Site icon Vistara News

IPL 2024: ಕೋಚ್​, ರೋಹಿತ್​ಗೆ ಅವಮಾನ ಮಾಡಿದ ಹಾರ್ದಿಕ್​ ಪಾಂಡ್ಯ; ವಿಡಿಯೊ ವೈರಲ್​

Hardik Pandya

ಮುಂಬಯಿ: ಮುಂಬೈ ಇಂಡಿಯನ್ಸ್ ತಂಡದ ನೂತನ ನಾಯಕನಾಗಿರುವ ಹಾರ್ದಿಕ್ ಪಾಂಡ್ಯ(Hardik Pandya) ಅವರು ದರ್ಪ ತೋರಿದ ವಿಡಿಯೊವೊಂದು ವೈರಲ್​ ಆಗಿದೆ. ಅಭ್ಯಾಸ ವೇಳೆ ಬೌಲಿಂಗ್ ಕೋಚ್ ಲಸಿತ್ ಮಾಲಿಂಗ ಮತ್ತು ಮಾಜಿ ನಾಯಕ ರೋಹಿತ್ ಶರ್ಮಾ ಮುಂದೆ ಸ್ಟ್ರೆಚರ್ ಮೇಲೆ ಮಲಗಿ ಪಾಂಡ್ಯ ಅಗೌರವ ತೋರಿದ್ದಾರೆ. ಪಾಂಡ್ಯ ವರ್ತನೆಗೆ ಹಲವರು ಇದೀಗ ವಿರೋಧ ವ್ಯಕ್ತಪಡಿಸಿದ್ದಾರೆ.

ಅಭ್ಯಾಸ ಶಿಬಿರದಲ್ಲಿ ಬೌಲಿಂಗ್ ಕೋಚ್ ಲಸಿತ್ ಮಾಲಿಂಗ ಅವರು ಸಲಹೆ ನೀಡುತ್ತಿರುವುದು ವಿಡಿಯೊದಲ್ಲಿ ಕಾಣಬಹುದಾಗಿದೆ. ಆದರೆ, ಪಾಂಡ್ಯ ಮಾತ್ರ ತನಗೆಲ್ಲ ತಿಳಿದವರಂತೆ ಈ ಸಲಹೆಯನ್ನು ಕಡೆಗಣಿಸುವ ರೀತಿಯಲ್ಲಿ ಸ್ಟ್ರೆಚರ್ ಮೇಲೆ ಮಲಗಿ ದರ್ಪದಿಂದ ನಡೆದುಕೊಂಡಿದ್ದಾರೆ. ಇದೇ ವೇಳೆ ರೋಹಿತ್​ ಶರ್ಮ ಕೂಡ ಇದ್ದರು. ತಂಡವನ್ನು ಮುನ್ನಡೆಸುವ ಮುನ್ನವೇ ಪಾಂಡ್ಯ ಈ ರೀತಿಯ ದರ್ಪದಿಂದ ನಡೆದುಕೊಂಡಿರುವುದು ಸ್ವತಃ ಮುಂಬೈ ತಂಡದ ಅಭಿಮಾನಿಗಳಿಗೂ ಬೇಸರ ತಂದಿದೆ.

ಹಾರ್ದಿಕ್ ಪಾಂಡ್ಯ (Hardik Pandya) ಅವರಿಗೆ ನಾಯಕತ್ವ ನೀಡಿದ ಕುರಿತು ಈಗಾಗಲೇ ಪರ-ವಿರೋಧಗಳ ಚರ್ಚೆ ನಡೆದಿದೆ. ಅಲ್ಲದೆ ತಂಡದ ಕೋಚ್​ ಕೂಡ ಇದಕ್ಕೆ ಸ್ಪಷ್ಟನೆ ನೀಡಿದ್ದಾರೆ. ಆದರೆ, ರೋಹಿತ್​ ಅಭಿಮಾನಿಗಳು ಮಾತ್ರ ಹಾರ್ದಿಕ್​ ಪಾಂಡ್ಯ ಬಗ್ಗೆ ಆಕ್ರೋಶ ವ್ಯಕ್ತಪಡಿಸುತ್ತಲೇ ಬರುತ್ತಿದ್ದಾರೆ. ಅಲ್ಲದೆ ಮುಂಬೈ ತಂಡದ ಆಟಗಾರರು ಕೂಡ ಪರೋಕ್ಷವಾಗಿ ಪಾಂಡ್ಯ ನಾಯಕತ್ವಕ್ಕೆ ವಿರೋಧ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ IPL 2024: ಆರ್​ಸಿಬಿ ಅಭಿಮಾನಿಗಳಿಗೆ ನಿರಾಸೆ; ಕೊಹ್ಲಿ ಐಪಿಎಲ್​ ಆಡುವುದು ಅನುಮಾನ!

