ವಿಶಾಖಪಟ್ಟಣಂ: ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಏಕ ದಿನ ಸರಣಿಯ ಎರಡನೇ ಪಂದ್ಯದಲ್ಲಿ ಕೆಲವು ದಾಖಲೆಗಳು ಸೃಷ್ಟಿಯಾಗಿವೆ. ಭಾರತ ತಂಡ 26 ಓವರ್ಗಳಲ್ಲಿ 118 ರನ್ಗಳಿಗೆ ಆಲ್ಔಟ್ ಆಗಿದ್ದಲ್ಲದೆ, ಕೇವಲ 11 ಓವರ್ಗಳಲ್ಲಿ ಎದುರಾಳಿ ತಂಡಕ್ಕೆ 121 ರನ್ ಬಿಟ್ಟುಕೊಟ್ಟ ಕಾರಣ ಹೊಸ ದಾಖಲೆ ಸೃಷ್ಟಿಯಾಗಿದೆ. ಟಾಸ್ ಸೋತು ಮೊದಲು ಬ್ಯಾಟ್ ಮಾಡಲು ಆಹ್ವಾನ ಪಡೆದ ಭಾರತ ತಂಡ ಅತ್ಯಂತ ಕಳಪೆ ಪ್ರದರ್ಶನ ನೀಡಿತು. ಶುಭ್ಮನ್ ಗಿಲ್ ಸೊನ್ನೆಗೆ ಔಟಾಗುವುದರೊಂದಿಗೆ ಆರಂಭಗೊಂಡ ಭಾರತದ ಪತನ ಮೊಹಮ್ಮದ್ ಸಿರಾಜ್ ಸೊನ್ನೆಗೆ ಔಟಾಗುವ ತನಕ ಮುಂದುವರಿಯಿತು. ಸೂರ್ಯಕುಮಾರ್ ಯಾದವ್ ಹಾಗೂ ಮೊಹಮ್ಮದ್ ಸಿರಾಜ್ ಕೂಡ ಶೂನ್ಯ ಸುತ್ತಿದರು. ಇದರೊಂದಿಗೆ ಭಾರತ ತಂಡ ಪ್ರವಾಸಿ ತಂಡಕ್ಕೆ ಸುಲಭ ತುತ್ತಾಯಿತು.
ಇದನ್ನೂ ಓದಿ : INDvsAUS : ಭಾರತ ತಂಡದ ಪರ ಹೊಸ ದಾಖಲೆ ಬರೆದ ಚೇತೇಶ್ವರ್ ಪೂಜಾರ
ಭಾನುವಾರ ನಡೆದ ಈ ಪಂದ್ಯದಲ್ಲಿ ಎರಡೂ ತಂಡಗಳು ದಾಖಲೆಯ ಪಟ್ಟಿ ಸೇರಿಕೊಂಡವು. ಇಲ್ಲಿ ಭಾರತ ತಂಡ ಕಳಪೆ ದಾಖಲೆ ಸೃಷ್ಟಿಸಿಕೊಂಡರೆ, ಪ್ರವಾಸಿ ತಂಡಕ್ಕೆ ಇದು ಕ್ರಿಕೆಟ್ ಇತಿಹಾಸ ಅತ್ಯುತ್ತಮ ಪಂದ್ಯ ಎನಿಸಿಕೊಂಡಿತು. ಒಟ್ಟಿನಲ್ಲಿ ಈ ಪಂದ್ಯದ ಕೆಲವೊಂದು ರೆಕಾರ್ಡ್ಗಳು ಇಲ್ಲಿವೆ.
