ಬೆಂಗಳೂರು : ಗಲ್ಲಿ ಕ್ರಿಕೆಟ್ ಅಡುವ ವೇಳೆ ಡಬಲ್ ಪಿಚ್ ಕ್ಯಾಚ್ ಹಿಡಿದರೆ ಔಟ್, ಕಾಂಪೌಂಡ್ ದಾಟಿದರೂ ಔಟ್, ಮನೆಯೊಳಗೆ ಹೋದರೆ ಸಿಕ್ಸರ್ ಎಂಬ ನಾನಾ ನಿಯಮಗಳು ಇರುತ್ತವೆ. ಆದರೆ, ವೃತ್ತಿಪರ ಕ್ರಿಕೆಟ್ನಲ್ಲೂ ಈ ರೀತಿ ನಿಯಮಗಳು ಇರುವುದು ಸಾಧ್ಯವೇ. ಖಂಡಿತಾ ಸಾಧ್ಯ. ಬಿಗ್ ಬ್ಯಾಶ್ ಲೀಗ್ನಲ್ಲಿ ಇಂಥದ್ದೊಂದು ನಿಯಮ ಜಾರಿಯಲ್ಲಿದೆ. ಇಲ್ಲೇನಾದರೂ ಬ್ಯಾಟ್ಸ್ಮನ್ ಹೊಡೆದ ಚೆಂಡು ಸ್ಟೇಡಿಯಮ್ನ ಚಾವಣಿಗೆ ಬಡಿದರೆ ಅದು ಸಿಕ್ಸರ್.
ಅಂದ ಹಾಗೆ ಇದು ಪ್ರೇಕ್ಷರ ಗ್ಯಾಲರಿಯ ಚಾವಣಿಯಲ್ಲ.ಬದಲಾಗಿ ಸ್ಟೇಡಿಯಮ್ನ ಚಾವಣಿ. ಆಸ್ಟ್ರೇಲಿಯಾದಲ್ಲಿ ಬಿಗ್ಬ್ಯಾಶ್ ಕ್ರಿಕೆಟ್ ಲೀಗ್ ಚಾಲನೆಯಲ್ಲಿದ್ದು ಒಟ್ಟು 8 ತಂಡಗಳು ಪ್ರಶಸ್ತಿಗಾಗಿ ಸೆಣಸಾಡುತ್ತಿವೆ. ಹವಾಮಾನ ವೈಪರೀತ್ಯದಿಂದ ಪಂದ್ಯಗಳಿಗೆ ಅಡಚಣೆಯಾಗುತ್ತದೆ ಎಂಬ ಕಾರಣಕ್ಕೆ ಟೂರ್ನಿಯ ಹಣಾಹಣಿಗಳನ್ನು ಮುಚ್ಚಿದ ಕ್ರೀಡಾಂಗಣದಲ್ಲಿ ನಡೆಸಲಾಗುತ್ತದೆ. ಅಂತೆಯೇ ಈ ಪಂದ್ಯದಲ್ಲಿ ಮೆಲ್ಬೋರ್ನ್ ಸ್ಟಾರ್ಸ್ ಹಾಗೂ ಮೆಲ್ಬೋರ್ನ್ ರೆನೆಗೇಡ್ ತಂಡಗಳ ನಡುವಿನ ಪಂದ್ಯದ ವೇಳೆ ಬ್ಯಾಟರ್ ಬಾರಿಸಿದ ಚೆಂಡು ನೇರವಾಗಿ ಚಾವಣಿಗೆ ಬಡಿದಿತ್ತು. ಅದನ್ನು ಅಂಪೈರ್ ಸಿಕ್ಸರ್ ಎಂದು ಘೋಷಿಸಿದ್ದಾರೆ.
ಮಳೆ ಹಾಗೂ ಇನ್ನಿತರ ವೈಪರೀತ್ಯದಿಂದ ಪಾರಾಗಲು ಕ್ರಿಕೆಟ್ ಆಸ್ಟ್ರೇಲಿಯಾ ಚಾವಣಿ ಇರುವ ಸ್ಟೇಡಿಯಮ್ಗಳಲ್ಲಿ ಪಂದ್ಯ ನಡೆಸುತ್ತಿದೆ. ಹೀಗಾಗಿ ಬ್ಯಾಟ್ಸ್ಮನ್ಗಳು ಸಿಕ್ಸರ್ ಬಾರಿಸಲು ಯತ್ನಿಸಿದರೆ ಚೆಂಡು ಚಾವಣಿಗೆ ಬಡಿಯುತ್ತದೆ. ಅಂಥ ಸಂದರ್ಭದಲ್ಲಿ ಸಿಕ್ಸರ್ ನೀಡಲು ಆಯೋಜಕರು ತೀರ್ಮಾನಿಸಿದ್ದಾರೆ. ಇದರಿಂದ ಗೊಂದಲ ತಪ್ಪುತ್ತದೆ ಹಾಗೂ ಸಮಯದ ಉಳಿತಾಯ ಎನ್ನಲಾಗಿದೆ.
ಇದನ್ನೂ ಓದಿ | Lalit Modi | ಐಪಿಎಲ್ ಮಾಜಿ ಮುಖ್ಯಸ್ಥ ಲಲಿತ್ ಮೋದಿಗೆ ತೀವ್ರ ಅನಾರೋಗ್ಯ; ಲಂಡನ್ನಲ್ಲಿ ಚಿಕಿತ್ಸೆ