ಲಾರ್ಡ್ಸ್: ಭಾರತ ಮಹಿಳೆಯರ ಕ್ರಿಕೆಟ್ ತಂಡದ ವೇಗದ ಬೌಲರ್ ಜೂಲನ್ ಗೋಸ್ವಾಮಿಗೆ ಶನಿವಾರ ಇಂಗ್ಲೆಂಡ್‌ನ ಲಾರ್ಡ್ಸ್‌ನಲ್ಲಿ ನಡೆದ ಏಕ ದಿನ ಪಂದ್ಯ ಕೊನೇ ಅಂತಾರಾಷ್ಟ್ರೀಯ ಹಣಾಹಣಿ. ಈ ಪಂದ್ಯದ ಟಾಸ್ ವೇಳೆ ನಾಯಕಿ ಹರ್ಮನ್‌ಪ್ರೀತ್ ಕೌರ್, ಜೂಲನ್ ಅವರನ್ನೂ ಕರೆದುಕೊಂಡು ಹೋಗಿದ್ದರು. ಟಾಸ್ ಅಗಿ ಇನ್ನೇನು ಮಾತನಾಡಲು ಆರಂಭಿಸುತ್ತಿದ್ದಂತೆ ಕಣ್ಣೀರು ಹಾಕಿದರು.
ಟಾಸ್ ಮೊದಲಿಗೆ ಹರ್ಮನ್‌ಪ್ರೀತ್ ಅವರಿಗೆ ಸ್ಮರಣಿಕೆಯನ್ನೂ ನೀಡಲಾಯಿತು. ಈ ಸಂದರ್ಭದಲ್ಲಿ ಹರ್ಮನ್‌ಪ್ರೀತ್ ಕೌರ್ ಕಣ್ಣೀರು ಹಾಕಿದರು. ತಕ್ಷಣವೇ ಜೂಲನ್ ಅವರು ಅವರನ್ನು ಅಪ್ಪಿ ಸಂತೈಸಿಸಿದರು.
ಈ ಪಂದ್ಯವನ್ನು ಹೊರತುಪಡಿಸಿದರೆ ಜೂಲನ್ ಗೋಸ್ವಾಮಿ ಅವರು ೧೨ ಟೆಸ್ಟ್ ಪಂದ್ಯ, ೨೧೪ ಏಕ ದಿನ ಪಂದ್ಯ, ೬೮ ಟಿ೨೦ ಪಂದ್ಯಗಳಲ್ಲಿ ಆಡಿದ್ದಾರೆ. ಎಲ್ಲ ಮಾದರಿಯಲ್ಲಿ ಸೇರಿ ೩೫೩ ವಿಕೆಟ್‌ಗಳನ್ನು ಕಬಳಿಸಿದ್ದು, ಮಹಿಳೆಯರ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಅಟಗಾರ್ತಿ ಎನಿಸಿಕೊಂಡಿದ್ದಾರೆ.
ಇದನ್ನೂ ಓದಿ | Jhulan Goswami | ಜೂಲನ್‌ಗೆ ಇಂದು ಕೊನೇ ಅಂತಾರಾಷ್ಟ್ರೀಯ ಪಂದ್ಯ, ಇಲ್ಲಿವೆ ಕೆಲವು ದಾಖಲೆಗಳು