Site icon Vistara News

IND vs AUS 2nd ODI: ಭಾರತ-ಆಸೀಸ್​ ದ್ವಿತೀಯ ಪಂದ್ಯದ ಪಿಚ್​ ರಿಪೋರ್ಟ್​, ಸಂಭಾವ್ಯ ತಂಡ

Holkar Cricket Stadium

ಇಂದೋರ್​: ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 1-0 ಮುನ್ನಡೆ ಕಾಯ್ದುಕೊಂಡಿರುವ ಭಾರತ ತಂಡ ಆಸೀಸ್​ ವಿರುದ್ಧ ದ್ವಿತೀಯ(IND vs AUS 2nd ODI) ಪಂದ್ಯವನ್ನಾಡಲು ಸಜ್ಜಾಗಿದೆ. ಉಭಯ ತಂಡಗಳ ಈ ಪಂದ್ಯ ಭಾನುವಾರ ಇಂದೋರ್​ನ ಹೋಲ್ಕರ್ ಕ್ರಿಕೆಟ್ ಸ್ಟೇಡಿಯಂನಲ್ಲಿ(Holkar Cricket Stadium) ನಡೆಯಲಿದೆ. ರಿಪೋರ್ಟ್(Pitch Report)​ ಮತ್ತು ಸಂಭಾವ್ಯ ತಂಡಗಳ(Probable Playing XIs) ಮಾಹಿತಿ ಇಂತಿದೆ.

ಪಿಚ್​ ರಿಪೋರ್ಟ್​

ಹೋಲ್ಕರ್ ಕ್ರಿಕೆಟ್ ಸ್ಟೇಡಿಯಂನ ಪಿಚ್​ ಬ್ಯಾಟರ್‌ಗಳಿಗೆ ಸರ್ಗ. ಇಲ್ಲಿನ ಬಾಂಡರಿ ಗೆರೆಗಳು ಹತ್ತಿರವಾಗಿದ್ದು, ಅಲ್ಲದೆ ಹೆಚ್ಚು ಬೌನ್ಸರ್​ಗಳು ಇರದ ಕಾರಣ ಬ್ಯಾಟರ್​ಗಳಿಗೆ ಹೆಚ್ಚಿನ ರನ್​ಗಳಿಸಲು ಸಾಧ್ಯವಾಗಲಿದೆ. ಹೀಗಾಗಿ ಈ ಮೇಲಾಟ ದೊಡ್ಡ ಮೊತ್ತದಿಂದ ಕೂಡಿರುವ ಸಾಧ್ಯತೆ ಅಧಿಕವಾಗಿದೆ. ಇಲ್ಲಿ ಕೊನೆಯ ಬಾರಿ ಆಡಿದ ಏಕದಿನ ಪಂದ್ಯದಲ್ಲಿ ಗಿಲ್​ ಮತ್ತು ರೋಹಿತ್​ ಶರ್ಮ ಅವರು ಶತಕ ಬಾರಿಸಿ ಮಿಂಚಿದ್ದರು.

ಈ ಮೈದಾನದಲ್ಲಿ ಒಟ್ಟು 6 ಏಕದಿನ ಪಂದ್ಯಗಳು ನಡೆದಿವೆ. ಇದರಲ್ಲಿ 4 ಬಾರಿ ಮೊದಲು ಬ್ಯಾಟಿಂಗ್​ ನಡೆಸಿದ ತಂಡ ಜಯಿಸಿದರೆ, 2 ಬಾರಿ ಚೇಸಿಂಗ್​ ನಡೆಸಿದ ತಂಡ ಗೆದ್ದು ಬೀಗಿದೆ. ಹೀಗಾಗಿ ಟಾಸ್​ ಗೆದ್ದ ತಂಡ ಮೊದಲು ಬ್ಯಾಟಿಂಗ್​ ನಡೆಸುವ ಸಾಧ್ಯತೆ ಅಧಿಕವಾಗಿದೆ. 320 ಇಲ್ಲಿನ ಮೊದಲ ಬ್ಯಾಟಿಂಗ್​ ಸರಾಸರಿ ಮೊತ್ತವಾಗಿದೆ. 267 ದ್ವಿತೀಯ ಬ್ಯಾಟಿಂಗ್​ ಸರಾಸರಿ ಮೊತ್ತವಾಗಿದೆ.