ವಿರೋಧಿಗಳಿಗೆ ತಕ್ಕ ಉತ್ತರ ನೀಡಿದ್ದ ಪಾಂಡ್ಯ


ಇತ್ತೀಚೆಗೆ ಪಾಂಡ್ಯ ತಮ್ಮನ್ನು ವಿರೋಧಿಸಿದವರಿಗೆ ನಟ ಅಮಿತಾಭ್ ಬಚ್ಚನ್ ಶೈಲಿಯಲ್ಲಿ ತಕ್ಕ ಉತ್ತರ ನೀಡಿದ್ದರು. ಸಂದರ್ಶನವೊಂದರಲ್ಲಿ ಮಾತನಾಡುವ ವೇಳೆ ‘ಸಂಬಂಧಗಳಲ್ಲಿ ನಾನು ನಿಮ್ಮ ಕ್ಯಾಪ್ಟನ್​ ಆಗುತ್ತೇನೆ. ನನ್ನ ಹೆಸರು ಹಾರ್ದಿಕ್​ ಪಾಂಡ್ಯ’.(ರಿಶ್ತೆ ಮೆ ಹಮ್‌ ತುಮಾರೆ ಕ್ಯಾಪ್ಟನ್‌ ಲಗ್ತೇ ಹೈ ನಾಮ್‌ ಹೈ ಪಾಂಡೆ) ಎಂದು ಹೇಳುವ ಮೂಲಕ ತಮ್ಮನ್ನು ವಿರೋಧಿಸುವವರಿಗೆ ತಿರುಗೇಟು ನೀಡಿದ್ದರು. ಈ ವಿಡಿಯೊ ವೈರಲ್​ ಆಗಿತ್ತು. ಜತೆಗೆ ರೋಹಿತ್​ ಶರ್ಮ ಅವರ ಅಭಿಮಾನಿಗಳು ಮತ್ತೆ ಕೆರಳುವಂತೆ ಮಾಡಿತ್ತು. ಇದು ರೋಹಿತ್​ ಅವರಿಗೆ ಅವಮಾನ ಮಾಡಲೆಂದೇ ಪಾಂಡ್ಯ ಈ ರೀತಿ ಹೇಳಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದರು.

5 ಬಾರಿಯ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ತಂಡ ಈ ಬಾರಿ ಟೂರ್ನಿಯಲ್ಲಿ ಕಳೆದ ಬಾರಿಯ ರನ್ನರ್‌-ಅಪ್‌ ಗುಜರಾತ್‌ ಟೈಟಾನ್ಸ್‌ ವಿರುದ್ಧ ಆಡುವ ಮೂಲಕ ಅಭಿಯಾನ ಆರಂಭಿಸಲಿದೆ. ಈ ಪಂದ್ಯ ಮಾರ್ಚ್ 24ರಂದು ಅಹಮದಾಬಾದ್​ನ ನರೇಂದ್ರ ಮೋದಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆಯಲಿದೆ. ದ್ವಿತೀಯ ಪಂದ್ಯವನ್ನು ಮಾರ್ಚ್​ 27ರಂದು ಸನ್‌ರೈಸರ್ಸ್‌ ಹೈದರಾಬಾದ್ ವಿರುದ್ಧ ಸೆಣಸಾಡಲಿದೆ.

Exit mobile version