ಬೆಂಗಳೂರು: ಹರ್ಷ ಭೋಗ್ಲೆ ವಿಶ್ವದ ಅತ್ಯುತ್ತಮ ಕ್ರಿಕೆಟ್ ವೀಕ್ಷಕ ವಿವರಣೆಗಾರರಲ್ಲಿ ಒಬ್ಬರು ಎಂಬುದರಲ್ಲಿ ಸಂದೇಹವಿಲ್ಲ. ವರ್ಷಗಳಲ್ಲಿ, ಅವರು ಕ್ರಿಕೆಟ್ ಕ್ಷೇತ್ರದಲ್ಲಿ ಅತ್ಯಂತ ಪ್ರಭಾವಶಾಲಿ ದೈತ್ಯ ವಿಶ್ಲೇಷಣಾಕಾರರಲ್ಲಿ ಒಬ್ಬರಾಗಿದ್ದಾರೆ. ಅನೇಕರಿಂದ ಕ್ರಿಕೆಟ್ನ ಉತ್ತಮ ಧ್ವನಿ ಎಂದು ಕರೆಯಲ್ಪಡುವ ಭೋಗ್ಲೆ ಅವರು ತಮ್ಮ ಅದ್ಭುತ ಕೌಶಲ್ಯಗಳಿಂದಾಗಿಯೇ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಪಾಕಿಸ್ತಾನ ಹಾಗೂ ಭಾರತ ತಂಡಗಳ ನಡುವಿನ ಪಂದ್ಯದ ವೇಳೆ ವೀಕ್ಷಕ ವಿವರಣೆ ನೀಡುವ ಮೂಲಕ ಅವರು ತಮ್ಮ ಕಾಮೆಂಟರಿ ವೃತ್ತಿಯಲ್ಲಿ 40 ಸಂವತ್ಸರಗಳನ್ನು ಪೂರೈಸಿದ್ದಾರೆ.
62 ವರ್ಷದ ಕಾಮೆಂಟೇಟರ್ ತಮ್ಮ ಮೊದಲ ಪಂದ್ಯದ ಕಾಮೆಂಟರಿ ಮಾಡಿ 40 ವರ್ಷಗಳು ಕಳೆದ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಅದರ ಸಂತಸ ಹಂಚಿಕೊಂಡಿದ್ದಾರೆ. ಭೋಗ್ಲೆ ಇನ್ಸ್ಟಾಗ್ರಾಮ್ನಲ್ಲಿ ತಮ್ಮ ಮೊದಲ ಏಕದಿನ ಪಂದ್ಯದ ಕಾಮೆಂಟರಿ ಬಗ್ಗೆ ತಿಳಿಸಲು ಡಿಡಿ ಚಾನೆಲ್ (ದೂರದರ್ಶನ) ಆಫರ್ ಲೆಟರ್ ಅನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ. ಅಂದ ಹಾಗೆ ಆಫರ್ ಲೆಟರ್ನಲ್ಲಿ ಅವರಿಗೆ ಸಿಕ್ಕ ಮೊದಲ ಸ್ಯಾಲರಿಯೂ ಕಾಣುತ್ತದೆ. ಈಗ ಒಂದು ಪಂದ್ಯಕ್ಕೆ ಕ್ರಿಕೆಟ್ ಕಾಮೆಂಟೇಟರ್ಗಳು ಲಕ್ಷಾಂತರ ರೂಪಾಯಿ ಪಡೆದುಕೊಳ್ಳುವ ಅವರು ದೂರದರ್ಶನ ಚಾನೆಲ್ನಿಂದ ಮೊದಲ ಪಂದ್ಯದ ಕಾಮೆಂಟರಿಗಾಗಿ ಕೇವಲ 350 ರೂಪಾಯಿಗಳನ್ನು ಪಡೆದುಕೊಂಡಿದ್ದರು.
