Site icon Vistara News

WPL Auction 2023 : ಮಹಿಳೆಯರ ಪ್ರೀಮಿಯರ್​​ ಲೀಗ್​ ಹರಾಜಿನ ಬಳಿಕ ಐದು ತಂಡಗಳ ಸದಸ್ಯರ ಪಟ್ಟಿ ಇಲ್ಲಿದೆ

smriti mandhana

#image_title

ಮುಂಬಯಿ: ಉದ್ಘಾಟನಾ ಆವೃತ್ತಿಯ ಮಹಿಳೆಯರ ಪ್ರೀಮಿಯರ್​​ ಲೀಗ್​ (WPL Auction 2023) ಕ್ರಿಕೆಟ್​ ಟೂರ್ನಿಯ ಆಟಗಾರರ ಹರಾಜು ಪ್ರಕ್ರಿಯೆ ಸೋಮವಾರ (ಫೆಬ್ರವರಿ 13ರಂದು) ನಡೆಯಿತು. ಐದು ಫ್ರಾಂಚೈಸಿಗಳು ಜಿದ್ದಿಗೆ ಬಿದ್ದು ತಂಡವನ್ನು ಖರೀದಿ ಬಲಿಷ್ಠ ತಂಡವನ್ನು ಕಟ್ಟಿತು. ಪ್ರತಿ ತಂಡಕ್ಕೆ ಗರಿಷ್ಠ 12 ಕೋಟಿ ರೂಪಾಯಿಯಂತೆ ಒಟ್ಟು 60 ಕೋಟಿ ರೂಪಾಯಿ ವಿನಿಯೋಗಿಸಲು ಅವಕಾಶವಿತ್ತು. ಅದರಲ್ಲಿ 59.50 ಕೋಟಿ ರೂಪಾಯಿಗಳು ವೆಚ್ಚವಾಗಿವೆ. ಸುಮಾರು 80 ಆಟಗಾರ್ತಿಯರು ನಾನಾ ತಂಡಗಳನ್ನು ಸೇರಿಕೊಂಡರು. ಅವರಲ್ಲಿ 30 ವಿದೇಶಿಯರು.

ಎಡಗೈ ಬ್ಯಾಟರ್​ ಸ್ಮೃತಿ ಮಂಧಾನ 3.4 ಕೋಟಿ ರೂಪಾಯಿ ಪಡೆಯುವ ಮೂಲಕ ಗರಿಷ್ಠ ಬೆಲೆಗೆ ಹರಾಜಾದ ದಾಖಲೆ ಸೃಷ್ಟಿಸಿದರು. ಆಶ್ಲೇ ಗಾರ್ಡ್ನರ್​ 3.4 ಕೋಟಿ ರೂಪಾಯಿ, ನ್ಯಾಟ್​ ಸ್ಕೀವರ್​ 3.2 ಕೋಟಿ ರೂಪಾಯಿಗೆ ನಾನಾ ತಂಡಗಳನ್ನು ಸೇರಿಕೊಂಡರು. ದೀಪ್ತಿ ಶರ್ಮಾ 2.6 ಕೋಟಿ ರೂಪಾಯಿ ಪಡೆದರೆ, ಜೆಮಿಮಾ ರೋಡ್ರಿಗಸ್​ 2 ಕೋಟಿ ರೂಪಾಯಿ ಪರ್ಸ್​ಗೆ ಇಳಿಸಿಕೊಂಡರು.

