ಭುವನೇಶ್ವರ: ಹಾಕಿ ವಿಶ್ವಕಪ್ನ(Hockey World Cup) ಗುರುವಾರದ ಪಂದ್ಯದಲ್ಲಿ ಆತಿಥೇಯ ಭಾರತ ತಂಡ ವೇಲ್ಸ್ ವಿರುದ್ಧ ಸೆಣಸಾಡಲಿದೆ. ಅಂಕ ಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಲು ಇಲ್ಲಿ ಭಾರತಕ್ಕೆ ದೊಡ್ಡ ಅಂತರದ ಗೆಲುವು ಬೇಕಿದೆ.
ಡಿ ಗುಂಪಿನಲ್ಲಿ ಭಾರತ ತಂಡ ಆಡಿದ ಎರಡು ಪಂದ್ಯಗಳಲ್ಲಿ ಒಂದು ಗೆಲುವು ಮತ್ತೊಂದು ಡ್ರಾ ಸಾಧಿಸಿ 4 ಅಂಕ ಕಲೆಹಾಕಿದೆ. ಇದೇ ಗುಂಪಿನಲ್ಲಿರುವ ಇಂಗ್ಲೆಂಡ್ ಕೂಡ ನಾಲ್ಕು ಅಂಕ ಗಳಿಸಿದೆ. ಆದರೆ ಗೋಲು ವ್ಯತ್ಯಾಸದಲ್ಲಿ ಇಂಗ್ಲೆಂಡ್ ತಂಡ ಭಾರತಕ್ಕಿಂತ ಮುಂದಿದೆ. ಆದ್ದರಿಂದ ನೇರ ಕ್ವಾರ್ಟರ್ ಫೈನಲ್ ಪ್ರವೇಶ ಪಡೆಯಲು ಭಾರತದ ಪಾಲಿಗೆ ಇದು ಮಹತ್ವದ ಪಂದ್ಯವಾಗಿದ್ದು, ದೊಡ್ಡ ಅಂತರದ ಗೆಲುವಿನ ಅಗತ್ಯವಿದೆ.
ಭಾರತದ ಪಂದ್ಯಕ್ಕೂ ಮುನ್ನ ಇಂಗ್ಲೆಂಡ್ ಹಾಗೂ ಸ್ಪೇನ್ ಮುಖಾಮುಖಿಯಾಗಲಿ. ಈ ಪಂದ್ಯದಲ್ಲಿ ಇಂಗ್ಲೆಂಡ್ ಸೋಲು ಅಥವಾ ಡ್ರಾ ಸಾಧಿಸಿದರೆ, ಹರ್ಮನ್‌ಪ್ರೀತ್ ಸಿಂಗ್ ವೇಲ್ಸ್ ವಿರುದ್ಧ ಗೆದ್ದರೆ ನೇರವಾಗಿ ಕ್ವಾರ್ಟರ್ ಫೈನಲ್ಗೇರಬಹುದು. ಒಂದೊಮ್ಮೆ ಇಂಗ್ಲೆಂಡ್ ತಂಡವು ಸ್ಪೇನ್ ವಿರುದ್ಧ ಗೆದ್ದರೆ, ಆಗ ಭಾರತ ಹೊಡ್ಡ ಅಂತರದಿಂದ ವೇಲ್ಸ್‌ಗೆ ಸೋಲುಣಿಸಬೇಕು.
ವೇಲ್ಸ್ ತಂಡ ಈಗಾಗಲೇ ಆಡಿದ ಎರಡು ಪಂದ್ಯಗಳಲ್ಲಿ ಸೋಲು ಕಂಡು ಕೂಟದಿಂದ ಹೊರಬಿದ್ದಿದೆ. ಹೀಗಾಗಿ ವೇಲ್ಸ್‌ಗೆ ಇದೊಂದು ಔಪಚಾರಿಕ ಪಂದ್ಯದಂತಿದೆ. ಭಾರತ ವೇಲ್ಸ್ ವಿರುದ್ಧ ಸೋತರು ಕೂಡ ಟೂರ್ನಿಯಿಂದ ಹೊರಬೀಳುವುದಿಲ್ಲ. ಗುಂಪಿನಲ್ಲಿ ಎರಡನೇ ಸ್ಥಾನ ಪಡೆದು ಕ್ರಾಸ್‌ಓವರ್ ಪಂದ್ಯದಲ್ಲಿ ಆಡಲಿದೆ. ಸಿ ಗುಂಪಿನಲ್ಲಿ ಮೂರನೇ ಸ್ಥಾನ ಪಡೆದ ತಂಡವನ್ನು ಎದುರಿಸಲಿದೆ. ಒಟ್ಟಾರೆ ವೇಲ್ಸ್ ವಿರುದ್ಧ ಅಮೋಘ ಪ್ರದರ್ಶನ ನೀಡುವುದು ಭಾರತದ ಪ್ರಮುಖ ಗುರಿಯಾಗಿದೆ.
