Site icon Vistara News

Heart Attack: ಬ್ಯಾಡ್ಮಿಂಟನ್​ ಆಡುತ್ತಿದ್ದಾಗಲೇ ಕುಸಿದು ಬಿದ್ದು  ಸಾವನ್ನಪ್ಪಿದ 17 ವರ್ಷದ ಶಟ್ಲರ್‌

Heart Attack

Heart Attack: Chinese player dies at youth badminton tournament

ಜಕಾರ್ತಾ: ಇಂಡೋನೇಷ್ಯಾದ ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್‌ ಟೂರ್ನಿಯೊಂದರಲ್ಲಿ ಪಂದ್ಯ ಆಡುತ್ತಿದ್ದಾಗಲೇ ಕುಸಿದುಬಿದ್ದು ಆಟಗಾರನೋರ್ವ ಮೃತಪಟ್ಟಿರುವ ದಾರುಣ ಘಟನೆ ಸಂಭಿಸಿದೆ. ಆಟಗಾರ ಬ್ಯಾಡ್ಮಿಂಟನ್​ ಕೋರ್ಟ್​ನಲ್ಲಿಯೇ ಬಿದ್ದು ನರಳಾಟ ಮಾಡಿದ ವಿಡಿಯೊ ವೈರಲ್​ ಆಗಿದೆ. 17 ವರ್ಷದ ಚೀನ ಆಟಗಾರ ಝಾಂಕ್‌ ಝಿಜಿಯೆ(Zhang Zhijie) ಸಾವನ್ನಪ್ಪಿದ ಆಟಗಾರ.

ಜಪಾನ್‌ ಕಸುಮ ಕವಾನೊ ವಿರುದ್ಧ ಝಿಜಿಯೆ ವಿರುದ್ಧ ಆಡುತ್ತಿದ್ದ ಝಾಂಕ್‌ ಝಿಜಿಯೆ ಮೊದಲ ಗೇಮ್​ನಲ್ಲಿ 1-1 ಅಂಕಗಳಿಸಿದ್ದರು. ಸರ್ವ್​ ಮಾಡಿದ ತಕ್ಷಣ ಝಾಂಕ್‌ ಝಿಜಿಯೆ ಕೋರ್ಟ್​ನಲ್ಲಿಯೇ ಕುಸಿದು ಬಿದ್ದರು. ಅವರನ್ನು ಬದುಕಿಸುವ ಪ್ರಯತ್ನ ನಡೆಯಿತಾದರೂ ಅದು ಫ‌ಲ ನೀಡಲಿಲ್ಲ. ಹೃದಯಾಘಾತದಿಂದ(Heart Attack) ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಸಿಕ್ಸರ್​ ಬಾರಿಸಿ ಮರು ಕ್ಷಣವೇ ಪ್ರಾಣ ಕಳೆದುಕೊಂಡ ಕ್ರಿಕೆಟಿಗ


ಒಂದು ತಿಂಗಳ ಹಿಂದಷ್ಟೇ ಮೀರಾರೋಡ್‌ನಲ್ಲಿ(Mira Road Tragedy) ಕ್ರಿಕೆಟ್​ ಆಡುತ್ತಿದ್ದ ವೇಳೆ ಆಟಗಾರನೊಬ್ಬ ಇದ್ದಕ್ಕಿದ್ದಂತೆ ಕ್ರೀಡಾಂಗಣದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ್ದರು. ಇವರು ಕೂಡ ಹೃದಯಾಘಾತದಿಂದ ಮೃತಪಟ್ಟಿದ್ದರು. ಚೆಂಡನ್ನು ಸಿಕ್ಸರ್​ಗೆ ಬಡಿದಟ್ಟಿತ ಮರು ಕ್ಷಣವೇ ಪಿಚ್​ನಲ್ಲಿ ಕುಸಿದು ಬಿದ್ದಿದ್ದರು.

