Site icon Vistara News

Hero MotoCorp : ಹೀರೋ ಸೂಪರ್​ ಸ್ಪ್ಲೆಂಡರ್​ XTEC ಭಾರತದಲ್ಲಿ ಬಿಡುಗಡೆ, ಏನಿವೆ ವಿಶೇಷತೆಗಳು?

Hero Super Splendor XTEC launched in India, what are the features?

#image_title

ಮುಂಬಯಿ: ಭಾರತದ ಅತಿ ದೊಡ್ಡ ದ್ವಿಚಕ್ರ ವಾಹನ ತಯಾರಿಕಾ ಕಂಪನಿಯಾಗಿರುವ ಹೀರೋ ಮೋಟೊಕಾರ್ಪ್​ (Hero MotoCorp) ಹೊಚ್ಚ ಹೊಸ ಸೂಪರ್ ಸ್ಪ್ಲೆಂಡರ್​ XTEC ಬೈಕ್​ ಭಾರತದ ಮಾರುಕಟ್ಟೆಗೆ ಇಳಿಸಿದೆ. ಇದಲ್ಲಿ ಹಲವಾರು ವಿನ್ಯಾಸದ ಅಪ್​ಡೇಟ್​ಗಳನ್ನು ನೀಡುವ ಜತೆಗೆ ಕನೆಕ್ಟಿವಿಟಿ ಫೀಚರ್​ಗಳನ್ನೂ ಕೊಟ್ಟಿದ್ದಾರೆ. ಡ್ರಮ್​ ಬ್ರೇಕ್​ ಹಾಗೂ ಡಿಸ್ಕ್​ ಬ್ರೇಕ್​ ಎಂಬ ಎರಡು ವೇರಿಯೆಂಟ್​ಗಳಲ್ಲಿ ಈ ಬೈಕ್ ಲಭ್ಯವಿದ್ದು, ಅನುಕ್ರಮವಾಗಿ 83, 368 ರೂಪಾಯಿ ಹಾಗೂ 87, 268 ರೂಪಾಯಿ ಬೆಲೆ ನಿಗದಿ ಮಾಡಲಾಗಿದೆ.

ಯುವಕರನ್ನು ಸೆಳೆಯುವ ಉದ್ದೇಶದಿಂದ ಹೀರೋ ಮೋಟೋಕಾರ್ಪ್​ ಸ್ಪ್ಲೆಂಡರ್​ ಬೈಕ್​ನಲ್ಲಿ ಕಾಸ್ಮೆಟಿಕ್​ ಅಪ್​ಡೇಟ್​ಗಳನ್ನು ಮಾಡಿದ್ದಾರೆ. ಇದರೊಂದಿಗೆ 125 ಸಿಸಿ ಬೈಕ್​ನ ಸೆಗ್ಮೆಂಟ್​ಗೆ ಹೊಸ ಸೇರ್ಪಡೆ ಮಾಡಿದೆ.

ಹೊಸ ಸೂಪರ್ ಸ್ಪ್ಲೆಂಡರ್​ XTEC ಬೈಕ್​ನಲ್ಲಿ ಎಲ್ಇಡಿ ಹೆಡ್​ಲೈಟ್​ಗಳನ್ನು ನೀಡಲಾಗಿದೆ. ಡಿಜಿಟಲ್​ ಸ್ಪೀಡೋಮೀಟರ್​, ಲೋ ಫ್ಯುಯೆಲ್​ ಇಂಡಿಕೇಟರ್​, ಸರ್ವಿಸ್​ ರಿಮೈಂಡರ್​, ಮಾಲ್​ಫಂಕ್ಷನ್​ ಇಂಡಿಕೇಟರ್​ ಫೀಚರ್​ಗಳನ್ನು ನೀಡಲಾಗಿದೆ. ಬ್ಲೂಟೂಥ್ ಕನೆಕ್ಟಿವಿಟ್​ ಅವಕಾಶವನ್ನು ನೀಡಲಾಗಿದ್ದು, ಕಾಲ್​ ಮತ್ತು ಎಸ್​ಎಮ್​ಎಸ್​ ಅಲರ್ಟ್​ ಕೂಡ ಪಡೆಬಹುದು. ಅದೇ ರೀತಿ ಯುಎಸ್​ಬಿ ಮೊಬೈಲ್​ ಚಾರ್ಜಿಂಗ್​ ಫೆಸಿಲಿಟಿಯನ್ನೂ ನೀಡಿದೆ. ಅದೇ ರೀತಿಯ ಸುರಕ್ಷತೆಯ ಫೀಚರ್ ಆಗಿರುವ ಸೈಡ್​ ಸ್ಟಾಂಡ್​ ಕಟ್​ಆಫ್​ ಫೀಚರ್ ಕೊಡಲಾಗಿದೆ.

