Site icon Vistara News

Hockey India: ಆಸೀಸ್​ ವಿರುದ್ಧದ ಹಾಕಿ ಸರಣಿ; ಭಾರತ ತಂಡಕ್ಕೆ ಸವಿತಾ ಪೂನಿಯಾ ನಾಯಕಿ

savita punia

ನವದೆಹಲಿ: ಆಸ್ಟ್ರೇಲಿಯಾ ವಿರುದ್ಧದ 3 ಪಂದ್ಯ​ಗಳ ಹಾಕಿ ಸರ​ಣಿಗೆ 20 ಸದಸ್ಯರ ಭಾರತದ ಮಹಿಳಾ ತಂಡ ಪ್ರಕಟಗೊಂಡಿದೆ. ಅನುಭವಿ ಗೋಲ್​ ಕೀಪರ್​ ಸವಿತಾ ಪೂನಿಯಾ ಅವರು ನಾಯ​ಕಿ​ಯಾಗಿ ತಂಡಕ್ಕೆ ನೇಮ​ಕ​ಗೊಂಡಿ​ದ್ದಾರೆ. ಸವಿತಾ ಅವರು ಈಗಾಗಲೇ ಹಲವು ಮಹತ್ವದ ಟೂರ್ನಿಯಲ್ಲಿ ತಂಡವನ್ನು ಮುನ್ನಡೆಸಿ ಯಶಸ್ಸು ಸಾಧಿಸಿದ್ದಾರೆ. ಇದೀಗ ಈ ಸರಣಿಯಲ್ಲಿಯೂ ಅವರು ಭಾರತಕ್ಕೆ ಗೆಲುವು ತಂದುಕೊಡುವ ನಿರೀಕ್ಷೆಯಲ್ಲಿದ್ದಾರೆ.

ಪ್ರತಿಷ್ಠಿತ ಏಷ್ಯನ್‌ ಗೇಮ್ಸ್‌ನ ಸಿದ್ಧ​ತೆ​ಗಾಗಿ ಭಾರತಕ್ಕೆ ಈ ಸರಣಿ ಮಹತ್ವದ್ದಾಗಿದೆ. ಉಭಯ ತಂಡಗಳ ಈ ಸರಣಿ ಮೇ 18, 20 ಹಾಗೂ 21ಕ್ಕೆ ನಡೆಯಲಿದೆ. ಇದರ ಜತೆಗೆ ಆಸ್ಟ್ರೇಲಿಯಾ ‘ಎ’ ತಂಡದ ಜತೆಗೆ 2 ಅಭ್ಯಾಸ ಪಂದ್ಯವನ್ನೂ ಭಾರತ ತಂಡ ಆಡಲಿಳಿದೆ. ಸರಣಿಯ ಮೂರೂ ಪಂದ್ಯಗಳನ್ನು ಅಡಿಲೇಡ್‌ನ‌ಲ್ಲಿ ಆಡಲಾಗುವುದು.

ರಾಣಿ ರಾಮ್​ಪಾಲ್​ ಅವರು ಇನ್ನೂ ಕೂಡ ಗಾಯದಿಂದ ಸಂಪೂರ್ಣವಾಗಿ ಚೇತರಿಕೆ ಕಾಣದ ಹಿನ್ನಡೆ ಅವರು ಈ ಸರಣಿಯಿಂದಲೂ ಹೊರಗುಳಿದಿದ್ದಾರೆ. ಟೊಕಿಯೊ ಒಲಿಂಪಿಕ್ಸ್​ ಬಳಿಕ ರಾಣಿ ರಾಮ್​ಪಾಲ್​ ಭಾರತ ತಂಡದ ಪರ ಆಡಿಲ್ಲ. ಅವರ ಅನುಪಸ್ಥಿತಿಯಲ್ಲಿ ಈ ವರೆಗೆ ಸವಿತಾ ಅವರೇ ತಂಡವನ್ನು ಮುನ್ನಡೆಸುತ್ತಿದ್ದಾರೆ. ಸವಿತಾ ಇತ್ತೀಚೆಗಷ್ಟೇ 2022ನೇ ಸಾಲಿನ “ವರ್ಷದ ಆಟಗಾರ್ತಿ” ಗೌರವಕ್ಕೆ ಭಾಜನರಾಗಿದ್ದರು. ಹಾಗೂ ವೈವಾಹಿಕ ಜೀವನಕ್ಕೂ ಕಾಲಿರಿಸಿದ್ದರು.

ಇದನ್ನೂ ಓದಿ Hockey India: ಹಾಕಿ ಇಂಡಿಯಾಗೆ ಅತ್ಯುತ್ತಮ ಸಂಘಟಕ ರಾಷ್ಟ್ರ ಪ್ರಶಸ್ತಿ

ಭಾರತ ತಂಡ

ಗೋಲ್‌ ಕೀಪರ್: ಸವಿತಾ ಪೂನಿಯ (ನಾಯಕಿ), ಬಿಛೂ ದೇವಿ ಖಾರೀಬಮ್‌. ಡಿಫೆಂಡರ್: ದೀಪ್‌ ಗ್ರೇಸ್‌ ಎಕ್ಕಾ (ಉಪನಾಯಕಿ), ನಿಕ್ಕಿ ಪ್ರಧಾನ್‌, ಇಶಿಕಾ ಚೌಧರಿ, ಉದಿತಾ, ಗುರ್ಜಿತ್‌ ಕೌರ್‌. ಮಿಡ್‌ ಫೀಲ್ಡರ್: ನಿಶಾ, ನವಜೋತ್‌ ಕೌರ್‌, ಮೋನಿಕಾ, ಸಲೀಮಾ ಟೇಟೆ, ನೇಹಾ, ನವನೀತ್‌ ಕೌರ್‌, ಸೋನಿಕಾ, ಜ್ಯೋತಿ, ಬಲಜೀತ್‌ ಕೌರ್‌.

Exit mobile version