Site icon Vistara News

Hockey World Cup: ಹಾಕಿ ವಿಶ್ವ ಕಪ್​; ಜಪಾನ್​ ವಿರುದ್ಧ ಭಾರತಕ್ಕೆ 8-0 ಗೋಲ್​ ಅಂತರದ ಗೆಲುವು

Hockey World Cup india

ಭುವನೇಶ್ವರ: ಯುದ್ಧ ಮುಗಿದ ಮೇಲೆ ಕೋಟೆ ಬಾಗಿಲು ಹಾಕಿದ ಸ್ಥಿತಿ ಭಾರತದ್ದಾಗಿದೆ. ಹಾಕಿ ವಿಶ್ವ ಕಪ್​ನ(Hockey World Cup) ಮಹತ್ವದ ಕ್ರಾಸ್‌ ಓವರ್‌ ಪಂದ್ಯದಲ್ಲಿ ಸೋಲು ಕಂಡು ಪ್ರಶಸ್ತಿ ಸುತ್ತಿನಿಂದ ಹೊರ ಬಿದ್ದ ಆತಿಥೇಯ ಭಾರತ ಗುರುವಾರ ನಡೆದ 9-16ನೇ ಸ್ಥಾನದ ಪಂದ್ಯದಲ್ಲಿ ಜಪಾನ್‌ ವಿರುದ್ಧ 8-0 ಗೋಲ್​ಗಳ ಭರ್ಜರಿ ಗೆಲುವು ಸಾಧಿಸಿದೆ.

ಗುರುವಾರ ರಾತ್ರಿ 9 ರಿಂದ 16 ಸ್ಥಾನಕ್ಕಾಗಿ ನಡೆದ ಈ ಮುಖಾಮುಖಿ ಭಾರಿ ಪೈಪೋಟಿಗೆ ಸಾಕ್ಷಿಯಾಯಿತು. ಮೊದಲ ಎರಡು ಕ್ವಾರ್ಟರ್​ಗಳಲ್ಲಿ ಉಭಯ ತಂಡಗಳು ಗೋಲು ದಾಖಲಿಸಲು ಸಾಧ್ಯವಾಗಲಿಲ್ಲ. ಆದರೆ ಮೂರನೇ ಕ್ವಾರ್ಟರ್​ನಲ್ಲಿ ಸಿಕ್ಕ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಗೋಲಾಗಿಸುವಲ್ಲಿ ಮನ್​ದೀಪ್​ ಸಿಂಗ್ ಯಶಸ್ವಿಯಾದರು. ಈ ಮೂಲಕ ಮೊದಲ ಮುನ್ನಡೆ ತಂಡುಕೊಟ್ಟರು. ಇದರ ಬೆನ್ನಲ್ಲೇ ಅಭಿಷೇಕ್ ಮತ್ತೊಂದು ಗೋಲು ಬಾರಿಸಿದರು.

ಇದನ್ನೂ ಓದಿ Hockey World Cup: ಹಾಕಿ ವಿಶ್ವ ಕಪ್​ ಸೆಮಿಫೈನಲ್​ ಪ್ರವೇಶಿಸಿದ ಜರ್ಮನಿ, ನೆದರ್ಲೆಂಡ್ಸ್‌

ಆಕ್ರಮಣಕಾರಿ ಆಟವಾಡಿದ ಭಾರತ

2 ಗೋಲ್ ದಾಖಲಿಸಿ ಆತ್ಮವಿಶ್ವಾಸ ಹೆಚ್ಚಿಸಿಕೊಂಡ ಭಾರತ 3ನೇ ಕ್ವಾರ್ಟರ್​ ಮುಕ್ತಾಯದ ಆಕ್ರಮಣ ಆಟಕ್ಕೆ ಮುಂದಾಯಿತು. ವಿವೇಕ್ ಸಾಗರ್ ಮತ್ತು ಅಭಿಷೇಕ್ ಸತತ ಗೋಲ್​ ಬಾರಿಸಿದರು. ಇದರೊಂದಿಗೆ ಭಾರತ ತಂಡವು 4-0 ಅಂತರದೊಂದಿಗೆ 3ನೇ ಕ್ವಾರ್ಟರ್​ ಮುಕ್ತಾಯಗೊಳಿಸಿತು. 4ನೇ ಕ್ವಾರ್ಟರ್​ನಲ್ಲಿ ಮತ್ತೆ ಆಕ್ರಮಣ ಕಾರಿ ಟಕ್ಕೆ ಮುಂದಾದ ಭಾರತ ಮತ್ತೆ ನಾಲ್ಕು ಗೋಲ್​ ಬಾರಿಸುವ ಮೂಲಕ ಜಪಾನ್ ತಂಡದ ಹುಟ್ಟಡಗಿಸಿದರು. ಅಂತಿಮವಾಗಿ 8-0 ಅಂತರದಿಂದ ಗೆಲುವು ಸಾಧಿಸಿತು.

Exit mobile version