Site icon Vistara News

Hockey World Cup | ಹಾಕಿ ತಂಡದ ನಾಯಕ ಹರ್ಮನ್‌ಪ್ರೀತ್ ಸಿಂಗ್​ಗೆ ಒತ್ತಡವಿದೆ; ಕೋಚ್‌ ಗ್ರಹಾಂ ರೀಡ್‌!

graham reid

ಭುವನೇಶ್ವರ: ಪುರುಷರ ಹಾಕಿ ವಿಶ್ವಕಪ್(Hockey World Cup)​ ಟೂರ್ನಿಗೆ ಈಗಾಗಲೇ ವರ್ಣರಂಜಿತ ಚಾಲನೆ ಸಿಕ್ಕಿದೆ. ಶುಕ್ರವಾರ ಟೂರ್ನಿಯ ಪಂದ್ಯಗಳು ಆರಂಭವಾಗಲಿದೆ. ಮೊದಲ ದಿನವೇ ಆತಿಥೇಯ ಭಾರತ ತಂಡ ಸ್ಪೇನ್​ ವಿರುದ್ಧ ಅದೃಷ್ಟ ಪರೀಕ್ಷೆಗೆ ಇಳಿಯಲಿದೆ. ಪಂದ್ಯದಕ್ಕೂ ಮುನ್ನ ಭಾರತ ತಂಡದ ನಾಯಕ ಹರ್ಮನ್‌ಪ್ರೀತ್ ಸಿಂಗ್​ ಒತ್ತಡದಲ್ಲಿ ಆಡಬೇಕಿದೆ ಎಂದು ಕೋಚ್​ ಹೇಳಿದ್ದಾರೆ.

“ಪೆನಾಲ್ಟಿ ಕಾರ್ನರ್‌ ಅವಕಾಶದಲ್ಲಿ ಗೋಲಾಗಿ ಪರಿವರ್ತಿಸಲು ನಿಸ್ಸೀಮರಾಗಿರುವ ಹರ್ಮನ್‌ಪ್ರೀತ್ ಸಿಂಗ್ ಮೊದಲ ಪಂದ್ಯದಲ್ಲಿ ಬಹಳಷ್ಟು ಒತ್ತಡದಿಂದ ಆಡಬೇಕಾಗಿದೆ” ಎಂದು ತಂಡದ ಮುಖ್ಯ ಕೋಚ್‌ ಗ್ರಹಾಂ ರೀಡ್‌ ಹೇಳಿದ್ದಾರೆ.

“ಭಾರತ ತಂಡದ ನಾಯಕ ಹರ್ಮನ್‌ಪ್ರೀತ್ ಸಿಂಗ್ ಅವರ ಮೇಲೆ ಈ ಬಾರಿಯ ವಿಶ್ವ ಕಪ್‌ ಹಾಕಿ ಟೂರ್ನಿಯಲ್ಲಿ ಸಹಜವಾಗಿಯೇ ಒತ್ತಡವಿದೆ. ಆದರೆ ಈ ಪ್ರಮುಖ ಆಟಗಾರನ ಮೇಲಿನ ಹೊರೆ ತಗ್ಗಿಸುವ ಯೋಜನೆಗಳನ್ನು ಹಾಕಿಕೊಳ್ಳಲು ರಣತಂತ್ರ ರೂಪಿಸಲಾಗಿದೆ” ಎಂದು ಗ್ರಹಾಂ ರೀಡ್‌ ಹೇಳಿದ್ದಾರೆ.

ಹರ್ಮನ್‌ಪ್ರೀತ್ ಸಿಂಗ್ ಅವರ ಒತ್ತಡದ ಹೊರೆಯನ್ನು ತಂಡದ ಇನ್ನುಳಿದ ಪ್ರಮುಖ ಡ್ರ್ಯಾಗ್‌ಫ್ಲಿಕರ್‌ಗಳಾದ ಉಪನಾಯಕ ಅಮಿತ್‌ ರೋಹಿದಾಸ್‌, ವರುಣ್ ಕುಮಾರ್ ಮತ್ತು ನೀಲಂ ಸಂಜೀಪ್ ಕ್ಸೆಸ್ ಅವರು ಜವಾಬ್ದಾರಿಯನ್ನು ಹಂಚಿಕೊಳ್ಳಬೇಕೆಂಬುದು ಗ್ರಹಾಂ ರೀಡ್‌ ಹೇಳಿದ್ದಾರೆ.

ಆಸ್ಟ್ರೇಲಿಯಾದ ರೀಡ್‌ ಅವರ ಮಾರ್ಗದರ್ಶನದಲ್ಲಿ ಭಾರತ ತಂಡವು ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದುಕೊಂಡಿತ್ತು. ಇದೀಗ ಇವರ ಮಾರ್ಗದರ್ಶನದಲ್ಲಿ ಭಾರತ ವಿಶ್ವಕಪ್​ ಚಾಂಪಿಯನ್​ ಆಗಲಿದೆಯಾ ಎಂಬುವುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ | Hockey World Cup | ಪುರುಷರ ಹಾಕಿ ವಿಶ್ವಕಪ್‌ಗೆ ಅದ್ಧೂರಿ ಚಾಲನೆ; ಮೊದಲ ಪಂದ್ಯದಲ್ಲಿ ಭಾರತಕ್ಕೆ ಸ್ಪೇನ್​ ಎದುರಾಳಿ

Exit mobile version