Site icon Vistara News

ICC World Cup 2023 : ವಿಶ್ವ ಕಪ್​ನ 18ನೇ ಪಂದ್ಯದ ಬಳಿಕ ಅಂಕ ಪಟ್ಟಿ ಹೀಗಿದೆ..

Point Table

ಬೆಂಗಳೂರು: ವಿಶ್ವಕಪ್​ನ (ICC World Cup 2023) 18ನೇ ಪಂದ್ಯ ಶುಕ್ರವಾರ (ಅಕ್ಟೋಬರ್​ 20ರಂದು) ಮುಕ್ತಾಯಗೊಂಡಿದೆ. ಈ ಪಂದ್ಯದ ಬಳಿಕ ಐದು ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾ ತಂಡ ಅಂಕಪಟ್ಟಿಯಲ್ಲಿ ಭರ್ಜರಿ ಪ್ರಗತಿ ಸಾಧಿಸಿದೆ. ಸತತವಾಗಿ ಎರಡು ಪಂದ್ಯಗಳನ್ನು ಗೆದ್ದಿರುವ ತಂಡ ಇದೀಗ ನಾಲ್ಕು ಅಂಕಗಳೊಂದಿಗೆ ನಾಲ್ಕನೇ ಸ್ಥಾನಕ್ಕೆ ಏರಿದೆ. ಪಾಕಿಸ್ತಾನ ತಂಡ ಒಂದು ಸ್ಥಾನ ಕಳೆದುಕೊಂಡಿದ್ದು ಐದನೇ ಸ್ಥಾನಕ್ಕೆ ಇಳಿದಿದೆ. ಎರಡೂ ತಂಡಗಳು ಸಮವಾಗಿ ನಾಲ್ಕು ಪಂದ್ಯಗಳನ್ನು ಆಡಿದೆ. ಅದರಲ್ಲಿ ತಲಾ ಎರಡು ವಿಜಯ ದಾಖಲಿಸಿ ತಲಾ 4 ಅಂಕಗಳನ್ನು ತಮ್ಮದಾಗಿಸಿಕೊಂಡಿದೆ. ಆದರೆ, ಪಾಕಿಸ್ತಾನಕ್ಕಿಂತ (-0.456) ನೆಟ್​ರನ್​ರೇಟ್​ ಹೆಚ್ಚು ಹೊಂದಿರುವ ಆಸ್ಟ್ರೇಲಿಯಾ (0.193) ತಂಡ ಒಂದು ಸ್ಥಾನ ಮುಂದಿದೆ.

ಅಂಕಪಟ್ಟಿಯಲ್ಲಿ ನ್ಯೂಜಿಲ್ಯಾಂಡ್​ ಅಗ್ರಸ್ಥಾನ ಗಳಿಸಿದೆ. ಈ ತಂಡ ಆಡಿರುವ ನಾಲ್ಕರಲ್ಲೂ ಗೆದ್ದು 8 ಅಂಕಗಳನ್ನು ಪಡೆದುಕೊಂಡಿದೆ. ಆತಿಥೇಯ ಭಾರತವೂ ನಾಲ್ಕರಲ್ಲಿ 4 ಪಂದ್ಯಗಳನ್ನೂ ಗೆದ್ದು 8 ಅಂಕಗಳನ್ನು ಪಡೆದಕೊಂಡಿದೆ. ಆದರೆ, ಭಾರತಕ್ಕಿಂತ (1.659) ನ್ಯೂಜಿಲ್ಯಾಂಡ್​ (1.923) ನೆಟ್​ರನ್​ರೇಟ್​ ಮುಂದಿರುವ ಕಾರಣ ಮೊದಲ ಸ್ಥಾನ ಗಳಿಸಿಕೊಂಡಿದೆ. ಇಂಗ್ಲೆಂಡ್, ಬಾಂಗ್ಲಾದೇಶ, ನೆದರ್ಲ್ಯಾಂಡ್ಸ್​​, ಅಫಘಾನಿಸ್ತಾನ ಹಾಗೂ ಶ್ರೀಲಂಕಾ ಅನುಕ್ರಮವಾಗಿ 5ರ ನಂತರದ ಸ್ಥಾನಗಳನ್ನು ಪಡೆದುಕೊಂಡಿವೆ. ಇದರಲ್ಲಿ ಕೊನೇ ಸ್ಥಾನದಲ್ಲಿರುವ ಶ್ರೀಲಂಕಾ ಆಡಿರುವ ಮೂರರಲ್ಲಿ 3 ಪಂದ್ಯಗಳನ್ನೂ ಸೋತಿದೆ. ಇಂಗ್ಲೆಂಡ್​ 3ರಲ್ಲಿ 1 ಪಂದ್ಯ ಮಾತ್ರ ಗೆದ್ದಿದ್ದು, ಬಾಂಗ್ಲಾದೇಶ 4ರಲ್ಲಿ ಏಕೈಕ ಜಯ ಕಂಡಿದೆ. ಅಫಘಾನಿಸ್ತಾನ 4ರಲ್ಲಿ ಒಂದು ಜಯ ಹಾಗೂ ನೆದರ್ಲ್ಯಾಂಡ್ಸ್​​ 3ರಲ್ಲಿ ಒಂದು ಗೆಲವು ತನ್ನದಾಗಿಸಿಕೊಂಡಿದೆ.

