ದುಬೈ : ಭಾರತ ತಂಡ (Team India) ಪಾಕಿಸ್ತಾನ ವಿರುದ್ಧದ ಸೂಪರ್-೪ ಹಣಾಹಣಿಯಲ್ಲಿ ಸೋತ ಹೊರತಾಗಿಯೂ ಆಟಗಾರರು ಕೆಲವೊಂದು ದಾಖಲೆಗಳನ್ನು ಸೃಷ್ಟಿ ಮಾಡಿದ್ದಾರೆ. ಅಂತೆಯೇ ಟೀಮ್ ಇಂಡಿಯಾದ ಆರಂಭಿಕ ಬ್ಯಾಟರ್‌ಗಳಾದ ರೋಹಿತ್ ಶರ್ಮ ಮತ್ತು ಕೆ. ಎಲ್ ರಾಹುಲ್ ಕೂಡ ನೂತನ ಸಾಧನೆಯೊಂದನ್ನು ಮಾಡಿದ್ದಾರೆ. ಅದೇನೆಂದರೆ ಅತಿ ಟಿ೨೦ ಕ್ರಿಕೆಟ್ ಇತಿಹಾಸದಲ್ಲಿ ಹೆಚ್ಚು ೫೦ ಪ್ಲಸ್ ರನ್‌ಗಳ ಜತೆಯಾಟ.
ರೋಹಿತ್ ಹಾಗೂ ರಾಹುಲ್ ಜೋಡಿ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಮೊದಲ ೩೧ ಎಸೆತಗಳಲ್ಲಿ ೫೪ ರನ್ ಬಾರಿಸಿದ್ದರು. ಈ ಮೂಲಕ ಅವರಿಬ್ಬರು ಟಿ೨೦ ಮಾದರಿಯಲ್ಲಿ ಒಟ್ಟಾರೆ ೧೪ ಬಾರಿ ೫೦ ರನ್ ಅಥವಾ ಅದಕ್ಕಿಂತ ಹೆಚ್ಚು ರನ್ ಬಾರಿಸಿದ ಹೆಗ್ಗಳಿಕೆಗೆ ಪಾತ್ರರಾದರು. ಇದು ಟಿ೨೦ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಪ್ರಸ್ತುತ ಗರಿಷ್ಠ ಸಾಧನೆಯಾಗಿದೆ.
ರೋಹಿತ್ ಮತ್ತು ರಾಹುಲ್ ಅವರ ೫೦ ಪ್ಲಸ್ ಜತೆಯಾಟದ ಸಾಧನೆಯಲ್ಲಿ ೯ ಬಾರಿ ಅರ್ಧ ಶತಕದ ಜತೆಯಾಟವಾದರೆ, ಇನ್ನೈದು ಶತಕದ ಜತೆಯಾಟವಾಗಿದೆ. ಐರ್ಲೆಂಡ್‌ನ ಪಾಲ್ ಸ್ಟಿರ್ಲಿಂಗ್ ಮತ್ತು ಕೆವಿನ್ ಒಬ್ರಿಯಾನ್ ಜೋಡಿ ೧೩ ಬಾರಿ ೫೦ ಪ್ಲಸ್ ರನ್ ಬಾರಿಸಿ ಈ ಸಾಲಿನಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದ್ದಾರೆ. ಅವರ ಸಾಧನೆಯಲ್ಲಿ ಮೂರು ಬಾರಿ ಶತಕದ ಜತೆಯಾಟವಾದರೆ ಇನ್ನುಳಿದ ೧೦ ಬಾರಿ ಅರ್ಧ ಶತಕಗಳ ಸಾಧನೆಯಾಗಿದೆ.
ನ್ಯೂಜಿಲೆಂಡ್‌ನ ಕೇನ್ ವಿಲಿಯಮ್ಸನ್ ಮತ್ತು ಮಾರ್ಟಿನ್ ಗಪ್ಟಿಲ್ ಜೋಡಿ ೧೨ ಬಾರಿ ೫೦ ಪ್ಲಸ್ ಜತೆಯಾಟವಾಡಿದ್ದಾರೆ. ಅದರಲ್ಲಿ ನಾಲ್ಕು ಬಾರಿ ಶತಕದ ಜತೆಯಾಟವಾಗಿದೆ. ಪಾಕಿಸ್ತಾನ ತಂಡದ ಬಾಬರ್ ಅಜಮ್ ಹಾಗೂ ಮೊಹಮ್ಮದ್ ರಿಜ್ವಾನ್ ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆದುಕೊಂಡಿದ್ದು ಅವರಿಬ್ಬರು ೧೧ ಬಾರಿ ೫೦ ಪ್ಲಸ್ ಜತೆಯಾಟವಾಡಿದ್ದಾರೆ. ಅದರಲ್ಲಿ ೬ಕ್ಕೂ ಹೆಚ್ಚು ಬಾರಿ ಶತಕದ ಜತೆಯಾಟವಾಡಿದ್ದಾರೆ.
ಇದನ್ನೂ ಓದಿ | Virat kohli | ಟಿ20 ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ಅರ್ಧ ಶತಕಗಳು ಬಾರಿಸಿದ ವಿರಾಟ್ ಕೊಹ್ಲಿ