Site icon Vistara News

Harmanpreet Kaur : ಟಿ20 ಐ ರನ್​ ಗಳಿಕೆಯಲ್ಲಿ ಸ್ಮೃತಿ ಮಂಧಾನಾ ಹಿಂದಿಕ್ಕಿದ ಹರ್ಮನ್​ಪ್ರೀತ್ ಕೌರ್​

Harmanpreet Kaur

ಬೆಂಗಳೂರು ; ಮಹಿಳಾ ಟಿ20 ಕ್ರಿಕೆಟ್​​ನಲ್ಲಿ ಭಾರತ ತಂಡದ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಹರ್ಮನ್​​ಪ್ರೀತ್​ ಕೌರ್ (Harmanpreet Kaur) ಪಾತ್ರರಾಗಿದ್ದಾರೆ. ಜುಲೈ 21 ರಂದು ಡಂಬುಲ್ಲಾದಲ್ಲಿ ನಡೆದ ಏಷ್ಯಾ ಕಪ್​ ಟೂರ್ನಿಯ ಲೀಗ್ ಹಂತದ ಯುಎಇ ವಿರುದ್ಧ ಪಂದ್ಯದಲ್ಲಿ ಅವರು ಈ ಸಾಧನೆ ಮಾಡಿದ್ದಾರೆ.

ಟಾಸ್ ಗೆದ್ದ ಯುಎಇ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಸ್ಮೃತಿ ಮಂಧಾನಾ 13 ರನ್ ಗಳಿಸಿ ಔಟಾದರು. ಬಳಿಕ ಶೆಫಾಲಿ ವರ್ಮಾ 18 ಎಸೆತಗಳಲ್ಲಿ 37 ರನ್ ಗಳಿಸಿ ಔಟಾದರು. ಸ್ಮೃತಿ ಅವರ 3,378 ರನ್​​ಗಳ ದಾಖಲೆಯನ್ನು ಮುರಿಯಲು ಹರ್ಮನ್​ಪ್ರೀರ್​ಗೆ ಕೇವಲ 30 ರನ್​ಗಳ ಅವಶ್ಯಕತೆಯಿತ್ತು. 47 ಎಸೆತಗಳಲ್ಲಿ 7 ಬೌಂಡರಿ ಹಾಗೂ 1 ಸಿಕ್ಸರ್ ಸಿಡಿಸಿದ ಕೌರ್​ 66 ರನ್ ಬಾರಿಸಿದರು. ಜೆಮಿಮಾ ರೋಡ್ರಿಗಸ್ ಮತ್ತು ರಿಚಾ ಘೋಷ್ ಅವರೊಂದಿಗೆ ಅರ್ಧಶತಕದ ಜೊತೆಯಾಟ ಆಡಿದರು. ಪಂಜಾಬ್ ಬ್ಯಾಟರ್​ ಅಂತಿಮವಾಗಿ ಅಂತಿಮ ಓವರ್​ನಲ್ಲಿ ರನ್ ಔಟ್ ಆದರು.

171 ಟಿ20 ಪಂದ್ಯಗಳನ್ನಾಡಿರುವ ಹರ್ಮನ್​ಪ್ರೀತ್​​ 107.35ರ ಸ್ಟ್ರೈಕ್ ರೇಟ್ನಲ್ಲಿ 28.22ರ ಸರಾಸರಿಯಲ್ಲಿ 3,415 ರನ್ ಗಳಿಸಿದ್ದಾರೆ. ಈ ಸಮಯದಲ್ಲಿ ಅವರು ತಮ್ಮ ಉಪನಾಯಕಿಗಿಂತ 37 ರನ್ ಗಳ ಮುನ್ನಡೆ ಹೊಂದಿದ್ದಾರೆ.

