ಕೆಬೆರ್ಹಾ: ಟಿ20 ವಿಶ್ವ ಕಪ್ನ ಗುಂಪು ಹಂತದ ಕೊನೇ ಪಂದ್ಯದಲ್ಲಿ ಆಡುತ್ತಿರುವ ಭಾರತ ಮಹಿಳೆಯರ ತಂಡದ ನಾಯಕಿ ಹರ್ಮನ್ಪ್ರೀತ್ ಕೌರ್, ಭಾರತ ಪುರುಷರ ತಂಡದ ನಾಯಕ ರೋಹಿತ್ ಶರ್ಮ ಅವರನ್ನು ಹಿಮ್ಮೆಟ್ಟಿಸಿ ವಿಶ್ವ ದಾಖಲೆ ಬರೆದಿದ್ದಾರೆ. ಹರ್ಮನ್ಪ್ರೀತ್ ಕೌರ್ ಈಗ ಅತಿ ಹೆಚ್ಚು ಟಿ20 ಪಂದ್ಯಗಳಲ್ಲಿ ಪಾಲ್ಗೊಂಡ ಕ್ರಿಕೆಟರ್ ಎಂಬ ಗರಿಮೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಐರ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಹರ್ಮನ್ಪ್ರಿತ್ ಕೌರ್ ಕಣಕ್ಕೆ ಇಳಿಯುವ ಮೂಲಕ ಈ 150 ಪಂದ್ಯಗಳನ್ನು ಆಡಿರುವ ಏಕೈಕ ಆಟಗಾರ್ತಿ ಎಂಬ ಸಾಧನೆ ಮಾಡಿದರು.
ನ್ಯೂಜಿಲ್ಯಾಂಡ್ ತಂಡದ ಸೂಜಿ ಬೇಟ್ಸ್ ಹರ್ಮನ್ಪ್ರೀತ್ ಕೌರ್ ಅವರಿಗಿಂತ ಹಿಂದಿದ್ದು, ಅವರು 143 ಪಂದ್ಯಗಳನ್ನು ಆಡಿದ್ದಾರೆ. ಭಾರತದ ಸ್ಟಾರ್ ಆಟಗಾರ್ತಿ ಸ್ಮೃತಿ ಮಂಧಾನಾ ಅವರು 115 ಪಂದ್ಯಗಳಲ್ಲಿ ಪಾಲ್ಗೊಂಡಿದ್ದಾರೆ.
ಪುರುಷರ ವಿಭಾಗದಲ್ಲಿ ರೋಹಿತ್ ಶರ್ಮಾ ಗರಿಷ್ಠ ಪಂದ್ಯಗಳನ್ನು ಆಡಿದ್ದಾರೆ. ಅವರು ಒಟ್ಟು 148 ಪಂದ್ಯಗಳಲ್ಲಿ ಭಾಗಿಯಾಗಿದ್ದಾರೆ. ವಿಶ್ವ ಕಪ್ನಲ್ಲಿ ವೆಸ್ಟ್ ಇಂಡೀಸ್ ತಂಡದ ವಿರುದ್ದ ಕಣಕ್ಕೆ ಇಳಿಯುವ ವೇಳೆ ಹರ್ಮನ್ಪ್ರೀತ್ ಕೌರ್, ರೋಹಿತ್ ಶರ್ಮಾ ಅವರ ದಾಖಲೆ ಮುರಿದಿದ್ದರು. ಇಂಗ್ಲೆಂಡ್ ವಿರುದ್ಧ ದಾಖಲೆ ಮುರಿದಿದ್ದರು. ಇದೀಗ 150 ಗಡಿ ದಾಟಿ ವಿಶ್ವ ದಾಖಲೆ ಮಾಡಿದ್ದಾರೆ.
ಇದನ್ನೂ ಓದಿ : ICC Women’s ODI Team of the Year: ಐಸಿಸಿ ವರ್ಷದ ಮಹಿಳಾ ಏಕದಿನ ತಂಡಕ್ಕೆ ಟೀಮ್ ಇಂಡಿಯಾದ ಹರ್ಮನ್ಪ್ರೀತ್ ಕೌರ್ ನಾಯಕಿ
ಈ ಪಂದ್ಯದಲ್ಲಿ ಕಣಕ್ಕೆ ಇಳಿಯು ವೇಳೆ ನನ್ನ ತಂಡದ ಸಹ ಸದಸ್ಯರಿಂದ ಶುಭಾಶಯಗಳು ಹರಿದು ಬಂದವು. ಇದೊಂದು ಅಭೂತಪೂರ್ಣ ಕ್ಷಣ. ಇಷ್ಟೊಂದು ಪಂದ್ಯಗಳಲ್ಲಿ ಆಡಲು ಅವಕಾಶ ಮಾಡಿಕೊಟ್ಟ ಬಿಸಿಸಿಐ ಹಾಗೂ ಐಸಿಸಿಗೆ ಧನ್ಯವಾದಗಳು ಎಂದು ಹರ್ಮನ್ಪ್ರೀತ್ ಕೌರ್ ಪ್ರತಿಕ್ರಿಯೆ ನೀಡಿದ್ದಾರೆ.