ದುಬೈ: ಬಾಂಗ್ಲಾದೇಶ ಎದುರಿನ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದ ವೇಳೆ ಅಶಿಸ್ತಿನ ವರ್ತನೆ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅಂಪೈರ್‌ಗಳನ್ನು ಟೀಕಿಸಿದ ಕಾರಣಕ್ಕೆ ಭಾರತ ಮಹಿಳಾ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್(Harmanpreet Kaur) ಅವರಿಗೆ ಎರಡು ಪಂದ್ಯಗಳ ಅಮಾನತು ಶಿಕ್ಷೆ ವಿಧಿಸಲಾಗಿದೆ(Harmanpreet Kaur ban) ಎಂದು ತಿಳಿದುಬಂದಿದೆ. ಅಮಾನತು ಶಿಕ್ಷೆಯಿಂದ ಕೌರ್ ಅವರು ಚೀನಾದ ಹ್ಯಾಂಗ್‌ಝೌನಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್‌ನಲ್ಲಿ(Asian Games) ಮಹಿಳಾ ಟಿ20 ಪಂದ್ಯಾವಳಿಯ ಎರಡು ನಾಕೌಟ್ ಪಂದ್ಯಗಳನ್ನು ಕಳೆದುಕೊಳದ್ಳಲಿದ್ದಾರೆ ಎಂದು ವರಿಯಾಗಿದೆ.
ಬಾಂಗ್ಲಾ ವಿರುದ್ಧ ಶನಿವಾರ ನಡೆದ ಪಂದ್ಯವು ಟೈ ಆಗುವ ಮೂಲಕ ಅಂತ್ಯ ಕಂಡಿತು. ಮೂರು ಪಂದ್ಯಗಳ ಸರಣಿ 1-1 ಸಮಬಲಗೊಂಡ ಕಾರಣ ಜಂಟಿಯಾಗಿ ಪ್ರಶಸ್ತಿ ಹಂಚಿಕೊಳ್ಳಲಾಯಿತು. ಆದರೆ ಕೌರ್ ಅವರು ಈ ಪ್ರಶಸ್ತಿಯನ್ನು ಸ್ವೀಕರಿಸುವ ವೇಳೆ ಅಂಪೈರ್ ತೀರ್ಪು ಕಳಪೆಯಾಗಿತ್ತು ಎಂದು ಬಹಿರಂಗವಾಗಿ ಟೀಕಿಸಿದರು. ಅಲ್ಲದೇ ಅಂಪೈರ್‌ಗಳನ್ನೇ ವೇದಿಕೆಗೆ ಕರೆದು ಟ್ರೋಫಿ ನೀಡಬೇಕು ಎಂದು ವ್ಯಂಗ್ಯವಾಡಿದ್ದರು.
ಅಶಿಸ್ತು ತೋರಿ ನೀತಿ ಸಂಹಿತೆಯನ್ನು ಉಲ್ಲಂಘಿಸಿದಕ್ಕಾಗಿ ಕೌರ್ ಅವರಿಗೆ ಐಸಿಸಿ ಎರಡು ಪಂದ್ಯಗಳ ನಿಷೇಧ ವಿಧಿಸಲು ಮುಂದಾಗಿದ್ದು, ಇದರ ಜತೆ ಮೂರು ಅಥವಾ ನಾಲ್ಕು ಡಿಮೆರಿಟ್ ಪಾಯಿಂಟ್‌ಗಳ ದಂಡ ವಿಧಿಸುವ ಕುರಿತು ಚಿಂತನೆ ನಡೆಸಿದೆ ಎನ್ನಲಾಗಿದೆ. ಹೀಗಾಗಿ ಹರ್ಮನ್‌ಪ್ರೀತ್ ಅವರು ಮುಂಬರುವ ಏಷ್ಯನ್ ಕ್ರೀಡಾಕೂಟದಲ್ಲಿ ಎರಡು ಪಂದ್ಯಗಳಲ್ಲಿ ಆಡಲು ಅವಕಾಶ ಸಿಗದಿರುವ ಸಾಧ್ಯತೆ ಇದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
