Site icon Vistara News

ICC World Cup 2023 : ಅಂಕಪಟ್ಟಿಯಲ್ಲಿ ದ. ಆಫ್ರಿಕಾ ಎರಡನೇ ಸ್ಥಾನಕ್ಕೇರಿದ್ದು ಹೇಗೆ ಎಂಬ ವಿವರ ಇಲ್ಲಿದೆ

South Africa team

ಬೆಂಗಳೂರು: ವಿಶ್ವ ಕಪ್​ನ 23ನೇ ಪಂದ್ಯದಲ್ಲಿ (ICC World Cup 2023) ದಕ್ಷಿಣ ಆಫ್ರಿಕಾ ತಂಡ ಎದುರಾಳಿ ಬಾಂಗ್ಲಾದೇಶ ವಿರುದ್ಧ 149 ರನ್​ಗಳ ಬೃಹತ್ ವಿಜಯ ದಾಖಲಿಸಿದೆ. ಇದು ಹರಿಣ ಪಡೆಗಳಿಗೆ ಹಾಲಿ ಆವೃತ್ತಿಯಲ್ಲಿ ಲಭಿಸಿದ ಮತ್ತೊಂದು ಬೃಹತ್ ವಿಜಯ. ಈ ಪಂದ್ಯದ ಫಲಿತಾಂಶದೊಂದಿಗೆ ಐಸಿಸಿ ವಿಶ್ವ ಕಪ್​ ಅಂಕಪಟ್ಟಿಯಲ್ಲಿ ಬದಲಾವಣೆ ಆಗಿದೆ. ಮೂರನೇ ಸ್ಥಾನದಲ್ಲಿದ್ದ ದಕ್ಷಿಣ ಆಫ್ರಿಕಾ ತಂಡ 2ನೇ ಸ್ಥಾನಕ್ಕೆ ಬಡ್ತಿ ಪಡೆದುಕೊಂಡಿದೆ. ಇದೇ ವೇಳೆ 7ನೇ ಸ್ಥಾನದಲ್ಲಿದ್ದ ಬಾಂಗ್ಲಾದೇಶ ತಂಡ 10ನೇ ಸ್ಥಾನಕ್ಕೆ ಜಾರಿದೆ.

ದಕ್ಷಿಣ ಆಫ್ರಿಕಾ ತಂಡಕ್ಕೆ ಇದು ವಿಶ್ವ ಕಪ್​ನ ನಾಲ್ಕನೇ ಗೆಲುವು. ನೆದರ್ಲ್ಯಾಂಡ್ಸ್ ಒಂದನ್ನು ಹೊರತುಪಡಿಸಿ, ಶ್ರೀಲಂಕಾ, ಆಸ್ಟ್ರೇಲಿಯಾ, ಇಂಗ್ಲೆಂಡ್ ಹಾಗೂ ಇದೀಗ ಬಾಂಗ್ಲಾ ವಿರುದ್ಧ ಗೆದ್ದಿದೆ. ಆಡಿರುವ ಐದು ಪಂದ್ಯಗಳಲ್ಲಿ ಒಂದರಲ್ಲಿ ಮಾತ್ರ ಸೋಲು ಮೂಲಕ ಒಟ್ಟು 8 ಅಂಕ ಸಂಪಾದಿಸಿದೆ. ಹೀಗಾಗಿ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನವು ಸಿಕ್ಕಿದೆ. ಈ ವೇಳೆ ಅಷ್ಟೇ ಪಂದ್ಯಗಳಲ್ಲಿ ಅಷ್ಟೇ ಸೋಲು ಗೆಲುವಿನ ಲೆಕ್ಕಾಚಾರ ಹೊಂದಿರುವ ನ್ಯೂಜಿಲ್ಯಾಂಡ್​ ತಂಡವನ್ನು ಹಿಂದಕ್ಕೆ ತಳ್ಳಿದೆ. ಅದಕ್ಕೆ ಕಾರಣ ನೆಟ್​ರನ್​ ರೇಟ್​. ದಕ್ಷಿಣ ಆಫ್ರಿಕಾ ತಂಡದ ನೆಟ್​ ರನ್​ರೇಟ್​ (2.370) ನ್ಯೂಜಿಲ್ಯಾಂಡ್​ಗಿಂತ (1.481) ಅಧಿಕವಿರುವ ಅದು ಸುಲಭವಾಗಿ ಎರಡನೇ ಸ್ಥಾನ ಪಡೆದುಕೊಂಡಿದೆ. ಇನ್ನು ಎದುರಾಳಿ ಬಾಂಗ್ಲಾದೇಶ ಐದು ಪಂದ್ಯಗಳಲ್ಲಿ ಒಂದರಲ್ಲಿ ಮಾತ್ರ ಗೆದ್ದಿದ್ದು 2 ಅಂಕ ಪಡೆದುಕೊಂಡಿದೆ. ಜತೆಗೆ 2 ಅಂಕ ಗಳಿಸಿರುವ ಇತರ ತಂಡಗಳಿಗಿಂತ ಕನಿಷ್ಠ ನೆಟ್​ರನ್​ರೇಟ್​ (-1.253) ಹೊಂದಿರುವ ಕಾರಣ 10 ಸ್ಥಾನಕ್ಕೆ ಜಾರುವಂತಾಗಿದೆ.

