Site icon Vistara News

KL Rahul | ಅವರೊಬ್ಬ ಆಲ್‌ರೌಂಡರ್‌; ಕೆ ಎಲ್ ರಾಹುಲ್‌ ಮೌಲ್ಯಯುತ ಆಟಗಾರ ಎಂದ ಮಾಜಿ ನಾಯಕ

IND vs AUS

ಮುಂಬಯಿ ಟೀಮ್‌ ಇಂಡಿಯಾದ ಉಪನಾಯಕ ಕೆ. ಎಲ್‌ ರಾಹುಲ್‌ (KL Rahul) ಅವರ ಪ್ರದರ್ಶನದ ಬಗ್ಗೆ ಕ್ರಿಕೆಟ್‌ ಕಾರಿಡಾರ್‌ನಲ್ಲಿ ದೊಡ್ಡ ಮಟ್ಟದ ಚರ್ಚೆಗಳು ನಡೆಯುತ್ತಿವೆ. ಅವರು ಅಗತ್ಯ ಸಂದರ್ಭದಲ್ಲಿ ತಂಡಕ್ಕೆ ನೆರವಾಗುತ್ತಿಲ್ಲ. ಸ್ಟ್ರೈಕ್‌ರೇಟ್ ಹೆಚ್ಚು ಹೊಂದಿಲ್ಲ ಎಂಬೆಲ್ಲ ಚರ್ಚೆಗಳು ಶುರುವಾಗಿದೆ. ಏತನ್ಯಧ್ಯೆ, ಬಾಂಗ್ಲಾದೇಶ ವಿರುದ್ಧದ ಏಕ ದಿನ ಸರಣಿಯ ಮೊದಲ ಪಂದ್ಯದ ಕೊನೇ ಹಂತದಲ್ಲಿ ಕ್ಯಾಚ್ ಬಿಡುವ ಮೂಲಕವೂ ಟೀಕೆಗೆ ಒಳಗಾಗಿದ್ದಾರೆ. ಇಷ್ಟೆಲ್ಲ ಆರೋಪಗಳ ನಡುವೆ, ಭಾರತ ತಂಡದ ಮಾಜಿ ನಾಯಕ ಸುನೀಲ್ ಗವಾಸ್ಕರ್ ಅವರು ರಾಹುಲ್‌ ಅವರ ಆಟವನ್ನು ಹೊಗಳಿದ್ದಾರೆ ಹಾಗೂ ಅವರು ಟೀಮ್‌ ಇಂಡಿಯಾಗೆ ಅತ್ಯಗತ್ಯ ಎಂಬುದಾಗಿಯೂ ನುಡಿದಿದ್ದಾರೆ.

ಸೋನಿ ಸ್ಪೋರ್ಟ್ಸ್‌ ಜತೆ ಮಾತನಾಡಿದ ಅವರು ಕೆ. ಎಲ್‌ ರಾಹುಲ್ ಟೀಮ್‌ ಇಂಡಿಯಾ ಪರ ಆಲ್‌ರೌಂಡರ್‌ ಇದ್ದ ಹಾಗೆ. ಅವರ ಉಪಸ್ಥಿತಿಯಿಂದ ಭಾರತ ತಂಡಕ್ಕೆ ಹೆಚ್ಚಿನ ಲಾಭವಿದೆ ಎಂಬುದಾಗಿ ಹೇಳಿದ್ದಾರೆ.

ಕೆ. ಎಲ್‌ ಆರಂಭಿಕರಾಗಿಯೂ ಬ್ಯಾಟ್‌ ಮಾಡಬಲ್ಲರು, ವಿಕೆಟ್‌ ಕೀಪಿಂಗ್‌ ಜವಾಬ್ದಾರಿಯನ್ನೂ ನಿಭಾಯಿಸಲಬಲ್ಲರು. ಐದನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಇಳಿಯಬಲ್ಲರು. ಈ ಮೂಲಕ ಅವರು ಉತ್ತಮ ಆಲ್‌ರೌಂಡರ್‌ ಎಂಬುದನ್ನು ಸಾಬೀತುಪಡಿಸಿದ್ದಾರೆ. ಟೀಮ್‌ ಇಂಡಿಯಾಗೆ ಐದನೇ ಕ್ರಮಾಂಕದ ಬ್ಯಾಟಿಂಗ್ ಚಿಂತೆ ಇತ್ತು. ಕೆ. ಎಲ್‌ ರಾಹುಲ್‌ ಬ್ಯಾಟಿಂಗ್ ಮಾಡುವ ಕಾರಣ ತಂಡಕ್ಕೆ ಹೆಚ್ಚುವರಿ ಬೌಲರ್‌ಗಳನ್ನು ತೆಗೆದುಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ ಎಂದು ಗವಾಸ್ಕರ್‌ ಹೇಳಿದ್ದಾರೆ.

ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್‌ ಮಾಡಬಲ್ಲ ಕೆ. ಎಲ್ ರಾಹುಲ್‌ ಅವರು, ಫಿನಿಶರ್‌ ಪಾತ್ರವನ್ನೂ ವಹಿಸಬಲ್ಲರು. ವಿಕೆಟ್‌ ಕೀಪಿಂಗ್‌ ಮಾಡುವ ಕಾರಣ ಆ ಸ್ಥಾನವನ್ನೂ ತುಂಬಬಲ್ಲರು. ಹೀಗಾಗಿ ಅವರು ಟೀಮ್‌ ಇಂಡಿಯಾದ ಉತ್ತಮ ಆಲ್‌ರೌಂಡರ್‌ ಎಂದು ಗವಾಸ್ಕರ್ ನುಡಿದಿದ್ದಾರೆ.

ಮುಂದಿನ ವಿಶ್ವ ಕಪ್‌ಗೆ ಸಜ್ಜಾಗುತ್ತಿರುವ ಟೀಮ್‌ ಇಂಡಿಯಾ ತಂಡಕ್ಕೆ ಸೂಕ್ತ ಆಟಗಾರರ ಹುಡುಕಾಟದಲ್ಲಿದೆ. ಅಂತೆಯೇ ವಿಕೆಟ್‌ ಕೀಪಿಂಗ್‌ ಸ್ಥಾನವನ್ನು ರಿಷಭ್‌ ಪಂತ್ ಅಥವಾ ಕೆ. ಎಲ್ ರಾಹುಲ್‌ಗೆ ವಹಿಸುವ ಸಾಧ್ಯತೆಗಳಿವೆ. ಬ್ಯಾಕ್‌ಅಪ್ ಕೀಪರ್‌ಗಳಾಗಿ ಸಂಜು ಸ್ಯಾಮ್ಸನ್‌ ಅಥವಾ ಇಶಾನ್ ಕಿಶನ್‌ ಅವಕಾಶ ಪಡೆಯಬಹುದು.

ಇದನ್ನೂ ಓದಿ | INDvsBAN | ಅರ್ಧ ಶತಕ ಬಾರಿಸಿ ಮಿಂಚಿದರೂ, ಕ್ಯಾಚ್‌ ಬಿಟ್ಟು ಟ್ರೋಲ್‌ ಆದ ಕೆ. ಎಲ್‌ ರಾಹುಲ್‌!

Exit mobile version