Site icon Vistara News

Hasin Jahan: ಮೊಹಮ್ಮದ್​ ಶಮಿ ಕುಟುಂಬದ ವಿರುದ್ಧ ವ್ಯಂಗ್ಯವಾಡಿದ ವಿಚ್ಛೇದಿತ ಪತ್ನಿ

Hasin Jahan

Hasin Jahan: Mohammed Shami's Estranged Wife Hasin Jahan Hits Out at Indian Cricketer and His Family in Instagram Post

ಮುಂಬಯಿ: ಟೀಮ್​ ಇಂಡಿಯಾದ ಸ್ಟಾರ್​ ವೇಗಿ ಮೊಹಮ್ಮದ್​ ಶಮಿ(Mohammed Shami) ಅವರ ವಿರುದ್ಧ ಸದಾ ಒಂದಿಲ್ಲೊಂದು ಕಾರಣಗಳಿಂದ ಟೀಕಿಸುತ್ತಿರುವ ಅವರ ವಿಚ್ಛೇದಿತ ಪತ್ನಿ ಹಸೀನ್ ಜಹಾನ್(Hasin Jahan) ಈ ಬಾರಿ ಶಮಿಯ ಕುಟುಂಬದ ವಿರುದ್ಧ ಅನಗತ್ಯ ಟೀಕೆ ಮಾಡಿದ್ದಾರೆ.

ಹೌದು, ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಪೋಸ್ಟ್​ ಮಾಡಿರುವ ಹಸೀನ್ ಜಹಾನ್, ಶಮಿ ಮಾತ್ರವಲ್ಲ ಅವರ ಕುಟುಂಬ ಸದಸ್ಯರು ಕೂಡ ನನಗೆ ಅತಿಯಾದ ಹಿಂಸೆ ನೀಡಿದ್ದಾರೆ, ಆದರೆ, ನಾನು ಇನ್ನೂ ನಾಶವಾಗಿಲ್ಲ ಎಂದು ಬರೆಯುವ ಮೂಲಕ ಶಮಿ ಕುಟುಂಬದ ವಿರುದ್ಧ ಕಿಡಿಕಾರಿದ್ದಾರೆ.

ಮೂವರು ಮಹಿಳೆಯರು ಹೊಂಡವೊಂದಕ್ಕೆ ಬಿದ್ದು ಮೇಲೆ ಬರಲು ಸಾಧ್ಯವಾಗದೇ ಇದ್ದಾಗ ಒಂದು ಮಹಿಳೆ ತನ್ನ ತಲೆಯ ಮೇಲೆ ಮರದ ತುಂಡನ್ನು ಹೊತ್ತುಕೊಂಡು ಉಳಿದ ಇಬ್ಬರು ಮಹಿಳೆಯರನ್ನು ರಕ್ಷಿಸಿ ಮೇಲಕ್ಕೆ ಹೋಗುವಂತೆ ಸಹಾಯ ಮಾಡುತ್ತಾಳೆ. ಬಳಿಕ ತಾನು ಮೇಲೆ ಬರಲು ಸಹಾಯ ಯಾಚಿಸಿದಾಗ ಮೇಲಿದ್ದ ಇಬ್ಬರು ಮಹಿಳೆಯರು ಬಂಡೆಕಲ್ಲುಗಳನ್ನು ಕೆಳಗೆ ಹಾಕಿ ಈಕೆಯನ್ನು ನಾಶ ಪಡಿಸಲು ಮುಂದಾಗುತ್ತಾರೆ. ಹೇಗೋ ಕಷ್ಟಗಳನ್ನು ಸಹಿಸಿಕೊಂಡು ಮೇಲೆ ಬಂದ ತಕ್ಷಣ ತನಗೆ ಮೋಸ ಮಾಡಿದ ಇಬ್ಬರು ಮಹಿಳೆಯರು ನಿಂತಿದ್ದ ಜಾಗ ಕುಸಿದು ಬಿದ್ದು ಇಬ್ಬರು ಪ್ರಪಾತಕ್ಕೆ ಬೀಳುತ್ತಾರೆ. ಈ ವಿಡಿಯೊವನ್ನು ಹಂಚಿಕೊಂಡಿರುವ ಹಸೀನ್ ಜಹಾನ್ ತನ್ನನ್ನು ಶಮಿ ಕುಟುಂಬ ನಾಶ ಪಡೆಸಲು ಮುಂದಾಗಿತ್ತು. ಆದರೆ, ನಾನು ನಾಶವಾಗಿಲ್ಲ ಎಂದು ಎಂದು ಬರೆದುಕೊಂಡು ಶಮಿ ಕುಟುಂಬ ತನಗೆ ಚಿತ್ರಹಿಂಸೆ ನೀಡಿತ್ತು ಎಂದು ಹೇಳಿಕೊಂಡಿದ್ದಾರೆ.

ಕೆಲ ದಿನಗಳ ಹಿಂದಷ್ಟೇ ಹಸೀನ್ ಜಹಾನ್ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಕಣ್ಣು ಮಿಟುಕಿಸುವ ಒಂದು ನಿಮಿಷದ ವಿಡಿಯೊ ಹಂಚಿಕೊಂಡಿರುವ ಹಸೀನ್ ಜಹಾನ್, ನಾಯಿಗಳ ದಂಡು ಹೆಣ್ಣು ಮಕ್ಕಳ ಹಿಂದಿನಿಂದ ಮಾತ್ರ ಬೊಗಳುತ್ತದೆ ಎಂದು ಬರೆದುಕೊಂಡಿದ್ದರು.