ಇದನ್ನೂ ಓದಿ Team India : ಭಾರತೀಯ ಮಹಿಳೆಯ ತಂಡಕ್ಕೆ ರೋಚಕ ಜಯ; ಹರ್ಮನ್‌ಪ್ರೀತ್ ಬಳಗಕ್ಕೆ ಟಿ20 ಸರಣಿ
ಉತ್ತಮವಾಗಿ ಆಡುತ್ತಿದ್ದ ಹರ್ಮನ್‌ಪ್ರೀತ್ ಕೌರ್ ಅವರು 34 ನೇ ಓವರ್ನಲ್ಲಿ ನಹಿದಾ ಅಖ್ತರ್ ಎಸೆತವನ್ನು ಸ್ವೀಪ್ ಮಾಡಿದರು. ಚೆಂಡು ಪ್ಯಾಡ್ಗೆ ಬಡಿದು ಸ್ಲಿಪ್ ಫೀಲ್ಡರ್ ಕೈ ಸೇರಿತು. ಬಾಂಗ್ಲಾ ಆಟಗಾರರು ಔಟ್ ಎಂದು ಮನವಿ ಮಾಡಿದರು. ಅಂಪೈರ್ ತಕ್ಷಣ ಔಟ್ ಎಂದು ಘೋಷಣೆ ಮಾಡಿದರು. ಚೆಂಡು ಬ್ಯಾಟ್ಗೆ ಬಡಿಯದೆ ಪ್ಯಾಡ್ಗೆ ತಾಗಿ ಕ್ಯಾಚ್ ಹಿಡಿದಿದ್ದಕ್ಕೆ ಔಟ್ ನೀಡಿದ ಕಾರಣ ಕೌರ್ ಕೋಪ ಪಿತ್ತ ನೇತ್ತಿಗೇರಿತು. ತಮ್ಮ ಅಸಮಾದಾನವನ್ನು ಅವರು ಬ್ಯಾಟ್ನಿಂದ ವಿಕೆಟ್ಗೆ ಬಡಿಯುವ ಮೂಲಕ ಹೊರಹಾಕಿದರು. ಇಲ್ಲಿಗೆ ಸುಮ್ಮನಾಗದ ಕೌರ್ ಬಳಿಕ ಅಂಪೈರ್ ಜತೆ ವಾಗ್ವಾದ ನಡೆಸಿ ಪೆವಿಲಿಯನ್ಗೆ ತೆರಳಿದ್ದರು.
ಪಂದ್ಯದ ಬಳಿಕವೂ ಈ ಅಂಪೈರ್ ಬಗ್ಗೆ ಅಸಮಾದಾನ ವ್ಯಕ್ತಪಡಿಸಿದ್ದ ಕೌರ್ ಇಲ್ಲಿನ ಅಂಪೈರ್ಗಳು ತೀರ ಕಳಪೆ ಮಟ್ಟದ ಅಂಪೈರಿಂಗ್ ಮಾಡಿದ್ದಾರೆ. ಇದು ನಮಗೆ ತುಂಬಾ ಆಶ್ಚರ್ಯ ಮತ್ತು ಬೇಸರ ಉಂಟುಮಾಡಿದೆ. ಮುಂದಿನ ಬಾರಿ ನಾವು ಬಾಂಗ್ಲಾದೇಶಕ್ಕೆ ಬಂದಾಗ ಈ ರೀತಿಯ ಅಂಪೈರ್ಗಳು ನೋಡಲು ಇಷ್ಟಪಡುವುದಿಲ್ಲ. ಸಾಮಾನ್ಯ ವ್ಯಕ್ತಿಯೂ ಇದು ಔಟ್ ಇಲ್ಲವೆಂದು ಸ್ಪಷ್ಟವಾಗಿ ಹೇಳುತ್ತಿದ್ದರು. ನಿಜಕ್ಕೂ ನಾವು ಅಂಪೈರ್ಗಳ ಬಗ್ಗೆ ನಿರಾಶೆಗೊಂಡಿದ್ದೇವೆ ಎಂದ್ದರು.