ಇದನ್ನೂ ಓದಿ Varanasi Stadium: ಮೋದಿಗೆ ಟೀಮ್​ ಇಂಡಿಯಾ ಜೆರ್ಸಿ ನೀಡಿ ಗೌರವಿಸಿದ ಸಚಿನ್ ತೆಂಡೂಲ್ಕರ್

ಹವಾಮಾನ ವರದಿ

ಮೊಹಾಲಿಯಲ್ಲಿ ನಡೆದ ಮೊದಲ ಪಂದ್ಯದಕ್ಕೆ ಮಳೆ ಸಣ್ಣ ಪ್ರಮಾಣದಲ್ಲಿ ಅಡ್ಡಿಪಡಿಸಿತ್ತು. ಭಾನುವಾರ ಇಂದೋರ್‌ನಲ್ಲಿ ನಡೆಯುವ ದ್ವಿತೀಯ ಪಂದ್ಯಕ್ಕೆ ಮಳೆ ಸಾಧ್ಯತೆ ಕಡಿಮೆ ಇದ್ದರೂ ಮೋಡ ಕವಿದ ವಾತಾವರಣವ ಇದರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ರಾತ್ರಿಯ ವೇಳೆ ಇಬ್ಬನಿ ಸಮಸ್ಯೆ ಇರುವುದರಿಂದ ಬ್ಯಾಟಿಂಗ್​ ನಡೆಸಲು ಕೂಡ ಇಲ್ಲಿ ಕಷ್ಟಕರ.

ಬಲಾಬಲ

ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಇದುವರೆಗೆ ಏಕದಿನ ಕ್ರಿಕೆಟ್​ ಇತಿಹಾಸದಲ್ಲಿ 147 ಬಾರಿ ಮುಖಾಮುಖಿಯಾಗಿವೆ. ಆಸ್ಟ್ರೇಲಿಯಾ 82 ಪಂದ್ಯಗಳಲ್ಲಿ ಗೆದ್ದರೆ, ಭಾರತ 55 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಇದರಲ್ಲಿ ಒಂದು ಗೆಲುವು ಕಳೆದ ಪಂದ್ಯದಲ್ಲಿ ದಾಖಲಾದ ಗೆಲುವಾಗಿದೆ. 10 ಪಂದ್ಯಗಳು ಫಲಿತಾಂಶ ಕಂಡಿಲ್ಲ.

ಸಂಭಾವ್ಯ ತಂಡ

ಭಾರತ: ಶುಭಮನ್ ಗಿಲ್, ಋತುರಾಜ್ ಗಾಯಕ್ವಾಡ್, ಶ್ರೇಯಸ್ ಅಯ್ಯರ್, ಕೆ.ಎಲ್ ರಾಹುಲ್ (ನಾಯಕ), ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಶಾರ್ದೂಲ್ ಠಾಕೂರ್, ಜಸ್​ಪ್ರೀತ್​ ಬುಮ್ರಾ, ಮೊಹಮ್ಮದ್ ಶಮಿ.

ಆಸ್ಟ್ರೇಲಿಯಾ: ಡೇವಿಡ್ ವಾರ್ನರ್, ಮಿಚೆಲ್ ಮಾರ್ಷ್, ಸ್ಟೀವನ್ ಸ್ಮಿತ್, ಮಾರ್ನಸ್ ಲಬುಶೇನ್, ಕ್ಯಾಮೆರಾನ್ ಗ್ರೀನ್, ಜೋಶ್ ಇಂಗ್ಲಿಸ್ (ವಿಕೆಟ್​ ಕೀಪರ್​), ಮಾರ್ಕಸ್ ಸ್ಟೊಯಿನಿಸ್, ಮ್ಯಾಥ್ಯೂ ಶಾರ್ಟ್, ಪ್ಯಾಟ್ ಕಮ್ಮಿನ್ಸ್ (ನಾಯಕ), ಸೀನ್ ಅಬಾಟ್, ಆಡಮ್ ಝಂಪಾ

Exit mobile version