ಖಾಸಗಿ ಭಾಗಕ್ಕೆ ಚೆಂಡು ಬಡಿದು ಬಾಲಕ ದಾರುಣ ಸಾವು


ಕೆಲವು ತಿಂಗಳುಗಳ ಹಿಂದೆ ಸ್ನೇಹಿತರೊಂದಿಗೆ ಕ್ರಿಕೆಟ್ ಅಭ್ಯಾಸ ಮಾಡುತ್ತಿದ್ದ ವೇಳೆ ಚೆಂಡು ತನ್ನ ಖಾಸಗಿ(Ball hit boy’s private part) ಭಾಗಕ್ಕೆ ಬಡಿದು 11 ವರ್ಷದ(11-year-old ) ಬಾಲಕ ಮೃತಪಟ್ಟಿರುವ ದಾರುಣ ಘಟನೆಯೊಂದು ಪುಣೆಯಲ್ಲಿ ನಡೆದಿತ್ತು. ಈ ಘಟನೆ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.

ಇದನ್ನೂ ಓದಿ Heart Attack : ಕೊಡಗಿನಲ್ಲಿ ಹೃದಯಾಘಾತಕ್ಕೆ ಯುವತಿ ಬಲಿ; ಹೆಚ್ಚಾಯ್ತು ಅಲ್ಪಾಯುಷ್ಯದ ಭಯ

ಬೌಲಿಂಗ್ ಮಾಡುತ್ತಿದ್ದಾಗ ಬ್ಯಾಟ್ಸ್‌ಮನ್ ಹೊಡೆದ ಚೆಂಡು ನೇರವಾಗಿ ಶೌರ್ಯನ ಖಾಸಗಿ ಭಾಗಕ್ಕೆ ಬಡಿದಿತ್ತು. ನೋವಿನಿಂದ ನರಳಿದ ಆತ ತಕ್ಷಣ ನೆಲದ ಮೇಲೆ ಕುಸಿದು ಬಿದ್ದಿದ್ದ. ತಕ್ಷಣ ಆತನ ಸ್ನೇಹಿತರು ಆರೈಕೆ ಮಾಡಿದರೂ ಕೂಡ ಯಾವುದೇ ಸ್ಪಂದನೆ ನೀಡದ ಕಾರಣ ಶೌರ್ಯನನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ಕರೆದೊಯ್ದರೂ ಆತ ಈ ಮೊದಲೇ ಮೃತಪಟ್ಟಿದ್ದಾನೆ ಎಂದು ವೈದ್ಯರು ಘೋಷಿಸಿದ್ದರು. ಚೆಂಡಿನ ಬಲವಾದ ಹೊಡೆತಕ್ಕೆ ಆತ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದ.

ಇದಕ್ಕೂ ಮುನ್ನ ಕ್ರಿಕೆಟ್ ಪಂದ್ಯದ ವೇಳೆ ತಲೆಗೆ ಚೆಂಡು ಬಡಿದು 52 ವರ್ಷದ ಕ್ರಿಕೆಟಿಗ ಮೃತಪಟ್ಟ ಘಟನೆ ಮುಂಬೈನಲ್ಲಿ ನಡೆದಿತ್ತು. ಒಂದೇ ಮೈದಾನದಲ್ಲಿ ಎರಡು ಪಂದ್ಯಗಳು ನಡೆಯುತ್ತಿದ್ದ ವೇಳೆ ಮತ್ತೊಂದು ಪಂದ್ಯದ ಕ್ರಿಕೆಟ್ ಚೆಂಡು ತಲೆಗೆ ಬಡಿದು ಕ್ರಿಕೆಟಿಗ ಮೃತಪಟ್ಟಿದ್ದ. ಮುಂಬೈಯಲ್ಲೇ ಇಂತಹ ಘಟನೆಗಳು ಪದೇಪದೆ ಮರುಕಳಿಸುತ್ತಿರುವುದು ನಿಜ್ಜಕೂ ಬೇಸರದ ಸಂಗತಿಯಾಗಿದೆ.

Exit mobile version