ಭುವನೇಶ್ವರ: 15ನೇ ಆತೃತ್ತಿಯ ಹಾಕಿ ವಿಶ್ವಕಪ್ ಟೂರ್ನಿಯ(Hockey World Cup) ಪಂದ್ಯಗಳು ಈಗಾಗಲೇ ಆರಂಭಗೊಂಡಿವೆ. ಈ ನಡೆವೆ ಹಾಕಿ ವಿಶ್ವಕಪ್ ಟೂರ್ನಿಯ ವರದಿ ಮಾಡಲು ಬಂದ ದಕ್ಷಿಣ ಕೊರಿಯಾದ ಫೋಟೊ ಜರ್ನಲಿಸ್ಟ್ ಚರಂಡಿಗೆ ಬಿದ್ದು ಗಾಯಗೊಂಡ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಹಾಕಿ ಟೂರ್ನಿಗೆ ಬಾರಾಬತಿಯ ಸುಂದರ ಕ್ರೀಡಾಂಗಣದಲ್ಲಿ ಬುಧವಾರ ಅದ್ದೂರಿ ಚಾಲನೆ ನೀಡಲಾಗಿತ್ತು. ಈ ಉದ್ಘಾಟನಾ ಸಮಾರಂಭವನ್ನು ದೇಶ, ವಿದೇಶಗಳಿಂದ ಸಾವಿರಾರು ಹಾಕಿ ಪ್ರೇಮಿಗಳು ಕಣ್ತುಂಬಿಕೊಂಡಿದ್ದರು. ಇದೇ ವೇಳೆ ದಕ್ಷಿಣ ಕೊರಿಯಾದ ಫೋಟೊ ಜರ್ನಲಿಸ್ಟ್ ಚರಂಡಿಗೆ ಬಿದ್ದಿರುವುದಾಗಿ ವರದಿಯಾಗಿದೆ.
ಒಡಿಶಾ ಸರಕಾರ ಕೋಟ್ಯಂತರ ರೂ.ಹಣವನ್ನು ವ್ಯಯಿಸಿ ಸಕಲ ಸಿದ್ಧತೆ ನಡೆಸಿದ್ದರೂ ಬುಧವಾರ ನಡೆದ ಈ ಘಟನೆ ಇದೀಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದೆ. ಕೆಲ ವರದಿಗಳ ಈ ಫೋಟೋ ಜರ್ನಲಿಸ್ಟ್, ದುಮ್ಡುಮಾ ಪ್ರದೇಶದ ರಸ್ತೆ ಬದಿಯ ಸಣ್ಣ ಅಂಗಡಿಯಲ್ಲಿ ಚಹಾ ಸೇವಿಸುತ್ತಿದ್ದಾಗ ತೆರೆದ ಚರಂಡಿಗೆ ಬಿದ್ದಿದ್ದಾರೆ ಎಂದು ಹೇಳಲಾಗಿದೆ. ಗಾಯಗೊಂಡ ಅವರನ್ನು ತಕ್ಷಣ ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸಲಾಗಿದ್ದು, ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ | Hockey World Cup | ಹಾಕಿ ವಿಶ್ವಕಪ್‌ನಲ್ಲಿ ಭಾರತ ಶುಭಾರಂಭ; ಸ್ಪೇನ್ ವಿರುದ್ಧ 2-0 ಗೆಲುವು