Site icon Vistara News

Hockey World Cup : ಸೋತ ಭಾರತ ವನಿತೆಯರಿಗೆ ಇನ್ನೂ ಇದೆ ಚಾನ್ಸ್

hockey

ನವ ದೆಹಲಿ: ಭಾರತ ಮಹಿಳೆಯರ ಹಾಕಿ ತಂಡ ಗುರುವಾರ ನಡೆದ ಎಫ್‌ಐಎಚ್‌ ಹಾಕಿ (Hockey World Cup) ಗುಂಪು ಹಂತದ ತನ್ನ ಕೊನೇ ಪಂದ್ಯದಲ್ಲಿ ಸೋತಿದೆ. ಆದಾಗ್ಯೂ ಪ್ಲೇಆಫ್‌ ಹಂತಕ್ಕೇರಲು ಇನ್ನೊಂದು ಅವಕಾಶ ಸೃಷ್ಟಿ ಮಾಡಿಕೊಂಡಿದೆ.

ಭಾರತ ವನಿತೆಯರ ಬಳಿಕ ಜಿದ್ದಾಜಿದ್ದಿನಿಂದ ಕೂಡಿದ್ದ ಪಂದ್ಯದಲ್ಲಿ ೩-೪ ಗೋಲ್‌ಗಳಿಂದ ಸೋಲೊಪ್ಪಿಕೊಂಡಿತ್ತು. ಹೀಗಾಗಿ ಬಿ ಗುಂಪಿನಿಂದ ನೇರ ಕ್ವಾರ್ಟರ್‌ ಫೈನಲ್ಸ್‌ಗೆ ಪ್ರವೇಶ ಪಡೆಯಲು ಸಾಧ್ಯವಾಗಲಿಲ್ಲ. ಆದರೆ, ಭಾರತ ತಂಡಕ್ಕೆ ಕ್ರಾಸ್‌ ಓವರ್‌ ರೌಂಡ್‌ನಲ್ಲಿ ಆಡುವ ಅವಕಾಶ ಲಭಿಸಿದೆ.

ಮುಂದಿನ ಭಾನುವಾರ ನಡೆಯಲಿರುವ ಕ್ರಾಸ್‌ ಓವರ್‌ ಪಂದ್ಯದಲ್ಲಿ ಭಾರತ ವನಿತೆಯರ ಬಳಗ ದಕ್ಷಿಣ ಕೊರಿಯಾ ಅಥವಾ ಸ್ಪೇನ್‌ ತಂಡವನ್ನು ಎದುರಿಸಲಿದೆ. ಇಲ್ಲಿ ಗೆದ್ದರೆ ಕ್ವಾರ್ಟರ್‌ ಫೈನಲ್‌ಗೆ ಪ್ರವೇಶ ಪಡೆಯಲು ಸಾಧ್ಯವಿದೆ. ಭಾರತವನ್ನು ಸೋಲಿಸಿದ ನ್ಯೂಜಿಲೆಂಡ್‌ ತಂಡ ಒಟ್ಟಾರೆ ಏಳು ಅಂಕಗಳೊಂದಿಗೆ ಕ್ವಾರ್ಟರ್‌ಫೈನಲ್ಸ್‌ಗೆ ಅವಕಾಶ ಪಡೆದುಕೊಂಡಿದೆ. ಇಂಗ್ಲೆಂಡ್‌ ತಂಡ ನಾಲ್ಕು ಅಂಕಗಳನ್ನು ಸಂಪಾದಿಸಿ ಗುಂಪಿನ ಎರಡನೇ ತಂಡವಾಗಿ ೮ರ ಘಟ್ಟಕ್ಕೆ ಎಂಟ್ರಿ ಪಡೆದುಕೊಂಡಿತು. ಗುಂಪಿನಲ್ಲಿರುವ ಇನ್ನೆರಡು ತಂಡಗಳಾದ ಭಾರತ ಹಾಗೂ ಚೀನಾ ತಲಾ ಎರಡು ಅಂಕಗಳನ್ನು ಗಳಿಸಿತು. ಆದರೆ ಹೆಚ್ಚು ಗೋಲ್‌ಗಳನ್ನು ಬಾರಿಸಿರುವ ಭಾರತ ತಂಡಕ್ಕೆ ಕ್ರಾಸ್‌ ಓವರ್‌ ಅವಕಾಶ ಲಭಿಸಿತು.