ಸ್ಪೇನ್ ಎದುರಿನ ಪಂದ್ಯದಲ್ಲಿ ಇಂಗ್ಲೆಂಡ್ ಸೋಲು ಅಥವಾ ಡ್ರಾ ಸಾಧಿಸಿದರೆ, ಭಾರತ ತಂಡದವರಿಗೆ ಯಾವುದೇ ಚಿಂತೆ ಇಲ್ಲ. ಆಗ ಭಾರತ ವೇಲ್ಸ್ ತಂಡವನ್ನು ಸೋಲಿಸಿದರೆ ಸಾಕು. ಒಂದು ವೇಳೆ ಇಂಗ್ಲೆಂಡ್ ತಂಡವು ಸ್ಪೇನ್ ವಿರುದ್ಧ ಗೆದ್ದರೆ, ಭಾರತ ಕನಿಷ್ಠ ಐದು ಗೋಲುಗಳಿಂದ ವೇಲ್ಸ್‌ಗೆ ಸೋಲುಣಿಸಬೇಕು. ವೇಲ್ಸ್ ಅನ್ನು ಮಣಿಸಿದರೆ ಭಾರತ ಟೂರ್ನಿಯಿಂದ ಹೊರಬೀಳುವುದಿಲ್ಲ. ಗುಂಪಿನಲ್ಲಿ ಎರಡನೇ ಸ್ಥಾನ ಪಡೆದು ಕ್ರಾಸ್‌ಓವರ್ ಪಂದ್ಯದಲ್ಲಿ ಆಡಲಿದೆ. ಸಿ ಗುಂಪಿನಲ್ಲಿ ಮೂರನೇ ಸ್ಥಾನ ಪಡೆದ ತಂಡವನ್ನು ಎದುರಿಸಲಿದೆ.
ಭಾರತಕ್ಕೆ ಗಾಯದ ಚಿಂತೆ
ಭಾನುವಾರ ನಡೆದ ಡಿ ಗುಂಪಿನ ಇಂಗ್ಲೆಂಡ್ ವಿರುದ್ಧದ ಪಂದ್ಯದ ಕೊನೇ ನಿಮಿಷದ ಆಟದ ವೇಳೆ ಸ್ಟಾರ್ ಆಟಗಾರ ಹಾರ್ದಿಕ್ ಸಿಂಗ್ ಸ್ನಾಯು ಸೆಳೆತಕ್ಕೆ ಒಳಗಾಗಿದ್ದರು. ಹೀಗಾಗಿ ಅವರು ಈ ಪಂದ್ಯದಲ್ಲಿ ಆಡುವುದು ಅನುಮಾನ ಎನ್ನಲಾಗಿದೆ. ಇವರ ಬದಲು ಮೀಸಲು ಮಿಡ್ಫೀಲ್ಡರ್ ರಾಜ್ಕುಮಾರ್ ಪಾಲ್ ಈ ಪಂದ್ಯದಲ್ಲಿ ಆಡುವ ಸಾಧ್ಯತೆ ಇದೆ. ಜತೆಗೆ ಭಾರತ ಪೆನಾಲ್ಟಿ ಕಾರ್ನರ್‌ಗಳನ್ನು ಗೋಲಾಗಿ ಪರಿವರ್ತಿಸುವಲ್ಲಿ ಯಶಸ್ಸು ಕಾಣಬೇಕಿದೆ.
ಇದನ್ನೂ ಓದಿ | Hockey World Cup | ಜಗತ್ತಿನ ಅತಿದೊಡ್ಡ ಮರಳಿನ ಹಾಕಿ ಸ್ಟಿಕ್ಗೆ ವರ್ಲ್ಡ್ ರೆಕಾರ್ಡ್ಸ್ ಇಂಡಿಯಾ ಗೌರವ!