ದುಬೈ : ಪಾಕಿಸ್ತಾನ ತಂಡದ ವೇಗದ ಬೌಲರ್ ಮೊಹಮ್ಮದ್ ವಾಸಿಮ್ ಬೆನ್ನು ನೋವಿನ ಸಮಸ್ಯೆಯಿಂದಾಗಿ ಏಷ್ಯಾ ಕಪ್ ತಂಡದಿಂದ ಹೊರಕ್ಕುಳಿಯುವಂತಾಗಿದೆ. ಅವರ ಬದಲಿಗೆ ಪ್ರದರ್ಶನ ವೈಫಲ್ಯದ ಕಾರಣಕ್ಕೆ ತಂಡದಲ್ಲಿ ಸ್ಥಾನ ಕಳೆದುಕೊಂಡಿದ್ದ ಬೌಲರ್ ಹಸನ್ ಅಲಿಗೆ ಅವಕಾಶ ಕಲ್ಪಿಸಿದೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ.
ಶಹೀನ್ ಅಫ್ರಿದಿಯ ಅಲಭ್ಯತೆಯ ಕಾರಣಕ್ಕೆ ಹಿನ್ನಡೆ ಎದುರಿಸಿದ್ದ ಪಾಕಿಸ್ತಾನ ತಂಡಕ್ಕೆ ಮೊಹಮ್ಮದ್ ವಾಸಿಮ್ ಅವರ ಗಾಯದಿಂದಾಗಿ ಮತ್ತೊಂದು ಆಘಾತ ಎದುರಾಗಿದೆ. ಪಾಕಿಸ್ತಾನ ತಂಡದ ಜತೆಗೆ ದುಬೈಗೆ ಹೋಗಿದ್ದ ವಾಸಿಮ್ಗೆ ಅಭ್ಯಾಸ ನಡೆಸುವ ವೇಳೆ ಬೆನ್ನು ನೋವು ಕಾಣಿಸಿಕೊಂಡಿತ್ತು. ಹೀಗಾಗಿ ಶುಕ್ರವಾರ ಅವರು ಅಭ್ಯಾಸಕ್ಕೆ ಬಂದಿರಲಿಲ್ಲ. ಬಳಿಕ ಎಮ್ಆರ್ಐ ಸ್ಕ್ಯಾನ್ ನಡೆಸಿದಾಗ ಅವರ ಬೆನ್ನಿನಲ್ಲಿ ಒತ್ತಡ ಗಾಯ ಉಂಟಾಗಿತ್ತು. ಹೀಗಾಗಿ ಅವರಿಗೆ ವಿಶ್ರಾಂತಿ ನೀಡಲಾಗಿದೆ. ಹೀಗಾಗಿ ಹಸನ್ ಅಲಿ ಅವಕಾಶ ಪಡೆದುಕೊಂಡಿದ್ದಾರೆ.
ಹಸನ್ ಅಲಿ ಕಳೆದ ವರ್ಷ ನಡೆದ ಟಿ೨೦ ವಿಶ್ವ ಕಪ್ನಲ್ಲಿ ಪಾಕಿಸ್ತಾನ ತಂಡದ ಪರವಾಗಿ ಆಡಿದ್ದರು. ಅಂತೆಯೇ ಸೆಮಿಫೈನಲ್ ಪಂದ್ಯದಲ್ಲಿ ಆಸ್ಟ್ತೇಲಿಯಾ ತಂಡದ ಮ್ಯಾಥ್ಯೂ ವೇಡ್ ಅವರ ಕ್ಯಾಚ್ ಬಿಡುವ ಮೂಲಕ ತಂಡದ ಸೋಲಿಗೆ ಕಾರಣರಾಗಿದ್ದರು. ಆ ಬಳಿಕವೂ ಅವರು ಪ್ರದರ್ಶನ ವೈಫಲ್ಯ ಎದುರಿಸಿದ್ದರು. ಹೀಗಾಗಿ ಇತ್ತೀಚಿನ ನೆದರ್ಲೆಂಡ್ಸ್ ಪ್ರವಾಸದಲ್ಲಿ ಅವರಿಗೆ ಅವಕಾಶ ಕಲ್ಪಿಸಿರಲಿಲ್ಲ. ಇದೀಗ ಅನಿವಾರ್ಯವಾಗಿ ಅವರಿಗೆ ಅವಕಾಶ ನೀಡಲಾಗಿದೆ.
ಇದನ್ನೂ ಓದಿ : IND vs PAK | ಶಹೀನ್ ಅಫ್ರಿದಿ ಎದುರು ಸಿಕ್ಕರು, ಭಾರತ ತಂಡದ ಆಟಗಾರರು ನಕ್ಕರು, ವೈರಲ್ ಆಗಿದೆ ವಿಡಿಯೊ