ನೆದರ್ಲೆಂಡ್‌, ನ್ಯೂಜಿಲೆಂಡ್‌, ಅರ್ಜೆಂಟೀನಾ ಹಾಗೂ ಆಸ್ಟ್ರೇಲಿಯಾ ನೇರವಾಗಿ ಎಂಟ್ರಿ ಪಡೆದ ತಂಡಗಳು.

ಅವಕಾಶ ಮಿಸ್‌ ಮಾಡಿಕೊಂಡ ಭಾರತ

ಪಂದ್ಯದಲ್ಲಿ ಭಾರತ ವನಿತೆಯರು ಗೆಲ್ಲುವ ಅವಕಾಶವನ್ನೂ ಸಂಪೂರ್ಣವಾಗಿ ಕಳೆದುಕೊಂಡರು. ೬೦ ನಿಮಿಷಗಳ ಅವಧಿಯಲ್ಲಿ ೧೫ ಪೆನಾಲ್ಟಿ ಕಾರ್ನರ್‌ ಅವಕಾಶಗಳನ್ನು ಗಿಟ್ಟಿಸಿಕೊಂಡರೂ ಅದರಲ್ಲಿ ಎರಡು ಗೋಲ್‌ಗಳನ್ನು ಮಾತ್ರ ಗಳಿಸಿದ ಭಾರತ ತಂಡ ಅತ್ಯಂತ ಕಳಪೆ ಪ್ರದರ್ಶನ ನೀಡಿತು.

ವಂದನಾ ಕಟಾರಿಯಾ (೪ನೇ ನಿಮಿಷ), ಲಾಲ್‌ರೆಮ್‌ಸಿಯಾಮಿ (೪೪ನೇ ನಿಮಿಷ), ಗುರ್ಜಿತ್‌ ಕೌರ್‌ (೫೯ನೇ ನಿಮಿಷ) ಮೂರು ಗೋಲ್‌ಗಳನ್ನು ಬಾರಿಸಿದರು. ನ್ಯೂಜಿಲೆಂಡ್‌ ಪರ ಮೇರೀಸ್‌ ಬ್ರೇಸ್‌ (೧೨ ಮತ್ತು ೫೪ನೇ ನಿಮಿಷ), ಟೆಸ್ಸಾ ಜೊಪ್‌ (೨೯ನೇ ನಿಮಿಷ), ಡೇವಿಡ್‌ (೩೨ನೇ ನಿಮಿಷ) ಗೆಲುವಿನ ಗೋಲ್‌ಗಳನ್ನು ಹೊಡೆದರು.

ಈ ಪಂದ್ಯದಲ್ಲಿ ಮಿಡ್‌ಫೀಲ್ಡ್‌ ಸೋನಿಕಾ ೫೦ ಅಂತಾರಾಷ್ಟ್ರೀಯ ಗೋಲ್‌ಗಳನ್ನು ಬಾರಿಸಿದ ಸಾಧನೆ ಮಾಡಿದರು.

ಇನ್ನೂ ಇದೆ: t20 Series : ಹಾರ್ದಿಕ್‌ ಅಬ್ಬರಕ್ಕೆ ಬೆಚ್ಚಿ ಬಿದ್ದ ಆಂಗ್ಲರು ಕಡಿಮೆ ಮೊತಕ್ಕೆ ಆಲ್‌ಔಟ್‌, ಭಾರತಕ್ಕೆ ಭರ್ಜರಿ ಜಯ

Exit mobile version