ದಾಖಲೆ ಬರೆದ ರಿಚಾ ಘೋಷ್​, ಇತಿಹಾಸ ಸೃಷ್ಟಿಸಿದ ಭಾರತ ತಂಡ

ಡಂಬುಲ್ಲಾ: ಮಹಿಳೆಯರ ಏಷ್ಯಾಕಪ್ 2024ರಲ್ಲಿ (Women’s Asia Cup 2024) ಭಾರತ ತಂಡ ವಿನೂತನ ಸಾಧನೆ ಮಾಡಿದೆ. ಯುಎಇ ವಿರುದ್ಧದ ಗುಂಪು ಹಂತದ ಪಂದ್ಯದಲ್ಲಿ ಮೊದಲು ಬ್ಯಾಟ್​ ಮಾಡಿ 200 ರನ್ ದಾಖಲಿಸುವ ಮೂಲಕ ಟಿ20 ಕ್ರಿಕೆಟ್ ಇತಿಹಾಸದಲ್ಲಿ ಮೊದಲ ಬಾರಿಗೆ ದೊಡ್ಡ ಮೊತ್ತವನ್ನು ಪೇರಿಸಿದೆ. ಈ ಹಿಂದೆ ಭಾರತ ಇಂಗ್ಲೆಂಡ್ ವಿರುದ್ಧ 198 ರನ್​ ಬಾರಿಸಿತ್ತು. ಇದೇ ವೇಳೆ ಭಾರತದ ವಿಕೆಟ್​ ಕೀಪರ್ ರಿಚಾ ಘೋಷ್​ ಕೂಡ ವಿನೂತನ ಸಾಧನೆ ಮಾಡಿದ್ದಾರೆ. ಅವರು ಮಹಿಳಾ ಏಷ್ಯಾಕಪ್​​ನಲ್ಲಿ ಅರ್ಧಶತಕ ಬಾರಿಸಿದ ಭಾರತದ ಮೊದಲ ವಿಕೆಟ್ ಕೀಪರ್ ಬ್ಯಾಟರ್​ ಎಂಬ ಹೆಗ್ಗಳಿಕೆಗೆ ರಿಚಾ ಪಾತ್ರರಾಗಿದ್ದಾರೆ.

ಇದನ್ನೂ ಓದಿ: Joe Root : ವೆಸ್ಟ್​ ಇಂಡೀಸ್ ವಿರುದ್ಧ ಶತಕ ಬಾರಿಸಿ ಸ್ಟೀವ್​ ವಾ ದಾಖಲೆ ಸರಿಗಟ್ಟಿದ ಜೋ ರೂಟ್​

ಭಾರತ ತಂಡ ಸೆಮೀಸ್​ಗೆ

ಡಂಬುಲ್ಲಾ: ಭಾರತದ ಮಹಿಳೆಯರ ಕ್ರಿಕೆಟ್ ತಂಡ ಏಷ್ಯಾ ಕಪ್​ನಲ್ಲಿ (Women’s Asia Cup) ತನ್ನ ಎರಡನೇ ಗೆಲುವು ಸಾಧಿಸಿದೆ. ಈ ಮೂಲಕ ಸೆಮೀಸ್​ ಪ್ರವೇಶವನ್ನು ಸುಲಭಗೊಳಿಸಿದೆ. ಯುಎಇ (UAE Women’s Cricket Team) ತಂಡದ ವಿರುದ್ಧ ನಡೆದ ಪಂದ್ಯದಲ್ಲಿ ಅಮೋಘ 78 ರನ್​ ಗೆಲುವು ಸಾಧಿಸಿ ಗುಂಪು ಹಂತದಲ್ಲಿ ಒಟ್ಟು 4 ಅಂಕಗಳನ್ನು ಗಳಿಸಿದೆ. ಭಾರತ ತಂಡದ ಆಟಗಾರರು ಪಂದ್ಯದಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡರಲ್ಲೂ ಪಾರಮ್ಯ ಸಾಧಿಸಿ ತನ್ನ ಅಜೇಯ ಓಟ ಮುಂದುವರಿಸಿದೆ. ಇತ್ತೀಚಿನ ದಿನಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿರುವ ಭಾರತ ತಂಡ ಮತ್ತೊಂದು ಸ್ಮರಣೀಯ ವಿಜಯವನ್ನು ತನ್ನದಾಗಿಸಿಕೊಂಡಿತು.

Exit mobile version