ಡಬ್ಲ್ಯುಪಿಎಲ್​ ಹರಾಜು ಮುಗಿದ ಬಳಿಕ ತಂಡಗಳ ಬಲ ಇಂತಿದೆ

ಆರ್​ಸಿಬಿ

ಸ್ಮೃತಿ ಮಂಧಾನಾ (3.4 ಕೋಟಿ), ಸೋಫಿ ಡಿವೈನ್ ( 50 ಲಕ್ಷ), ಎಲಿಸ್​ ಪೆರಿ (1.7 ಕೋಟಿ), ರೇಣುಕಾ ಸಿಂಗ್ (1.5 ಕೋಟಿ), ರಿಚಾ ಘೋಷ್ (1.9 ಕೋಟಿ), ಎರಿನ್ ಬರ್ನ್ಸ್ (30 ಲಕ್ಷ), ದಿಶಾ ಕಸತ್ (10 ಲಕ್ಷ), ಇಂದ್ರಾಣಿ ರಾಯ್ (10 ಲಕ್ಷ), ಶ್ರೇಯಾಂಕ ಪಾಟೀಲ್ (10 ಲಕ್ಷ), ಕನಿಕಾ ಅಹುಜಾ (35 ಲಕ್ಷ), ಆಶಾ ಶೋಭನಾ (10 ಲಕ್ಷ), ಹೇದರ್ ನೈಟ್ (I40 ಲಕ್ಷ), ಡೇನ್ ವ್ಯಾನ್ ನೀಕರ್ಕ್ (30 ಲಕ್ಷ), ಪ್ರೀತಿ ಬೋಸ್ (30 ಲಕ್ಷ), ಪೂನಮ್ ಖೇಮ್ನಾರ್ (10 ಲಕ್ಷ), ಕೋಮಲ್ ಝಂಝಾದ್ (25 ಲಕ್ಷ), ಮೇಗನ್ ಶೂಟ್ (40 ಲಕ್ಷ), ಸಹನಾ ಪವಾರ್ (10 ಲಕ್ಷ).

ಮುಂಬೈ ಇಂಡಿಯನ್ಸ್

ಹರ್ಮನ್‌ಪ್ರೀತ್ ಕೌರ್ (1.8 ಕೋಟಿ), ನ್ಯಾಟ್ ಸಿವರ್ (3.2 ಕೋಟಿ), ಅಮೆಲಿಯಾ ಕೆರ್ (1 ಕೋಟಿ), ಪೂಜಾ ವಸ್ತ್ರಾಕರ್ (1.9 ಕೋಟಿ), ಯಾಸ್ತಿಕಾ ಭಾಟಿಯಾ (1.5 ಕೋಟಿ), ಹೀದರ್ ಗ್ರಹಾಂ (30 ಲಕ್ಷ), ಇಸಾಬೆಲ್ಲೆ ವಾಂಗ್ (30 ಲಕ್ಷ), ಅಮನ್ಜೋತ್ ಕೌರ್ (50 ಲಕ್ಷ), ಧಾರಾ ಗುಜಾರ್ (10 ಲಕ್ಷ), ಸೈಕಾ ಇಶಾಕ್ (10 ಲಕ್ಷ), ಹೇಲಿ ಮ್ಯಾಥ್ಯೂಸ್ (40 ಲಕ್ಷ), ಕ್ಲೋಯ್ ಟ್ರಯಾನ್ (30 ಲಕ್ಷ), ಹುಮೈರಾ ಖಾಜಿ (10 ಲಕ್ಷ), ಪ್ರಿಯಾಂಕಾ ಬಾಲಾ (20 ಲಕ್ಷ), ಸೋನಮ್ ಯಾದವ್ (10 ಲಕ್ಷ), ಜಿಂತಿಮಣಿ ಕಲಿತಾ (10 ಲಕ್ಷ), ನೀಲಂ ಬಿಷ್ತ್ (10 ಲಕ್ಷ).

ಯುಪಿ ವಾರಿಯರ್ಸ್​

ಸೋಫಿ ಎಕ್ಲೆಸ್ಟೋನ್ (1.8 ಕೋಟಿ), ದೀಪ್ತಿ ಶರ್ಮಾ (2.6 ಕೋಟಿ), ತಹ್ಲಿಯಾ ಮೆಕ್‌ಗ್ರಾತ್ (1.4 ಕೋಟಿ), ಶಬ್ನಿಮ್ ಇಸ್ಮಾಯಿಲ್ (1 ಕೋಟಿ), ಅಲಿಸ್ಸಾ ಹೀಲಿ (70 ಲಕ್ಷ), ಅಂಜಲಿ ಸರ್ವಾಣಿ (55 ಲಕ್ಷ), ರಾಜೇಶ್ವರಿ ಗಾಯಕ್ವಾಡ್ (40 ಲಕ್ಷ), ಪಾರ್ಶವಿ ಚೋಪ್ರಾ (10 ಲಕ್ಷ), ಶ್ವೇತಾ ಸೆಹ್ರಾವತ್ (40 ಲಕ್ಷ), ಎಸ್​ ಯಶಸ್ರಿ (10 ಲಕ್ಷ), ಕಿರಣ್ ನವಗಿರೆ (30 ಲಕ್ಷ), ಗ್ರೇಸ್ ಹ್ಯಾರಿಸ್ (75 ಲಕ್ಷ), ದೇವಿಕಾ ವೈದ್ಯ (1.4 ಕೋಟಿ), ಲಾರೆನ್ ಬೆಲ್ (30 ಲಕ್ಷ), ಲಕ್ಷ್ಮಿ ಯಾದವ್ (10 ಲಕ್ಷ), ಸಿಮ್ರಾನ್ ಶೇಖ್ (10 ಲಕ್ಷ).

