ಅಹಮದಾಬಾದ್: ಇಲ್ಲಿ ನಡೆದ ಸ್ಥಳೀಯ ಕ್ರಿಕೆಟ್ ಪಂದ್ಯಾಟವೊಂದರಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. 34 ವರ್ಷದ ಕ್ರಿಕೆಟಿಗರೊಬ್ಬರು ಕ್ರಿಕೆಟ್ ಆಡುತ್ತಿದ್ದ ವೇಳೆ ಮೈದಾನದಲ್ಲಿ ತೀವ್ರ ಹೃದಯಾಘಾತದಿಂದ(Heart Attack) ಸಾವನ್ನಪ್ಪಿದ್ದಾರೆ.
ವಸಂತ್ ರಾಥೋಡ್ ಸಾವನ್ನಪ್ಪಿದ ಆಟಗಾರ. ಅವರು ರಾಜ್ಯ ಸರಕು ಹಾಗೂ ಸೇವಾ ತೆರಿಗೆ (SGST) ಇಲಾಖೆಯಲ್ಲಿ ಹಿರಿಯ ಗುಮಾಸ್ತರಾಗಿ ಕಾರ್ಯನಿರ್ವಹಿಸುತ್ತಿದ್ದರು. ರಾಥೋಡ್ ಬೌಲಿಂಗ್ ಮಾಡುವಾಗ ತೀವ್ರ ಎದೆನೋವು ಕಾಣಿಸಿಕೊಂಡು ಕುಸಿದು ಬಿದ್ದರು.
ಇದನ್ನೂ ಓದಿ Heart attack : ಕಾಲೇಜಿನಲ್ಲಿ ಕಬಡ್ಡಿ ಆಡುವಾಗ ಹೃದಯಾಘಾತ; ಪ್ರಥಮ ಪಿಯು ವಿದ್ಯಾರ್ಥಿನಿ ದುರ್ಮರಣ
ಕುಸಿದು ಬಿದ್ದ ಅವರನ್ನು ತಕ್ಷಣ ಸಹ ಆಟಗಾರರು ಮತ್ತು ಸಂಘಟಕರು ಸೋಲಾ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಅವರು ಅದಾಗಲೇ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಕಳೆದ 10 ದಿನಗಳಲ್ಲಿ ಗುಜರಾತ್‌ನಲ್ಲಿ ಸಂಭವಿಸಿದ ಮೂರನೇ ಘಟನೆ ಇದಾಗಿದೆ.