ಇಂದು 40 ವರ್ಷಗಳ ಹಿಂದೆ. ನನ್ನ ಮೊದಲ ಏಕದಿನ ಪಂದ್ಯ. ಅವಕಾಶಗಳನ್ನು ಪಡೆಯಲು ತೀವ್ರವಾಗಿ ಪ್ರಯತ್ನಿಸುತ್ತಿರುವ ನನ್ನನ್ನು ನೆನಪಿಸಿಕೊಂದೆ. ಡಿಡಿ-ಹೈಡ್ ನ ದಯಾಪರ ನಿರ್ಮಾಪಕರು ನನಗೆ ಅವಕಾಶ ಕೊಟ್ಟರು. ಹಿಂದಿನ ದಿನ ಸಂಜೆ ನಾನು ಸರಳವಾದ ಟೀ ಶರ್ಟ್ ಧರಿಸಿ ರೋಲರ್ ಮೇಲೆ ಕುಳಿತು ಪರದೆ ಏರಿಸುವ ಕೆಲಸ ಮಾಡುತ್ತಿದ್ದೆ. ಮರುದಿನ ಎರಡು ಕಾಮೆಂಟರಿ ಮಾಡುವ ಅವಕಾಶ ಪಡೆದೆ ಮುಂದಿನ 14 ತಿಂಗಳುಗಳಲ್ಲಿ ನಾನು ಇನ್ನೂ ಎರಡು ಏಕದಿನ ಮತ್ತು ಒಂದು ಟೆಸ್ಟ್ ಪಂದ್ಯಕ್ಕೆ ವಿಶ್ಲೇಷಣೆ ನೀಡಬೇಕಾಯಿತು. ಅದಕ್ಕಾಗಿ ಕೃತಜ್ಞತೆಗಳು” ಎಂದು ಹರ್ಷ ಭೋಗ್ಲೆ ತಮ್ಮ ಪೋಸ್ಟ್ಗೆ ಶೀರ್ಷಿಕೆ ನೀಡಿದ್ದಾರೆ.
ಇದನ್ನೂ ಓದಿ : World Cup 2023 : ವಿಶ್ವ ಕಪ್ ವೇಳಾಪಟ್ಟಿಯಲ್ಲಿ ಮತ್ತೆ ಗೊಂದಲ, ಪಾಕಿಸ್ತಾನದ ಪಂದ್ಯ ಮತ್ತೆ ಮುಂದೂಡಿಕೆ
40 ವರ್ಷಗಳ ಹಿಂದೆ 350 ರೂಪಾಯಿ ಭೋಗ್ಲೆ ಪಾಲಿಗೆ ದೊಡ್ಡ ಮೊತ್ತವೇ ಆಗಿತ್ತು. ಅವಕಾಶಕ್ಕಾಗಿ ಅಲೆದಾಡುತ್ತಿದ್ದ ಅವರಿಗೆ ಡಿಡಿ ಚಾನೆಲ್ನಲ್ಲಿ ಅವಕಾಶ ದೊರಕಿದ್ದಲ್ಲದೆ 350 ರೂಪಾಯಿ ಸಂಬಳವೂ ದೊರಕಿತ್ತು. ಹೀಗಾಗಿ ಅವರು ಅತ್ಯಂತ ಸಂಭ್ರಮದಿಂದ ಅದನ್ನು ಸ್ವೀಕರಿಸಿದ್ದಾರೆ.
ಅಲ್ಲಿಂದ ಬಳಿಕ ಭೋಗ್ಲೆ ಅನೇಕ ಅದ್ಭುತ ವೀಕ್ಷಕವಿವರಣೆಗಳನ್ನು ನೀಡಿದ್ದಾರೆ. ಅದು ಅಭಿಮಾನಿಗಳ ಮನಸ್ಸಿನಲ್ಲಿ ದೀರ್ಘಕಾಲ ಅಚ್ಚಳಿಯದೆ ಉಳಿದಿದೆ. 2022ರ ಟಿ 20 ವಿಶ್ವಕಪ್ನಲ್ಲಿ ಭಾರತವು ಪಾಕಿಸ್ತಾನವನ್ನು ಎದುರಿಸಿದಾಗ ಅವರ ಅತ್ಯಂತ ಸ್ಮರಣೀಯ ವೀಕ್ಷಕ ವಿವರಣೆಗಳಲ್ಲಿ ಒಂದಾಗಿತ್ತು. ಏಕೆಂದರೆ ಕೊಹ್ಲಿ ಅದ್ಭುತ ಆಟವನ್ನು ಆಡಿದ್ದರು ಹಾಗೂ ಟೀಮ್ ಇಂಡಿಯಾವನ್ನು ಐತಿಹಾಸಿಕ ಗೆಲುವಿನತ್ತ ಮುನ್ನಡೆದಿತ್ತು.
ಕ್ರಿಕೆಟ್ ಆಟಗಾರರು ನೀಡುವ ವಿವಿಧ ಪ್ರದರ್ಶನಗಳನ್ನು ವಿವರಿಸುವ ಮೂಲಕ 62 ವರ್ಷದ ಭೋಗ್ಲೆ ಒಂದು ಕ್ರಿಕೆಟ್ನ ಪ್ರತಿಯೊಂದು ಅಂಶಗಳನ್ನೂ ವಿವರಿಸುತ್ತಿದ್ದರು. ಭೋಗ್ಲೆ ಅವರ ವಿಶ್ಲೇಷಣಾತ್ಮಕ ಶೈಲಿಯನ್ನು ಕ್ರಿಕೆಟ್ ಪ್ರೇಮಿಗಳು ಮೆಚ್ಚುತ್ತಿದ್ದರು.