ಲಂಡನ್: ಇಂಗ್ಲೆಂಡ್ ಮತ್ತು ಶ್ರೀಲಂಕಾ (ENGvsSL) ನಡುವಿನ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಬದಲಿ ಆಟಗಾರನಾಗಿ ಕಣಕ್ಕಿಳಿದ 20 ವರ್ಷದ ಹ್ಯಾರಿ ಸಿಂಗ್(Harry Singh) ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಯಾಗುತ್ತಿದೆ. ಇದಕ್ಕೆ ಕಾರಣ ಹ್ಯಾರಿ ಸಿಂಗ್ ಟೀಮ್ ಇಂಡಿಯಾದ ಮಾಜಿ ವೇಗಿ ರುದ್ರ ಪ್ರತಾಪ್ ಸಿಂಗ್ ಅವರ ಮಗ ಎನ್ನುವುದು. ಹೌದು, ಭಾರತ ತಂಡದ ಪರ ಇಬ್ಬರು ರುದ್ರ ಪ್ರತಾಪ್ ಸಿಂಗ್(RP Singh) ಎನ್ನುವ ಹೆಸರಿನ ವೇಗಿಗಳು ಆಡಿದ್ದಾರೆ. ಹೀಗಾಗಿ ಹ್ಯಾರಿ ಸಿಂಗ್ ಯಾವ ರುದ್ರ ಪ್ರತಾಪ್ ಸಿಂಗ್ ಅವರ ಮಗ ಎಂದು ನೆಟ್ಟಿಗರು ಚರ್ಚಿಸುತ್ತಿದ್ದಾರೆ.
ಹೌದು, ಲಂಕಾ ವಿರುದ್ಧ ಬದಲಿ ಆಟಗಾರನಾಗಿ ಫೀಲ್ಡಿಂಗ್ಗೆ ಬಂದ 20 ವರ್ಷದ ಹ್ಯಾರಿ ಸಿಂಗ್ ಅವರು ಟೀಮ್ ಇಂಡಿಯಾದ ಮಾಜಿ ಆಟಗಾರ ರುದ್ರ ಪ್ರತಾಪ್ ಸಿಂಗ್ ಸೀನಿಯರ್ (Rudra Pratap Singh Senior) ಅವರ ಪುತ್ರ. ಕೆಲವರು ಆರ್.ಪಿ ಸಿಂಗ್ ಎಂದರೆ 2007ರ ಟಿ20 ವಿಶ್ವಕಪ್ ಗೆದ್ದ ಭಾರತ ತಂಡದ ಸದಸ್ಯ ಎಂದೆನಿಸಿಕೊಂಡಿದ್ದರು. ಇಬ್ಬರು ಕೂಡ ಆರ್.ಪಿ ಸಿಂಗ್ ಆದ ಕಾರಣ ಗೊಂದಲ ಉಂಟಾಗಿತ್ತು. ಇದೀಗ ಹ್ಯಾರಿ ಸಿಂಗ್ ಯಾವ ಆರ್.ಪಿ. ಸಿಂಗ್ ಅವರ ಮಗ ಎನ್ನುವುದು ನೆಟ್ಟಿಗರಿಗೆ ತಿಳಿದಿದೆ.
ಇದನ್ನೂ ಓದಿ Shakib Al Hasan: ಬಾಂಗ್ಲಾ ತಂಡದ ನಾಯಕ ಶಕಿಬ್ ವಿರುದ್ಧ ಕೊಲೆ ಪ್ರಕರಣ ದಾಖಲು
80ರ ದಶಕದಲ್ಲಿ ಆರ್.ಪಿ.ಸಿಂಗ್ ಸೀನಿಯರ್ ಭಾರತ ತಂಡದ ಪರ ಎರಡು ಪಂದ್ಯವಾಡಿದ್ದರು. 1986ರಲ್ಲಿ ಆಸ್ಟ್ರೇಲಿಯಾ ವಿರುದ್ದ ಎರಡು ಏಕದಿನ ಪಂದ್ಯ ಇದಾಗಿತ್ತು. ಕ್ರಿಕೆಟ್ ವೃತ್ತಿಜೀವನದ ಬಳಿಕ ಆರ್.ಪಿ.ಸಿಂಗ್ ಇಂಗ್ಲೆಂಡ್ನಲ್ಲಿಯೇ ನೆಲೆಸಿದ್ದಾರೆ. ಮಗನನ್ನು ಕೂಡ ಕ್ರಿಕೆಟ್ ಆಗಿ ಮಾಡಿದ್ದಾರೆ. ಆಲ್ರೌಂಡರ್ ಆಗಿರುವ ಹ್ಯಾರಿ ಸಿಂಗ್ ಇಂಗ್ಲೆಂಡ್ ತಂಡದ ಪರ ಖಾಯಂ ಸದಸ್ಯನಾಗಿ ಶೀಘ್ರದಲ್ಲೇ ಆಡುವ ಸಾಧ್ಯತೆ ಇದೆ. ಇಂಗ್ಲೆಂಡ್ ಪರ ಲಿಸ್ಟ್ ‘ಎ’ ಟೂರ್ನಿಯಲ್ಲಿ ಹ್ಯಾರಿ ಇದುವರೆಗೆ 7 ಪಂದ್ಯಗಳನ್ನು ಆಡಿ 87 ರನ್ ಗಳಿಸಿದ್ದಾರೆ.
ಎಡಗೈ ವೇಗಿಯಾಗಿ ಮಿಂಚಿದ್ದ ಜೂನಿಯರ್ ಆರ್.ಪಿ.ಸಿಂಗ್ ಭಾರತ ಪರ 14 ಟೆಸ್ಟ್, 58 ಏಕದಿನ ಮತ್ತು 10 ಟಿ20 ಪಂದ್ಯಗಳನ್ನು ಆಡಿದ್ದಾರೆ. 2007ರ ಚೊಚ್ಚಲ ಟಿ20 ವಿಶ್ವಕಪ್ ಕೂಟದಲ್ಲಿ ಆರ್.ಪಿ.ಸಿಂಗ್ ಅವರು ಭಾರತ ತಂಡದ ಪ್ರಮುಖ ಬೌಲರ್ ಆಗಿದ್ದರು. 2018ರಲ್ಲಿ ಕ್ರಿಕೆಟ್ ನಿಂದ ನಿವೃತ್ತಿ ಹೊಂದಿದ ಅವರು ಸದ್ಯ ಕಮೆಂಟೇಟರ್ ಆಗಿ ಮಿಂಚುತ್ತಿದ್ದಾರೆ.