Site icon Vistara News

Cricket Tournament : ಹರ್ಷ ಸಿ. ಎಂ ಗೌಡ ತಂಡಕ್ಕೆ ಟಿಪಿಎಲ್ ಟ್ರೋಫಿ

Harsha C. TPL trophy for M Gowda team

#image_title

ಬೆಂಗಳೂರು: ಎನ್ 1 ಕ್ರಿಕೆಟ್ ಅಕಾಡೆಮಿ ಸುನೀಲ್ ಕುಮಾರ್. ಬಿ. ಆರ್ ನೇತೃತ್ವದಲ್ಲಿ ನಡೆದಿದ್ದ ಕಿರುತೆರೆ ತಾರೆಯರ ಟೆಲಿವಿಷನ್ ಪ್ರೀಮಿಯರ್ ಲೀಗ್​ನ ಎರಡನೇ ಆವೃತ್ತಿಯ ಟ್ರೋಫಿಯನ್ನು ಹರ್ಷ ಸಿ.ಎಂ ಗೌಡ ನೇತೃತ್ವದ ಎನಿಎಲ್ಪ್ ಟೂರ್ನಿವಲ್ ತಂಡ ಮುಡಿಗೇರಿಸಿಕೊಂಡಿದೆ.

ಎರಡನೇ ಸೀಸನ್ ಮಾರ್ಚ್ 12ರಂದು ಆರಂಭವಾಗಿತ್ತು. ಮಾರ್ಚ್ 12ರಿಂದ 15ರವರೆಗೆ ನಾಲ್ಕು ದಿನಗಳ ಕಾಲ ಕ್ರಿಕೆಟ್ ಪಂದ್ಯಾವಳಿ ನಡೆಯಿತು. ಮಂಜು ಪಾವಗಡ ನೇತೃತ್ವದ ಅಶ್ವಸೂರ್ಯ ರಿಯಾಲಿಟೀಸ್ ರನ್ನರ್ ಅಪ್ ಸ್ಥಾನ ಪಡೆದುಕೊಂಡಿದೆ. ಗಾಯಕ ವ್ಯಾಸರಾಜ್ ಮ್ಯಾನ್ ಆಫ್ ದಿ ಸೀರೀಸ್ ಪ್ರಶಸ್ತಿ ಪಡೆದುಕೊಂಡರು.

ಇದನ್ನೂ ಓದಿ : Virat Kohli : ವಿರಾಟ್ ಕೊಹ್ಲಿ ತಿಂಡಿಪೋತ, ಕ್ರಿಕೆಟ್​ಗಾಗಿ ಎಲ್ಲವನ್ನೂ ತ್ಯಜಿಸಿದರು!

ದಿ ಪರ್ಪಲ್ ರಾಕ್ ಪ್ಯಾಂಥರ್ಸ್, ಅಶ್ವಸೂರ್ಯ ರಿಯಾಲಿಟೀಸ್, ಎನಿಎಲ್ಪ್ ಟೂರ್ನಿವಲ್, ಇನ್ಸೇನ್ ಕ್ರಿಕೆಟ್ ಟೀಂ, ದಿ ಬುಲ್ ಸ್ಕ್ವಾಡ್, ಆಕ್ಸ್ ಫರ್ಡ್ ವಿನ್ ಟೀಂ ಎಂಬ ಒಟ್ಟು ಆರು ತಂಡಗಳು ಟಿಪಿಎಲ್ ಸೀಸನ್-2ನಲ್ಲಿ ಭಾಗವಹಿಸಿದ್ದವು. ಲೂಸ್ ಮಾದ ಯೋಗಿ, ಮಂಜು ಪಾವಗಡ, ಹರ್ಷ ಸಿ.ಎಂ ಗೌಡ, ರವಿಶಂಕರ್ ಗೌಡ, ಶರತ್ ಪದ್ಮನಾಭ್, ಸಾಗರ್ ಬಿಳಿಗೌಡ ತಂಡಗಳ ನಾಯಕತ್ವ ವಹಿಸಿದ್ದರು.

Exit mobile version