ಭುವನೇಶ್ವರ: ಭಾರತ ಆತಿಥ್ಯದ ಪುರುಷರ ಹಾಕಿ ವಿಶ್ವಕಪ್(Hockey World Cup) ಟೂರ್ನಿ ಭರ್ಜರಿಯಾಗಿ ಸಾಗುತ್ತಿದೆ. ಈಗಾಗಲೇ ಭಾರತ ತಂಡ ಆಡಿದ ಮೊದಲ ಪಂದ್ಯದಲ್ಲಿ ಗೆಲುವು ದಾಖಲಿಸಿದ್ದು ದ್ವಿತೀಯ ಪಂದ್ಯ ಡ್ರಾಗೊಂಡಿದೆ. ಇದೀಗ ಖ್ಯಾತ ಮರಳು ಕಲಾವಿದ ಸುದರ್ಶನ್ ಪಟ್ನಾಯಕ್ ಅವರು ಸುಮಾರು 5 ಸಾವಿರ ಹಾಕಿ ಚೆಂಡುಗಳನ್ನು ಬಳಸಿ ನಿರ್ಮಿಸಿದ ಮರಳು ಕಲಾಕೃತಿ ವಿಶ್ವದಾಖಲೆಗೆ ಪಾತ್ರವಾಗಿದೆ.
ಮರಳು ಕಲಾವಿದ ಸುದರ್ಶನ್ ಪಟ್ನಾಯಕ್ ಅವರು ಹಾಕಿ ವಿಶ್ವ ಕಪ್ ಉದ್ಘಾಟನ ದಿನಂದು ಕಟಕ್‌ನ ಮಹಾನದಿ ತೀರದಲ್ಲಿ ಜಗತ್ತಿನ ಅತಿದೊಡ್ಡ ಮರಳಿನ ಹಾಕಿ ಸ್ಟಿಕ್ ನಿರ್ಮಿಸಿದ್ದರು. ಇದೀಗ ಅವರ ಈ ಕಲಾಕೃತಿಗೆ ವರ್ಲ್ಡ್ ರೆಕಾರ್ಡ್ಸ್ ಇಂಡಿಯಾದ ಸ್ಥಾಪಕ ಪವನ್ ಸೋಲಂಕಿ, ಇಲಾಖೆ ಮುಖ್ಯಸ್ಥರಾದ ಸುಷ್ಮಾ ನರ್ವೇಕರ್ ಹಾಗೂ ಹಿರಿಯ ತೀರ್ಪುಗಾರರಾದ ಸಂಜಯ್ ನರ್ವೇಕರ್ “ವರ್ಲ್ಡ್ ರೆಕಾರ್ಡ್ಸ್ ಇಂಡಿಯಾ” ಪ್ರಶಸ್ತಿ ಪತ್ರ ನೀಡಿ ಗೌರವಿಸಿದ್ದಾರೆ.
ಪ್ರಶಸ್ತಿ ಬಳಿಕ ಟ್ವಿಟರ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಸುದರ್ಶನ್ ಪಟ್ನಾಯಕ್, ” ನಮ್ಮ ಅತಿದೊಡ್ಡ ಮರಳಿಕ ಹಾಕಿ ಸ್ಟಿಕ್ ಇದೀಗ ವಿಶ್ವದಾಖಲೆಯಾಗಿದೆ. ಈ ಮರಳು ಶಿಲ್ಪವನ್ನು ಹಾಕಿ ವಿಶ್ವಕಪ್ ಟೂರ್ನಿಯ ಉದ್ಘಾಟನಾ ದಿನದಂದು ನಿರ್ಮಿಸಲಾಗಿತ್ತು. ಇದೀಗ ವರ್ಲ್ಡ್ ರೆಕಾರ್ಡ್ ಇಂಡಿಯಾಗೆ ಪಾತ್ರವಾಗಿದ್ದು ತುಂಬಾ ಗೌರವದ ವಿಚಾರವಾಗಿದೆ ಎಂದು ಟ್ವೀಟ್ ಮೂಲಕ ತಿಳಿಸಿದ್ದಾರೆ.
ಸುದರ್ಶನ್ ಪಟ್ನಾಯಕ್ ಅವರು ಒಟ್ಟು 15 ವಿದ್ಯಾರ್ಥಿಗಳ ನೆರವಿನೊಂದಿಗೆ ಜನವರಿ 10ರಂದು ಮರಳಿನಲ್ಲಿ ಅತಿದೊಡ್ಡ ಹಾಕಿ ಸ್ಟಿಕ್ ನಿರ್ಮಿಸಿದ್ದರು. ಈ ಹಾಕಿ ಸ್ಟಿಕ್ ಬರೋಬ್ಬರಿ 105 ಅಡಿ ಉದ್ದವಿದ್ದು, ಈ ಹಾಕಿ ಸ್ಟಿಕ್‌ನಲ್ಲಿ ಒಟ್ಟು 5000 ಹಾಕಿ ಬಾಲ್‌ಗಳನ್ನು ಬಳಸಲಾಗಿದೆ.
ಇದನ್ನೂ ಓದಿ | Hockey World Cup | ಹಾರ್ದಿಕ್ ಸಿಂಗ್ಗೆ ಗಾಯ, ಹಾಕಿ ವಿಶ್ವ ಕಪ್ನಲ್ಲಿ ಭಾರತ ತಂಡಕ್ಕೆ ಹಿನ್ನಡೆ