Site icon Vistara News

Hardik Pandya : ಸೋಶಿಯಲ್​ ಮೀಡಿಯಾದಲ್ಲಿ ಹೊಸ ದಾಖಲೆ ಬರೆದ ಹಾರ್ದಿಕ್​ ಪಾಂಡ್ಯ; ಏನದು ಸಾಧನೆ

Hardik Pandya wrote a new record on social media; What an achievement

ಮುಂಬಯಿ: ಭಾರತ ತಂಡದ ಸ್ಟಾರ್​ ಆಲ್​ರೌಂಡರ್​ ಹಾರ್ದಿಕ್ ಪಾಂಡ್ಯ ತಂಡದ ಪರವಾಗಿ ಉತ್ತಮ ಪ್ರದರ್ಶನ ನೀಡುವ ಮೂಲಕ ಮಿಂಚುತ್ತಿದ್ದಾರೆ. ಇದೇ ವೇಳೆ ಅವರು ಸಾಮಾಜಿಕ ಜಾಲತಾಣದಲ್ಲೂ ಹೊಸ ದಾಖಲೆಯೊಂದನ್ನು ಬರೆದಿದ್ದಾರೆ. ಅವರೀಗ ಇನ್​ಸ್ಟಾಗ್ರಾಮ್​ನಲ್ಲಿ 2.5 ಕೋಟಿ ಅಭಿಮಾನಿಗಳನ್ನು ಹೊಂದಿರುವ ಅತಿ ಕಿರಿಯ ಕ್ರಿಕೆಟಿಗ ಎಂದು ಎನಿಸಿಕೊಂಡಿದ್ದಾರೆ. 29 ವರ್ಷದ ಅವರೀಗ ಜಾಗತಿಕ ಕ್ರೀಡಾ ಐಕಾನ್​ಗಳಾದ ರಾಫೆಲ್​ ನಡಾಲ್​, ರೋಜರ್​ ಫೆಡರರ್​ ಅವರಿಗಿಂತಲೂ ಹೆಚ್ಚು ಅಭಿಮಾನಿಗಳನ್ನು ಹೊಂದಿದ್ದಾರೆ.

ನನ್ನೆಲ್ಲ ಅಭಿಮಾನಿಗಳಿಗೆ ನಾನು ಧನ್ಯವಾದ ಹೇಳುತ್ತಿದ್ದೇನೆ. ಪ್ರತಿಯೊಬ್ಬ ಅಭಿಮಾನಿಯೂ ನನಗೆ ವಿಶೇಷ. ಅವರ ಪ್ರೀತಿ ಮತ್ತು ವಿಶ್ವಾಸಕ್ಕೆ ಋಣಿಯಾಗಿದ್ದೇನೆ. ಪ್ರತಿಯೊಂದು ಹಂತದಲ್ಲೂ ಅವರು ನನಗೆ ಬೆಂಬಲ ಕೊಟ್ಟಿದ್ದಾರೆ ಎಂದು ಹಾರ್ದಿಕ್​ ಪಾಂಡ್ಯ ಬರೆದುಕೊಂಡಿದ್ದಾರೆ.

ಇದನ್ನೂ ಓದಿ : Hardik Pandya Marriage: ಇಲ್ಲಿವೆ ಹಾರ್ದಿಕ್ ಪಾಂಡ್ಯ ಮರು ಮದುವೆಯ ಕ್ಷಣಗಳು

ಹಾರ್ದಿಕ್​ ಪಾಂಡ್ಯ ಟೀಮ್​ ಇಂಡಿಯಾದ ಪರ ಅತ್ಯುತ್ತಮ ಪ್ರದರ್ಶನ ನೀಡುವ ಜತೆಗೆ ಕಳೆದ ಬಾರಿಯ ಐಪಿಎಲ್​ನಲ್ಲಿ ಗುಜರಾತ್​ ಟೈಟನ್ಸ್​ ತಂಡವನ್ನು ಚಾಂಪಿಯನ್​ ಪಟ್ಟಕ್ಕೇರಿಸಿದ್ದರು. ಅಭಿಮಾನಿಗಳ ಜತೆಗೆ ಭಾವನಾತ್ಮಕ ಸಂಬಂಧ ಬೆಳೆಸುವ ಕಾರಣ ಹೆಚ್ಚು ಹೆಚ್ಚು ಮಂದಿ ಅವರನ್ನು ಫಾಲೋ ಮಾಡುತ್ತಿರುತ್ತಾರೆ.

Exit mobile version