- 117 ರನ್ಗಳು ಆಸ್ಟ್ರೇಲಿಯಾ ವಿರುದ್ಧ ಭಾರತ ತಂಡ ದಾಖಲಿಸಿದ ಮೂರನೇ ಕನಿಷ್ಠ ಮೊತ್ತವಾಗಿದೆ. ಈ ಹಿಂದೆ ಏಕ ದಿನ ಮಾದರಿಯಲ್ಲಿ ಎರಡು ಬಾರಿ ಕನಿಷ್ಠ ಮೊತ್ತಕ್ಕೆ ಭಾರತ ಆಲ್ಔಟ್ ಆಗಿತ್ತು. 1981ರಲ್ಲಿ 63 ಹಾಗೂ 2000ರಲ್ಲಿ 100 ರನ್ಗೆ ಭಾರತ ತಂಡದ ಔಟಾಗಿತ್ತು. ಎರಡೂ ಪಂದ್ಯಗಗಳು ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ನಡೆದಿದ್ದವು.
- 117 ರನ್ಗಳು ಭಾರತ ತಂಡಕ್ಕೆ ನಾಲ್ಕನೇ ಕನಿಷ್ಠ ಮೊತ್ತವಾಗಿದೆ. 1986ರಲ್ಲಿ ಶ್ರೀಲಂಕಾ ವಿರುದ್ಧ ಭಾರತ ತಂಡ 78 ರನ್ಗಳಿಗೆ, 1993ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 100 ರನ್ಗಳಿಗೆ, 2017ರಲ್ಲಿ ಆಸ್ಟ್ರೇಲಿಯಾ ವಿರುದ್ಧ 112 ರನ್ಗಳಿಗೆ ಭಾರತ ತಂಡ ಆಲ್ಔಟ್ ಆಗಿತ್ತು.
- ಆಸ್ಟ್ರೇಲಿಯಾ ತಂಡದ ವೇಗದ ಬೌಲರ್ ಏಕ ದಿನ ಮಾದರಿಯಲ್ಲಿ ಐದು ವಿಕೆಟ್ಗಳ ಗೊಂಚಲು ಪಡೆದವರ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿದ್ದಾರೆ. ಇದು ಅವರು 9ನೇ ಐದು ವಿಕೆಟ್ ಸಾಧನೆ. ಪಾಕಿಸ್ತಾನದ ವಕಾರ್ ಯೂನಿಸ್ (13 ಸಲ) ಹಾಗೂ ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ (10 ಸಲ) ಅವರಿಗಿಂತ ಹಿಂದಿದ್ದಾರೆ ಸ್ಟಾರ್ಕ್.
- ಎಸೆತಗಳ ಉಳಿಕೆ ಲೆಕ್ಕಾಚಾರದಲ್ಲಿ ಹೇಳುವುದಾದರೆ ಭಾರತ ತಂಡಕ್ಕೆ ಇದು ಅತ್ಯಂತ ಹೀನಾಯ ಸೋಲು. 234 ಎಸೆತಗಳು ಬಾಕಿ ಇರುವಂತೆಯೇ ಆಸ್ಟ್ರೇಲಿಯಾ ತಂಡ ಆತಿಥೇಯ ತಂಡ ನೀಡಿದ್ದ 118 ರನ್ಗಳ ಸವಾಲು ಮೀರಿತ್ತು.
- ಆಸ್ಟ್ರೇಲಿಯಾ ತಂಡ 11 ಓವರ್ಗಳಲ್ಲಿ 121 ರನ್ ಬಾರಿಸುವ ಮೂಲಕ ಮೂರನೇ ಅತಿವೇಗದ ಚೇಸ್ ಎಂಬ ದಾಖಲೆ ಸೃಷ್ಟಿಸಿತು. 2004ರಲ್ಲಿ ಯುಎಸ್ಎಸ ತಂಡ ನೀಡಿದ್ದ 66 ರನ್ಗಳ ಟಾರ್ಗೆಟ್ ಅನ್ನು 7.5 ಓವರ್ಗಳಲ್ಲಿ ಮೀರಿತ್ತು ಆಸ್ಟ್ರೇಲಿಯಾ. ಅದೇ ರೀತಿ 2013ರಲ್ಲಿ ವೆಸ್ಟ್ ಇಂಡೀಸ್ ನೀಡಿದ್ದ 71 ರನ್ಗಳ ಸವಾಲನ್ನು 9.2 ಓವರ್ಗಳಲ್ಲಿ ದಾಟಿತ್ತು.