ದೆಹಲಿ ಕ್ಯಾಪಿಟಲ್ಸ್​

ಜೆಮಿಮಾ ರೋಡ್ರಿಗಸ್ (2.2 ಕೋಟಿ), ಮೆಗ್ ಲ್ಯಾನಿಂಗ್ (1.1 ಕೋಟಿ), ಶಫಾಲಿ ವರ್ಮಾ (2 ಕೋಟಿ), ರಾಧಾ ಯಾದವ್ (40 ಲಕ್ಷ), ಶಿಖಾ ಪಾಂಡೆ (60 ಲಕ್ಷ), ಮರಿಜಾನ್ನೆ ಕಾಪ್ (1.5 ಕೋಟಿ), ಟೈಟಾಸ್ ಸಾಧು (25 ಲಕ್ಷ), ಆಲಿಸ್ ಕ್ಯಾಪ್ಸೆ (75 ಲಕ್ಷ), ತಾರಾ ನಾರ್ರಿಸ್ (10 ಲಕ್ಷ), ಲಾರಾ ಹ್ಯಾರಿಸ್ (45 ಲಕ್ಷ), ಜಸಿಯಾ ಅಖ್ತರ್ (20 ಲಕ್ಷ), ಮಿನ್ನು ಮಣಿ (30 ಲಕ್ಷ), ಜೆಸ್ ಜೋನಾಸೆನ್ (50 ಲಕ್ಷ), ತನಿಯಾ ಭಾಟಿಯಾ (30 ಲಕ್ಷ), ಪೂನಮ್ ಯಾದವ್ (30 ಲಕ್ಷ), ಸ್ನೇಹಾ ದೀಪ್ತಿ (30 ಲಕ್ಷ), ಅರುಂಧತಿ ರೆಡ್ಡಿ (30 ಲಕ್ಷ), ಅಪರ್ಣಾ ಮೊಂಡಲ್ (10 ಲಕ್ಷ).

ಇದನ್ನೂ ಓದಿ : WPL 2023 Auction : ಐದು ಆಟಗಾರ್ತಿಯರ ಖರೀದಿಗೆ 9 ಕೋಟಿ ರೂಪಾಯಿ ವ್ಯಯಿಸಿದ ಆರ್​ಸಿಬಿ

ಗುಜರಾತ್ ಜಯಂಟ್ಸ್​

ಆಶ್ಲೀಗ್ ಗಾರ್ಡ್ನರ್ (3.4 ಕೋಟಿ), ಬೆತ್ ಮೂನಿ (2.2 ಕೋಟಿ), ಸೋಫಿಯಾ ಡಂಕ್ಲಿ (60 ಲಕ್ಷ), ಅನ್ನಾಬೆಲ್ ಸದರ್ಲ್ಯಾಂಡ್ (70 ಲಕ್ಷ), ಹರ್ಲೀನ್ ಡಿಯೋಲ್ (40 ಲಕ್ಷ), ಡೇಂಡ್ರಾ ಡಾಟಿನ್ (60 ಲಕ್ಷ), ಸ್ನೇಹ ರಾಣಾ (75 ಲಕ್ಷ), ಸಬ್ಬಿನೇನಿ ಮೇಘನಾ (30 ಲಕ್ಷ), ಜಾರ್ಜಿಯಾ ವೇರ್ಹ್ಯಾಮ್ (75 ಲಕ್ಷ), ಮಾನ್ಸಿ ಜೋಶಿ (30 ಲಕ್ಷ), ದಯಾಳಂ ಹೇಮಲತಾ (30 ಲಕ್ಷ), ಮೋನಿಕಾ ಪಟೇಲ್ (30 ಲಕ್ಷ), ತನುಜಾ ಕನ್ವರ್ ( 50 ಲಕ್ಷ), ಸುಷ್ಮಾ ವರ್ಮಾ (60 ಲಕ್ಷ), ಹರ್ಲಿ ಗಾಲಾ (10 ಲಕ್ಷ), ಪರುಣಿಕಾ ಸಿಸೋಡಿಯಾ (10 ಲಕ್ಷ), ಶಬ್ನಮ್ ಶಕೀಲ್ (10 ಲಕ್ಷ), ಅಶ್ವನಿ ಕುಮಾರಿ (35 ಲಕ್ಷ).

Exit mobile version