ದುಬೈ: ಐಸಿಸಿ ಪ್ರಕಟಿಸಿರುವ ವರ್ಷದ ಏಕದಿನ ಮಹಿಳಾ ಕ್ರಿಕೆಟ್ ತಂಡದಲ್ಲಿ (ICC Women’s ODI Team of the Year) ಭಾರತ ಮಹಿಳಾ ತಂಡದ ಮೂರು ಆಟಗಾರ್ತಿಯರು ಸ್ಥಾನ ಪಡೆದಿದ್ದಾರೆ. ಜತೆಗೆ ತಂಡದ ನಾಯಕಿಯಾಗಿ ಹರ್ಮನ್ಪ್ರೀತ್ ಕೌರ್ ಆಯ್ಕೆಯಾಗಿದ್ದಾರೆ.
ಟಿ20 ವರ್ಷದ ಕ್ರಿಕೆಟ್ ತಂಡದಲ್ಲಿಯೂ ಭಾರತೀಯ ಆಟಗಾರ್ತಿಯರೇ ಮೇಲುಗೈ ಸಾಧಿಸಿದ್ದರು. ಇದೀಗ ಏಕದಿನ ತಂಡದಲ್ಲಿಯೂ ಮೂರು ಮಂದಿ ಸ್ಥಾನ ಪಡೆಯುವ ಮೂಲಕ ಪಾರಮ್ಯ ಮೆರೆದಿದ್ದಾರೆ. ಹರ್ಮನ್ಪ್ರೀತ್ ಕೌರ್, ಸ್ಮೃತಿ ಮಂಧಾನಾ, ರೇಣುಕಾ ಸಿಂಗ್ ಏಕದಿನ ತಂಡದಲ್ಲಿ ಸ್ಥಾನ ಪಡೆದ ಪ್ರಮುಖರು. ಇದರಲ್ಲಿ ಸ್ಮೃತಿ ಮಂಧಾನಾ ಮತ್ತು ರೇಣುಕಾ ಸಿಂಗ್ ಟಿ20 ವರ್ಷದ ಕ್ರಿಕೆಟ್ ತಂಡಲ್ಲಿಯೂ ಸ್ಥಾನ ಪಡೆದಿದ್ದಾರೆ.
ಹರ್ಮನ್ಪ್ರೀತ್ ಕೌರ್ ಕ್ರಿಕೆಟ್ 2022 ರಲ್ಲಿ ಐದು ಅರ್ಧಶತಕ ಹಾಗೂ ಎರಡು ಶತಕ ದಾಖಲಿಸಿದ್ದಾರೆ. ಸೆಪ್ಟೆಂಬರ್ ನಲ್ಲಿ ಇಂಗ್ಲೆಂಡ್ ವಿರುದ್ಧ ಅಜೇಯ 143 ರನ್ ಗಳಿಸಿ ಮಿಂಚಿದ್ದರು. ಈ ಸಾಧನೆಯನ್ನು ಪರಿಗಣಿಸಿ ಐಸಿಸಿ ತನ್ನ ವರ್ಷದ ಏಕದಿನ ತಂಡದಲ್ಲಿ ನಾಯಕಿಯನ್ನಾಗಿ ಮಾಡಿದೆ.
ಐಸಿಸಿ ವರ್ಷದ ಏಕದಿನ ಮಹಿಳಾ ತಂಡ
ಹರ್ಮನ್ಪ್ರೀತ್ ಕೌರ್(ನಾಯಕಿ, ಭಾರತ), ಸ್ಮೃತಿ ಮಂಧಾನಾ(ಭಾರತ), ರೇಣುಕಾ ಸಿಂಗ್(ಭಾರತ), ಅಲಿಸ್ಸಾ ಹೀಲಿ(ಆಸ್ಟ್ರೇಲಿಯಾ), ಲಾರಾ ವೊಲ್ವಾರ್ಡ್ಟ್(ದಕ್ಷಿಣ ಆಫ್ರಿಕಾ), ನ್ಯಾಟ್ ಸಿವರ್(ಇಂಗ್ಲೆಂಡ್), ಬೆತ್ ಮೂನಿ (ಆಸ್ಟ್ರೇಲಿಯಾ), ಅಮೆಲಿಯಾ ಕೆರ್(ನ್ಯೂಜಿಲ್ಯಾಂಡ್), ಸೋಫಿ ಎಕ್ಲೆಸ್ಟೋನ್(ಇಂಗ್ಲೆಂಡ್), ಅಯಬೊಂಗ ಖಾಕಾ(ದಕ್ಷಿಣ ಆಫ್ರಿಕಾ), ಶಬ್ನಿಮ್ ಇಸ್ಮಾಯಿಲ್(ದಕ್ಷಿಣ ಆಫ್ರಿಕಾ).
ಇದನ್ನೂ ಓದಿ | ICC Women’s T20I Team of the Year 2022: ಐಸಿಸಿ ವರ್ಷದ ಮಹಿಳಾ ಟಿ20 ತಂಡ; ಭಾರತೀಯ ಆಟಗಾರ್ತಿಯರದ್ದೇ ಪಾರಮ್ಯ