ಎಂಜಿನ್​ ಸಾಮರ್ಥ್ಯ ಏನು?

ಹೊಸ ಸೂಪರ್ ಸ್ಪ್ಲೆಂಡರ್​ XTEC ಬೈಕ್​ನಲ್ಲಿ 125 ಸಿಸಿಯ ಎಂಜಿನ್​ ಬಿಎಸ್​6 ಎಂಜಿನ್ ಇದ್ದು, ಲೀಟರ್​ ಪೆಟ್ರೋಲ್​ಗೆ 68 ಕಿಲೋಮೀಟರ್ ಮೈಲೇಜ್ ನೀಡಲಿದೆ. 7500 ಆರ್​ಪಿಎಮ್​ನಲ್ಲಿ 10,7 ಬಿಎಚ್​ಪಿ ಪವರ್​ ಹಾಗೂ 6 ಸಾವಿರ ಆರ್​ಪಿಎಮ್​​ನಲ್ಲಿ 10.6 ಎನ್ಎಮ್​ ಟಾರ್ಕ್​ ಬಿಡುಗಡೆ ಮಾಡುತ್ತದೆ. ಇದರಲ್ಲಿ i3s ಸ್ಟಾರ್ಟ್​ ಆ್ಯಂಡ್ ಸ್ಟಾಫ್​ ಫೀಚರ್​ ಕೂಡ ಇದೆ.

ಇದನ್ನೂ ಓದಿ : Philips Smart | ಭಾರತದಲ್ಲಿ ಫಿಲಿಪ್ಸ್ ಸ್ಮಾರ್ಟ್‌ ಎಲ್‌ಇಡಿ ಸ್ಕ್ವೈರ್, ಹೀರೋ ಲ್ಯಾಂಪ್ ಲಾಂಚ್

ಸೂಪರ್ ಸ್ಪ್ಲೆಂಡರ್​ XTEC ಬೈಕ್​ ಬಿಡುಗಡೆಯ ಕುರಿತು ಮಾತನಾಡಿದ ಹೀರೋ ಮೋಟೋಕಾರ್ಪ್​ನ ಚೀಫ್​ ಗ್ರೋಥ್​ ಆಫೀಸರ್​ ರಣ್​ವಿಜಿತ್​ ಸಿಂಗ್​, ಸೂಪರ್ ಸ್ಪ್ಲೆಂಡರ್​ XTEC 125 ಸಿಸಿ ಬೈಕ್​ಗಳ ವರ್ಗದಲ್ಲಿ ಅಪ್​ಡೇಟ್​ ಆಗಿದೆ. ಈ ಬೈಕ್ ಗ್ರಾಹಕರಿಗೆ ಉತ್ತಮ ಪ್ರತಿಕ್ರಿಯೆ ಪಡೆಯುವುದರಲ್ಲಿ ಯಾವುದೇ ಅನುಮಾನ ಇಲ್ಲ ಎಂದು ಹೇಳಿದರು.

Exit mobile version