ನವದೆಹಲಿ: ಭಾರತ ಪುರುಷರ ಹಾಕಿ ತಂಡದ ಮಿಡ್‌ಫೀಲ್ಡರ್ ಹಾರ್ದಿಕ್ ಸಿಂಗ್(Hardik Singh) ಮತ್ತು ಮಹಿಳಾ ಹಾಕಿ ತಂಡದ ಗೋಲ್‌ಕೀಪರ್ ಸವಿತಾ ಪುನಿಯಾ(Savita Punia) ಅವರಿಗೆ 2022ನೇ ಸಾಲಿನ “ವರ್ಷದ ಹಾಕಿ ಆಟಗಾರ” ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಈ ಪ್ರಶಸ್ತಿ ರೇಸ್ನಲ್ಲಿ ಮನ್‌ಪ್ರೀತ್ ಸಿಂಗ್ ಮತ್ತು ಹರ್ಮನ್‌ಪ್ರೀತ್ ಸಿಂಗ್ ಕೂಡ ಇದ್ದರು. ಆದರೆ ಅವರನ್ನು ಕಿರಿಯ ಆಟಗಾರ ಹಾರ್ದಿಕ್ ಸಿಂಗ್ ಹಿಂದಿಕ್ಕುವಲ್ಲಿ ಯಶಸ್ಸು ಸಾಧಿಸಿದರು. ಎಫ್‌ಐಎಚ್ ಮಹಿಳಾ ನೇಶನ್ಸ್ ಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸದ ಆಧಾರದಲ್ಲಿ ಸವಿತಾ ಪುನಿಯಾ ಅವರಿಗೂ ಈ ಪ್ರಶಸ್ತಿ ಲಭಿಸಿದೆ. ಇಬ್ಬರೂ ತಲಾ 25 ಲಕ್ಷ ರೂ. ಹಾಗೂ ಟ್ರೋಫಿ ಗೆದ್ದಿದ್ದಾರೆ.
ಇದನ್ನೂ ಓದಿ Hockey India: ಪುರುಷರ ಹಾಕಿ ತಂಡಕ್ಕೆ ಕ್ರೇಗ್ ಫುಲ್ಟನ್ ನೂತನ ಕೋಚ್
ಹರ್ಮನ್‌ಪ್ರೀತ್ ಸಿಂಗ್ ಅವರು ಅತ್ಯುತ್ತಮ ಡಿಫೆಂಡರ್ ಪ್ರಶಸ್ತಿ, ಕೃಷ್ಣ ಬಿ. ಪಾಠಕ್ ಅತ್ಯುತ್ತಮ ಗೋಲ್‌ಕೀಪರ್, ಸುಶೀಲಾ ಚಾನು ಅತ್ಯುತ್ತಮ ಮಿಡ್‌ಫೀಲ್ಡರ್, ವಂದನಾ ಕಟಾರಿಯಾ ಅತ್ಯುತ್ತಮ ಫಾರ್ವರ್ಡ್ ಆಟಗಾರ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು. ಪ್ರತಿಷ್ಠಿತ ಹಾಕಿ ಇಂಡಿಯಾ ಮೇಜರ್ ಧ್ಯಾನ್‌ಚಂದ್ ಜೀವಮಾನದ ಸಾಧನೆ ಪ್ರಶಸ್ತಿ ಗುರುಬಕ್ಷ್ ಸಿಂಗ್ ಅವರಿಗೆ ನೀಡಿ ಗೌರವಿಸಲಾಯಿತು.