಿಕ ಶ್ರೀಲಂಕಾ ವಿರುದ್ಧ ನಡೆದ ಫೈನಲ್​ ಪಂದ್ಯದಲ್ಲಿಯೂ ಒಂದು ಓವರ್​ ಎಸೆದಿದ್ದರು. ಇಲ್ಲಿಯೂ 6 ರನ್​ ಬಿಟ್ಟುಕೊಟ್ಟಿದ್ದರು. ಕೊನೆಯ ಬಾರಿ ವಿಶ್ವಕಪ್​ನಲ್ಲಿ ಕೊಹ್ಲಿ ಬೌಲಿಂಗ್​ ನಡೆಸಿದ್ದು 2015ರಲ್ಲಿ ಸಿಡ್ನಿಯಲ್ಲಿ ನಡೆದ ಪಂದ್ಯದಲ್ಲಿ ಆಸೀಸ್​ ವಿರುದ್ಧ ಒಂದು ಓವರ್​ ಬೌಲಿಂಗ್​ ನಡೆಸಿ 7 ರನ್​ ಬಿಟ್ಟುಕೊಟ್ಟಿದ್ದರು. ಇದೀಗ 8 ವರ್ಷಗಳ ಬಳಿಕ ಮತ್ತೆ ವಿಶ್ವಕಪ್​ನಲ್ಲಿ ಬೌಲಿಂಗ್​ ನಡೆಸಿದ್ದಾರೆ. ಆದರೆ ಇಲ್ಲಿ ಮೂರು ಬೌಲ್​ ಮಾತ್ರ ಎಸೆದರು.

Exit mobile version