ಕೇಪ್ ಟೌನ್: ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ಹಿರಿಯ ಆಟಗಾರ ಹಾಶಿಮ್ ಆಮ್ಲಾ(Hashim Amla) ಅವರು ಎಲ್ಲ ಮಾದರಿ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಈ ವಿಚಾರವನ್ನು ಅವರು ಟ್ವಿಟರ್ ಮೂಲಕ ಪ್ರಕಟಿಸಿದ್ದಾರೆ.
ಹಾಶಿಮ್ ಆಮ್ಲಾ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ 2019ರಲ್ಲೇ ನಿವೃತ್ತಿ ಘೋಷಿಸಿದ್ದರೂ ಸರ್ರೆ ತಂಡದೊದಿಗೆ ಇಂಗ್ಲಿಷ್ ಕೌಂಟಿ ಪರ ಕ್ರಿಕೆಟ್ ಆಡುತ್ತಿದ್ದರು. ಆದರೆ ಇದೀಗ ಎಲ್ಲ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಣೆ ಮಾಡಿದ್ದಾರೆ. 2022 ರಲ್ಲಿ ಕೌಂಟಿ ಚಾಂಪಿಯನ್ಶಿಪ್ ಗೆಲ್ಲುವಲ್ಲಿ ಆಮ್ಲಾ ಪ್ರಮುಖ ಪಾತ್ರ ವಹಿಸಿದ್ದರು.
ಸರ್ರೆ ತಂಡದ ಹೊರತಾಗಿ ಆಮ್ಲಾ ಅವರು ಡರ್ಬಿಶೈರ್, ಹ್ಯಾಂಪ್ ಶೈರ್, ನಾಟಿಂಗ್ ಹ್ಯಾಮ್ ಶೈರ್ ಮತ್ತು ಎಸೆಕ್ಸ್ ಗಾಗಿ ಕೌಂಟಿ ಕ್ರಿಕೆಟ್ ಆಡಿದ್ದರು. ಐಪಿಎಲ್ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಪರ ಆಡಿದ್ದರು. ದಕ್ಷಿಣ ಆಫ್ರಿಕಾದ ದೇಶೀಯ ಕ್ರಿಕೆಟ್ನಲ್ಲಿ ಅವರು ಕ್ವಾ-ಜುಲು ನಟಾಲ್, ಡಾಲ್ಫಿನ್ಸ್ ಮತ್ತು ಕೇಪ್ ಕೋಬ್ರಾಸ್ ಪರ ಬ್ಯಾಟ್ ಬೀಸಿದ್ದರು.
“ಕ್ರಿಕೆಟ್ನಲ್ಲಿ ನನಗೆ ಎಲ್ಲ ರೀತಿಯ ಸಹಕಾರ ನೀಡಿದ ತಂಡದ ಕೋಚ್, ಸಹ ಆಟಗಾರಿಗೆ ಧನ್ಯವಾದಗಳು. ನಿಮ್ಮೆಲ್ಲರ ಬೆಂಬಲದಿಂದ ನಾನು ಈ ಸಾಧನೆ ಮಾಡಲು ಸಾಧ್ಯವಾಯಿತು” ಎಂದು ಹಾಶಿಮ್ ಆಮ್ಲಾ ವಿದಾಯದ ಬಳಿಕ ಹೇಳಿದರು.
ಆಮ್ಲಾ ಅವರು ದಕ್ಷಿಣ ಆಫ್ರಿಕಾ ಪರ 124 ಟೆಸ್ಟ್ ಪಂದ್ಯಗಳಲ್ಲಿ 9282 ರನ್, ಏಕದಿನ ಕ್ರಿಕೆಟ್ನಲ್ಲಿ 181 ಪಂದ್ಯಗಳಿಂದ 8113 ರನ್ ಗಳಿಸಿದ್ದಾರೆ. ಉಳಿದಂತೆ 44 ಟಿ20 ಪಂದ್ಯವಗಳನ್ನಾಡಿ 1277 ರನ್ ಕಲೆಹಾಕಿದ್ದಾರೆ.
ಇದನ್ನೂ ಓದಿ | Most Centuries In ODIs | ತವರು ನೆಲದಲ್ಲಿ ನಡೆದ ಏಕ ದಿನ ಕ್ರಿಕೆಟ್ನಲ್ಲಿ ಅತಿ ಹೆಚ್ಚು ಶತಕಗಳನ್ನು ಬಾರಿಸಿದ ಆಟಗಾರರು