ತಂಡಪಂದ್ಯಗೆಲುವುಸೋಲುಅಂಕನೆಟ್​ ರನ್​ರೇಟ್​
ನ್ಯೂಜಿಲ್ಯಾಂಡ್​44081.923
ಭಾರತ44081.659
ದಕ್ಷಿಣ ಆಫ್ರಿಕಾ32141.385
ಆಸ್ಟ್ರೇಲಿಯಾ4224-0.193
ಪಾಕಿಸ್ತಾನ4224-0.456
ಇಂಗ್ಲೆಂಡ್​3122-0.084
ಬಾಂಗ್ಲಾದೇಶ4132-0.784
ನೆದರ್ಲ್ಯಾಂಡ್ಸ್​3122-0.993
ಅಫಘಾನಿಸ್ತಾನ4132-1.250
ಶ್ರೀಲಂಕಾ3030-1.532

ಈ ಸುದ್ದಿಗಳನ್ನೂ ಓದಿ
ICC World Cup 2023: ಪಾಕ್​ ಅಭಿಮಾನಿಗಳಿಗೂ ಪಾಕಿಸ್ತಾನ ಜಿಂದಾಬಾದ್​ ಹೇಳಲು ಬಿಡದ ಪೊಲೀಸರು​; ಆರೋಪ
Viral Video: ಪಿಯಾನೋ ನುಡಿಸಿದ ಲಸಿತ್​ ಮಾಲಿಂಗ; ವಿಡಿಯೊ ವೈರಲ್​

ಪಾಕಿಸ್ತಾನ ತಂಡಕ್ಕೆ ಹೀನಾಯ ಸೋಲು

ಬೆಂಗಳೂರು: ಪಾಕಿಸ್ತಾನ ತಂಡಕ್ಕೆ ವಿಶ್ವ ಕಪ್​ನಲ್ಲಿ (ICC World Cup 2023) ಮತ್ತೊಂದು ಕಹಿ ಅನುಭವ ಉಂಟಾಗಿದೆ. ಆಸ್ಟ್ರೇಲಿಯಾ (Aus vs Pak) ವಿರುದ್ಧದ ತನ್ನ ಪಂದ್ಯದಲ್ಲಿ 62 ರನ್​ಗಳ ಹೀನಾಯ ಸೋಲಿಗೆ ಒಳಗಾಗಿದೆ. ಈ ಮೂಲಕ ಆಡಿರುವ ನಾಲ್ಕು ಪಂದ್ಯಗಳಲ್ಲಿ ಎರಡು ಗೆಲುವು ಹಾಗೂ ಎರಡು ಸೋಲು ಕಂಡಿದೆ. ಇದಕ್ಕಿಂತ ಹಿಂದಿನ ಪಂದ್ಯದಲ್ಲಿ ಪಾಕಿಸ್ತಾನ ತಂಡ ಭಾರತ ವಿರುದ್ಧ 7 ವಿಕೆಟ್​ ಅವಮಾನಕರ ಸೋಲಿಗೆ ತುತ್ತಾಗಿತ್ತು. ಏತನ್ಮಧ್ಯೆ ಆಸ್ಟ್ರೇಲಿಯಾ ತಂಡ ಮೊದಲೆರಡು ಸೋಲಿನ ಬಳಿಕ ಚೇತರಿಸಿಕೊಂಡಿದ್ದು ಸತತ ಎರಡನೇ ವಿಜಯಕ್ಕೆ ಪಾತ್ರವಾಗಿದೆ. ಹಿಂದಿನ ಪಂದ್ಯದಲ್ಲಿ ಲಂಕಾ ವಿರುದ್ಧ ಆಸೀಸ್​ ಬಳಗ ವಿಜಯ ಕಂಡಿತ್ತು.

ಇಲ್ಲಿನ ಚಿನ್ನಸ್ವಾಮಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಆಸ್ಟ್ತೇಲಿಯಾ ತಂಡ ನಿಗದಿತ 50 ಓವರ್​ಗಳಲ್ಲಿ 9 ವಿಕೆಟ್ ನಷ್ಟಕ್ಕೆ 367 ರನ್ ಬಾರಿಸಿತ್ತು. ಪ್ರತಿಯಾಗಿ ಬ್ಯಾಟ್ ಮಾಡಿದ ಪಾಕಿಸ್ತಾನ ತಂಡ 45.3 ಓವರ್​ಗಳಲ್ಲಿ 305 ರನ್​ಗಳಿಗೆ ಆಲ್​ಔಟ್ ಆಗಿ ಸೋಲೊಪ್ಪಿಕೊಂಡಿತು

Exit mobile version