Site icon Vistara News

ಎಫ್‌ಐಎಚ್ ಪ್ರೊ ಲೀಗ್ ಟೂರ್ನಿ: ಭಾರತ ತಂಡಕ್ಕೆ ಹರ್ಮನ್‌ಪ್ರೀತ್‌ ಸಿಂಗ್‌ ಸಾರಥ್ಯ

Indian men’s hockey team

ನವದೆಹಲಿ: ಫೆಬ್ರವರಿ 10ರಿಂದ ಆರಂಭವಾಗುವ ಎಫ್‌ಐಎಚ್ ಪ್ರೊ ಲೀಗ್ ಹಾಕಿ(FIH Pro League )ಟೂರ್ನಿಗೆ ಹಾಕಿ ಇಂಡಿಯಾ(Hockey India) ಭಾರತದ ಪುರುಷರ ತಂಡವನ್ನು ಪ್ರಕಟಿಸಿದೆ(Indian men’s hockey team). ಅನುಭವಿ ಡಿಫೆಂಡರ್‌ ಹರ್ಮನ್‌ಪ್ರೀತ್‌ ಸಿಂಗ್‌(Harmanpreet Singh) ಅವರು ತಂಡವನ್ನು ಮುನ್ನಡೆಸಲಿದ್ದಾರೆ. ಮಿಡ್‌ಫೀಲ್ಡರ್ ಹಾರ್ದಿಕ್ ಸಿಂಗ್(Hardik Singh ) ತಂಡದ ಉಪನಾಯಕರಾಗಿದ್ದಾರೆ. ಇದೇ ವರ್ಷ ನಡೆಯುವ ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿರುವ ಭಾರತ ತಂಡಕ್ಕೆ ಸಿದ್ಧತೆ ನಡೆಸಲು ಈ ಟೂರ್ನಿ ಉತ್ತಮ ವೇದಿಕೆಯಾಗಿದೆ.

ಕಳೆದ ಟೋಕಿಯೊ ಒಲಿಂಪಿಕ್ಸ್​ನಲ್ಲಿ ಕಂಚಿನ ಪದಕ ಗೆದ್ದ ಭಾರತೀಯ ಪುರುಷರ ಹಾಕಿ ತಂಡ ಈ ಬಾರಿ ಚಿನ್ನ ಗೆಲ್ಲುವ ವಿಶ್ವಾಸದಲ್ಲಿದೆ. ಇದಕ್ಕಾಗಿ ಎಫ್‌ಐಎಚ್ ಪ್ರೊ ಲೀಗ್ ಟೂರ್ನಿಯನ್ನು ಉತ್ತಮವಾಗಿ ಬಳಸಿಕೊಳ್ಳಬೇಕಿದೆ. ತಂಡದ ಎಲ್ಲ ನೂನ್ಯತೆಗಳನ್ನು ಸರಿಪಡಿಸಲು ಇದೊಂದು ಉತ್ತಮ ಅವಕಾಶವಾಗಿದೆ. ಎರಡು ಲೀಗ್​ನಲ್ಲಿ ನಡೆಯುವ ಟೂರ್ನಿಗೆ 24 ಆಟಗಾರರನ್ನು ಪ್ರಕಟಿಸಲಾಗಿದೆ.

ಮೊದಲ ಲೆಗ್(leg)​​ ಭುವನೇಶ್ವರ ಫೆ.10ರಿಂದ ಫೆ.16ರವರೆಗೆ ಮತ್ತು ಲೆಗ್‌ ಫೆ.19ರಿಂದ 25ರವರೆಗೆ ರೂರ್ಕೆಲಾದಲ್ಲಿ ನಡೆಯಲಿದೆ. ಎರಡೂ ಲೆಗ್​ಗಳಲ್ಲಿ ಭಾರತವು ಐರ್ಲೆಂಡ್, ನೆದರ್ಲೆಂಡ್ಸ್, ಸ್ಪೇನ್ ಮತ್ತು ಆಸ್ಟ್ರೇಲಿಯಾ ವಿರುದ್ಧ ಸೆಣಸಲಿದೆ. ಫೆ.10ರಂದು ಸ್ಪೇನ್‌ ವಿರುದ್ಧ ಆಡುವ ಮೂಲಕ ಭಾರತ ತನ್ನ ಅಭಿಯಾನ ಆರಂಭಿಸಲಿದೆ.

ಇದನ್ನೂ ಓದಿ FIH Hockey Olympic Qualifiers: ಇಂದು ಭಾರತ-ಅಮೆರಿಕ ಮಹಿಳಾ ಹಾಕಿ ಪಂದ್ಯ

ಭಾರತ ಹಾಕಿ ತಂಡ


ಗೋಲ್‌ ಕೀಪರ್ಸ್‌: ಪಿ.ಆರ್.ಶ್ರೀಜೇಶ್, ಕ್ರಿಶನ್ ಬಹದ್ದೂರ್ ಪಾಠಕ್.

ಡಿಫೆಂಡರ್ಸ್‌: ಹರ್ಮನ್‌ಪ್ರೀತ್‌ ಸಿಂಗ್‌ (ನಾಯಕ), ಜರ್ಮನ್‌ಪ್ರೀತ್ ಸಿಂಗ್‌, ಸುಮಿತ್‌, ಜುಗರಾಜ್ ಸಿಂಗ್, ಅಮಿತ್‌ ರೋಹಿದಾಸ್‌, ವರುಣ್ ಕುಮಾರ್, ಸಂಜಯ್‌, ವಿಷ್ಣುಕಾಂತ್ ಸಿಂಗ್.

ಮಿಡ್‌ಫೀಲ್ಡರ್ಸ್‌: ಹಾರ್ದಿಕ್ ಸಿಂಗ್‌ (ಉಪನಾಯಕ), ವಿವೇಕ್ ಸಾಗರ್ ಪ್ರಸಾದ್, ಮನ್‌ಪ್ರೀತ್ ಸಿಂಗ್, ನೀಲಕಂಠ ಶರ್ಮಾ, ಶಂಷೇರ್‌ ಸಿಂಗ್‌, ರಾಜಕುಮಾರ್ ಪಾಲ್, ರವಿಚಂದ್ರ ಸಿಂಗ್ ಮೊಯಿರಂಗ್ಧೆಮ್.

ಫಾರ್ವರ್ಡ್ಸ್‌: ಲಲಿತ್‌ ಕುಮಾರ್ ಉಪಾಧ್ಯಾಯ, ಮನದೀಪ್ ಸಿಂಗ್, ಗುರ್ಜಂತ್‌ ಸಿಂಗ್‌, ಸುಖಜೀತ್ ಸಿಂಗ್, ಅಭಿಷೇಕ್, ಅಕ್ಷದೀಪ್ ಸಿಂಗ್, ಅರಿಜಿತ್ ಸಿಂಗ್ ಹುಂಡಲ್.

Exit mobile version