ಕೆಲವು ತಿಂಗಳ ಹಿಂದೆ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ರೋಹಿತ್​ ಶರ್ಮ ಅವರು ತಮ್ಮ ಪುಟ್ಟ ಮಗಳು ಸಮೈರಾ ತೊಡೆ ಮೇಲೆ ಹಾಯಾಗಿ ಮಲಗಿರುವ ಫೋಟೊ ಹಂಚಿಕೊಂಡಿದ್ದ ಹಸೀನ್ ಜಹಾನ್, ಹೆಚ್ಚಿನ ತಂದೆಯಂದಿರು ತಮ್ಮ ಪುಟ್ಟ ಮಗಳನ್ನು ದೇವರಂತೆ ಕಂಡು ಅವರಿಂದ ಶಾಂತಿ ಕಂಡುಕೊಳ್ಳುತ್ತಾರೆ. ಮತ್ತು ಕೆಲವು ತಂದೆಯರು ವೇಶ್ಯೆಯರ ಮಡಿಲಲ್ಲಿ!. ಅಲ್ಲಾಹು ಯಾವುದೇ ಮಗಳಿಗೆ ಇಂತಹ ಗುಣವಿಲ್ಲದ ತಂದೆಯನ್ನು ಎಂದಿಗೂ ನೀಡದಿರಲಿ. ಆಮೀನ್. ನನ್ನ ಪುಟ್ಟ ಮಗಳಿಗೆ ತಾಳ್ಮೆಯನ್ನು ನೀಡುವಂತೆ ನಾನು ಅಲ್ಲಾಹುವಿನನಲ್ಲಿ ಪ್ರಾರ್ಥಿಸುತ್ತೇನೆ ಎಂದು ಪೋಸ್ಟ್​ ಮಾಡಿ ಶಮಿಯನ್ನು ಅನಗತ್ಯವಾಗಿ ಕೆಣಕ್ಕಿದ್ದರು.

ಇದನ್ನೂ ಓದಿ Mohammed Shami : ಭಾರತ ತಂಡ ಬಿಟ್ಟು ಬೇರೆ ತಂಡಕ್ಕೆ ಮರಳಲು ಮೊಹಮ್ಮದ್ ಶಮಿ ನಿರ್ಧಾರ

16 ಆಗಸ್ಟ್ 2018 ರಂದು, ಹಸಿನ್ ಜಹಾನ್(Hasin Jahan) ಮೊಹಮ್ಮದ್ ಶಮಿ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದರು. ಅಲ್ಲದೆ ಹಲ್ಲೆ, ಅತ್ಯಾಚಾರ, ಕೊಲೆ ಯತ್ನ ಮತ್ತು ಕೌಟುಂಬಿಕ ಹಿಂಸಾಚಾರದ ಆರೋಪದಡಿಯಲ್ಲಿ ಟೀಮ್ ಇಂಡಿಯಾ ಕ್ರಿಕೆಟಿಗನ ಮೇಲೆ ಪ್ರಕರಣ ದಾಖಲಿಸಲಾಗಿತ್ತು. ಇದೇ ವೇಳೆ ಮಗಳ ಖರ್ಚಿಗೆ ಹಾಗೂ ತನಗೆ ಯಾವುದೇ ರೀತಿಯ ಹಣಕಾಸಿನ ನೆರವು ನೀಡುತ್ತಿಲ್ಲ ಎಂದು ಹಸಿನ್ ಜಹಾನ್ ದೂರಿನಲ್ಲಿ ಅಪಾದಿಸಿದ್ದರು.

ಜೀವನಾಂಶ ನೀಡುತ್ತಿರುವ ಶಮಿ

2018 ರಲ್ಲಿ ಹಸಿನ್ ಜಹಾನ್ ಅವರು ಮಾಸಿಕ 10 ಲಕ್ಷ ರೂ ಜೀವನಾಂಶವನ್ನು ಕೋರಿ ಶಮ್ಮಿ ವಿರುದ್ಧ ಕಾನೂನು ಮೊಕದ್ದಮೆ ಹೂಡಿದ್ದರು. ವೈಯಕ್ತಿಕ ವೆಚ್ಚಕ್ಕಾಗಿ 7 ಲಕ್ಷ ರೂ., ತಮ್ಮ ಮಗಳ ನಿರ್ವಹಣೆಗಾಗಿ 3 ಲಕ್ಷ ರೂ. ಕೇಳಿದ್ದರು. ಇದರ ವಿಚಾರಣೆ ನಡೆಸಿದ ಕೋಲ್ಕೊತಾ ನ್ಯಾಯಾಲಯ ಇದೇ ವರ್ಷದ ಜನವರಿಯಲ್ಲಿ ತೀರ್ಪು ಪ್ರಕಟಿಸಿ, ಶಮಿ ಅವರು ಪತ್ಯೇಕವಾಗಿ ವಾಸಿಸುತ್ತಿರುವ ಪತ್ನಿ ಜಹಾನ್​ಗೆ ತಿಂಗಳಿಗೆ 50 ಸಾವಿರ ರೂ. ನೀಡುವಂತೆ ಸೂಚಿಸಿತ್ತು. ಕೋರ್ಟ್​ ಸೂಚನೆಯಂತೆ ಶಮಿ ಅವರು ಈ ಮೊತ್ತವನ್ನು ನೀಡಿತ್ತಲೇ ಬರುತ್ತಿದ್ದಾರೆ.

Exit mobile version