ಕರಾಚಿ: ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಸಯೀದ್ ಅನ್ವರ್(Saeed Anwar) ನೀಡಿದ ವಿವಾದಾತ್ಮಕ ಹೇಳಿಕೆಯ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ಸಂಚಲನ ಮೂಡಿಸಿದೆ. ದಕ್ಷಿಣ ಆಫ್ರಿಕಾದ ಕ್ರಿಕೆಟಿಗ ಹಾಶಿಮ್ ಆಮ್ಲಾ ಅನೇಕ ಹಿಂದೂಗಳನ್ನು ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಿದ್ದಾರೆ ಎಂದು ಹೇಳಿದ್ದಾರೆ. ಸದ್ಯ ಈ ಹೇಳಿಕೆಗೆ ಅನೇಕ ಕ್ರಿಕೆಟ್ ಪ್ರಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಯೀದ್ ಅನ್ವರ್ ಅವರು ಕಾರ್ಯಕ್ರಮವೊಂದರಲ್ಲಿ ಮಾತನಾಡುವ ವೇಳೆ ವಿಶ್ವಕಪ್ನಲ್ಲಿ ಎಷ್ಟು ಜನರು ಇಸ್ಲಾಂ ಧರ್ಮಕ್ಕೆ ಮತಾಂತರವಾಗುತ್ತಿದ್ದಾರೆ ಎಂಬುದನ್ನು ತಿಳಿಸಿದ್ದಾರೆ. “ಅಲ್ಲಾ ವಿಶ್ವಕಪ್ ಟೂರ್ನಿಯನ್ನು ಮಾಧ್ಯಮವನ್ನಾಗಿ ಮಾಡಿದ್ದಾನೆ. ಹಾಶಿಮ್ ಆಮ್ಲಾ ಒಬ್ಬ ಶ್ರೇಷ್ಠ ಕ್ರಿಕೆಟಿಗ. ಅವರು ಅನೇಕ ಜನರಿಗೆ ಕಲ್ಮವನ್ನು ಕಲಿಸಿದರು. ಜತೆಗೆ ಹಿಂದೂ ಕುಟುಂಬವನ್ನು ಮುಸ್ಲಿಮರನ್ನಾಗಿ ಪರಿವರ್ತಿಸಿದ್ದಾರೆ” ಎಂದು ಹೇಳಿದ್ದಾರೆ.
ಮೊಹಮ್ಮದ್ ಯೂಸುಫ್ ಕೂಡ ಹಲವರಿಗೆ ಇಸ್ಲಾಂ ಧರ್ಮದ ಪ್ರಚಾರ ಮಾಡಿದ್ದಾರೆ. ವಿಶ್ವಕಪ್ ಸಮಯದಲ್ಲಿ ಅನೇಕ ಜನರು ಇಸ್ಲಾಂಗೆ ಮತಾಂತರಗೊಂಡರು. ಅಲ್ಲಾ ನಿಮಗೆ ಸಾಕಷ್ಟು ಪ್ರತಿಭೆಯನ್ನು ನೀಡಿದ್ದಾನೆ. ಆದ್ದರಿಂದ ಯಾವಾಗಲೂ ಅಲ್ಲಾನನ್ನು ನಿಮ್ಮೊಂದಿಗೆ ಕರೆದುಕೊಂಡು ಹೋಗಿ ನಿಮ್ಮ ಕೆಲಸವನ್ನು ಮಾಡಿ ಎಂದು ವಿಡಿಯೊದಲ್ಲಿ ಹೇಳಿದ್ದಾರೆ. ಸಯೀದ್ ಅನ್ವರ್ ಅವರ ಈ ಹೇಳಿಕೆಗೆ ಸಾಕಷ್ಟು ಪರ ವಿರೋಧಗಳು ವ್ಯಕ್ತವಾಗುತ್ತಿದೆ.
ಇದನ್ನೂ ಓದಿ | Ramiz Raja | ಬಿಜೆಪಿ ಮನಸ್ಥಿತಿ ಹೊಂದಿರುವ ಬಿಸಿಸಿಐ; ರಮೀಜ್ ರಾಜಾ ಹೇಳಿಕೆಗೆ ಆಕ್ರೋಶ!