ಪಟ್ಟಿಯಲ್ಲಿ ಐದರಲ್ಲಿ ಐದನ್ನೂ ಗೆದ್ದಿರುವ ಟೀಮ್ ಇಂಡಿಯಾ ಒಟ್ಟು 10 ಅಂಕಗಳೊಂದಿಗೆ ಮೊದಲ ಸ್ಥಾನ ಪಡೆದಿದೆ. ನಾಲ್ಕರಲ್ಲಿ ಎರಡು ಗೆಲವು ಹಾಗೂ ಅಷ್ಟೇ ಸೋಲು ಎದುರಿಸಿರುವ ಆಸ್ಟ್ರೇಲಿಯಾ ತಂಡದ ಖಾತೆಯಲ್ಲಿ 4 ಅಂಕಗಳಿದ್ದು -0.193 ನೆಟ್​ ರನ್​ರೇಟ್​ನೊಂದಿಗೆ 4ನೇ ಸ್ಥಾನದಲ್ಲಿದೆ. ಐದು ಪಂದ್ಯಗಳಲ್ಲಿ ಎರಡನ್ನು ಮಾತ್ರ ಗೆದ್ದಿರುವ ಪಾಕ್ ತಂಡ 4 ಅಂಕವನ್ನೇ ಹೊಂದಿದೆ. ಆದರೆ, -0.400 ನೆಟ್​ ರನ್​ರೇಟ್​ ಪಡೆದು 5ನೇ ಸ್ಥಾನಕ್ಕೆ ತೃಪ್ತಿ ಪಟ್ಟಿದೆ.

6ನೇ ಸ್ಥಾನ ಅಫಘಾನಿಸ್ತಾನ ತಂಡದ ಪಾಲಾಗಿದೆ. ಅದು ಆಡಿರುವ 5ರಲ್ಲಿ ಎರಡು ಗೆಲುವು ಕಂಡಿದೆ. ಖಾತೆಯಲ್ಲಿ 4 ಅಂಕಗಳಿವೆ. -0.969 ರನ್​ ರೇಟ್​ ಹೊಂದಿದೆ, ನೆದರ್ಲ್ಯಾಂಡ್ಸ್​ ತಂಡ ಏಳನೇ ಕ್ರಮಾಂಕ ಹೊಂದಿದ್ದು, 4 (ಪಂದ್ಯ) 1 (ಗೆಲುವು) 3 (ಸೋಲು) 2 (ಅಂಕ) -0.790 (ರನ್​ರೇಟ್​), ಶ್ರೀಲಂಕಾ ತಂಡಕ್ಕಿಂತ (4ಪಂದ್ಯ, 1 ಜಯ, 3 ಸೋಲು, 2 ಅಂಕ, -1.048 ರನ್​ರೇಟ್​​) ಮೇಲಿನ ಸ್ಥಾನದಲ್ಲಿದೆ. ಇಂಗ್ಲೆಂಡ್ ಈಗ ಆಡಿರುವ ನಾಲ್ಕು ಪಂದ್ಯಗಳಲ್ಲಿ ಏಕೈಕ ವಿಜಯ ಸಾಧಿಸಿದೆ. ಕೇವಲ 2 ಅಂಕ ಹಾಗೂ 2.212 ನೆಟ್​ ರನ್​ರೇಟ್​ ಹೊಂದಿದೆ.

ಅಂಕಪಟ್ಟಿ ವಿವರ ಇಲ್ಲಿದೆ

ತಂಡಪಂದ್ಯಗೆಲುವುಸೋಲುಅಂಕನೆಟ್​ ರನ್​ರೇಟ್​
ಭಾರತ550101.353
ದಕ್ಷಿಣ ಆಫ್ರಿಕಾ54182.370
ನ್ಯೂಜಿಲ್ಯಾಂಡ್​54181.481
ಆಸ್ಟ್ರೇಲಿಯಾ4224-0.193
ಪಾಕಿಸ್ತಾನ5234-0.400
ಅಫಘಾನಿಸ್ತಾನ5234-0.969
ನೆದರ್ಲ್ಯಾಂಡ್ಸ್​​ 4132-0.790
ಶ್ರೀಲಂಕಾ4132-1.048
ಇಂಗ್ಲೆಂಡ್​ 4132-1.248
ಬಾಂಗ್ಲಾದೇಶ 5142-1.253

ವಿಶ್ವ ಕಪ್​ನ 24ನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ಮತ್ತು ನೆದರ್ಲ್ಯಾಂಡ್ಸ್​ ತಂಡ ಸೆಣಸಾಡಲಿದೆ. ಅಕ್ಟೋಬರ್​ 25ರಂದು ಈ ಪಂದ್ಯ ನಡೆಯಲಿದೆ. ಈ ಪಂದ್ಯದ ಬಳಿಕ ಅಂಕಪಟ್ಟಿಯಲ್ಲಿ ಮತ್ತಷ್ಟು ಬದಲಾವಣೆಯಾಗಲಿದೆ.

Exit mobile version