ಭುವನೇಶ್ವರ: ಹಾಕಿ ವಿಶ್ವ ಕಪ್ನಲ್ಲಿ ಪಾಲ್ಗೊಂಡಿರುವ ಭಾರತ ಹಾಕಿ ತಂಡಕ್ಕೆ ದೊಡ್ಡ ಹಿನ್ನಡೆಯಾಗಿದೆ. ತಂಡದ ಸ್ಟಾರ್ ಮಿಡ್ ಫೀಲ್ಡರ್ ಹಾರ್ದಿಕ್ ಸಿಂಗ್ ಅವರು ಗಾಯಗೊಂಡಿದ್ದು ಅವರು ವೇಲ್ಸ್ ವಿರುದ್ಧದ ಪಂದ್ಯದಲ್ಲಿ ಪಾಲ್ಗೊಳ್ಳುವುದು ಅನುಮಾನ ಎಂದು ಹೇಳಲಾಗಿದೆ.
ಭಾನುವಾರ ನಡೆದ ಡಿ ಗುಂಪಿನ ಇಂಗ್ಲೆಂಡ್ ವಿರುದ್ಧದ ಪಂದ್ಯದ ಕೊನೇ ನಿಮಿಷದ ಆಟದ ವೇಳೆ ಹಾರ್ದಿಕ್ ಸಿಂಗ್ ಸ್ನಾಯು ಸೆಳೆತಕ್ಕೆ ಒಳಗಾಗಿದ್ದರು. ಮಂಗಳವಾರ ವೇಲ್ಸ್ ವಿರುದ್ಧ ನಡುವೆ ಪಂದ್ಯ ನಡೆಯಲಿದ್ದು, ಅದಕ್ಕಿಂತ ಮೊದಲು ಹಾರ್ದಿಕ್ ಸಿಂಗ್ ಗುಣಮುಖರಾಗುವುದು ಅನುಮಾನ ಎನಿಸಿದೆ. ರಾಜ್ಕುಮಾರ್ ಪಾಲ್ ಭಾರತ ತಂಡದ ಮೀಸಲು ಮಿಡ್ಫೀಲ್ಡರ್ ಆಗಿದ್ದು ಅವರು ಹಾರ್ದಿಕ್ ಬದಲಿಗೆ ಆಡಲಿದ್ದಾರೆ ಎಂದು ಹೇಳಲಾಗಿದೆ.
ಭಾರತ ಹಾಗೂ ಇಂಗ್ಲೆಂಡ್ ತಂಡಗಳ ನಡುವಿನ ಪಂದ್ಯ ಡ್ರಾದಲ್ಲಿ ಮುಕ್ತಾಯ ಕಂಡಿತ್ತು. ಆದರೆ, ತಲಾ ಎರಡು ಪಂದ್ಯಗಳನ್ನು ಆಡಿರುವ ಭಾರತ ಹಾಗೂ ಇಂಗ್ಲೆಂಡ್ ತಂಡಗಳ ನಡುವೆ ಆಂಗ್ಲರ ಪಡೆ ಗೋಲ್ಗಳ ಅಂತರ ಹೆಚ್ಚು ಪಡೆದಿರುವ ಕಾರಣ ಅಂಕಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ. ಗುಂಪು ಹಂತದಲ್ಲಿ ಮೊದಲ ಅಂಕಪಟ್ಟಿಯಲ್ಲಿ ಮೊದಲ ಸ್ಥಾನ ಪಡೆಯುವ ತಂಡ ನೇರವಾಗಿ ಕ್ವಾರ್ಟರ್ಫೈನಲ್ಸ್ಗೇರಲಿದೆ.